Advertisement

ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತದಿಂದ ಪರವಾನಗಿ..?

11:54 AM Nov 04, 2021 | Team Udayavani |

ದೇವನಹಳ್ಳಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜಿಲ್ಲಾದ್ಯಂತ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತ ಪರವಾನಗಿ ಮೂಲಕ ಅವಕಾಶ ಕಲ್ಪಿಸಿದೆ. ದೀಪಾವಳಿ ಸಂಭ್ರಮ: ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಪರವಾನಗಿ ನೀಡಿ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಸಾಲು ಸಾಲು ರಜೆಗಳಿಂದ ಕಂಗೆಟ್ಟಿದ್ದ ಪಟಾಕಿ ಮಾರಾಟಗಾರರಿಗೆ ಜಿಲ್ಲಾಡಳಿತ ಬುಧವಾರ ಸಂಜೆ 4ಗಂಟೆಗೆ ಮಾರಾಟ ಮಾಡಲು ಪರವಾನಗಿ ನೀಡಿದೆ. ಈ ಬಾರಿ ಪಟಾಕಿಗಳಲ್ಲಿ ಹಸಿರು ಪಟಾಕಿಯ ಸ್ಟಿಕ್ಕರ್‌ ಅಂಟಿಸಲಾಗಿದೆ. ಸರ್ಕಾರ ಹಸಿರು ಪಟಾಕಿ ಹೊಡೆಯಬೇಕೆಂದು ಹೇಳುತ್ತಾರೆ.

Advertisement

ಹಸಿರು ಪಟಾಕಿ ಮಾರುಕಟ್ಟೆಗಳಿಗೆ ಸರಿಯಾದ ರೀತಿ ಬಂದಿಲ್ಲ. ಹಸಿರು ಪಟಾಕಿ ಕೆಲವೊಂದು ಬಂದಿದೆ. ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಸಡಗರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು ಜನ ಹಬ್ಬದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನಡುವೆ ಪಟಾಕಿ ದರದಲ್ಲಿ ಶೇ.40 ಹೆಚ್ಚಳವಾಗಿದೆ.

ಇದನ್ನೂ ಓದಿ:- ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡಲು ಆಟಗಾರರು ಉತ್ಸುಕರಾಗಿದ್ದಾರೆ: ರೋಹಿತ್ ಶರ್ಮಾ

ಜನಸಾಮಾನ್ಯರಿಗೆ ಪಟಾಕಿ ದರ ಹೆಚ್ಚು ಹೊರೆ ಬೀಳುತ್ತಿದೆ. ದೇವನಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ವೈರಸ್‌ 3ನೇ ಅಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರದ ಆದೇಶದಂತೆ ದೀಪಾವಳಿ ಹಬ್ಬ ಆಚರಿಸುವ ಸಂಬಂಧವಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದ್ದಾರೆ.

 ದೀಪಾವಳಿ ಹಬ್ಬದಂದು ದೇಗುಲಗಳಲ್ಲಿ ಗೋಪೂಜೆ

Advertisement

ದೇವನಹಳ್ಳಿ: ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ದೀಪಾವಳಿ ದಿನದಂದು ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಪೂಜಿಸಲಾಗುವುದು. ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಆರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಲಾಗುವುದು ಹಾಗೂ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿತಿನಿಸು ಮುಂತಾದ ಗೋಗ್ರಾಸವನ್ನು, ಹಸುವಿಗೆ ನೀಡಿ ತಿನ್ನಿಸಿ ಧೂಪ, ದೀಪಗಳಿಂದ ಪೂಜಿಸಿ ನಮಸ್ಕರಿಸುವ ವ್ಯವಸ್ಥೆಯನ್ನು ಬಲಿಪಾಡ್ಯಮಿ ದಿನದಂದು ಸಂಜೆ 5:30 ರಿಂದ 6:30 ರವರೆಗೆ ಗೋಧೋಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಸಲಾಗುವುದು.

ಗೋಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರದಂತೆ ಕ್ರಮವಹಿಸುವುದರ ಜೊತೆಯಲ್ಲಿ ಗೋವುಗಳನ್ನು ದೇವಸ್ಥಾನಕ್ಕೆ ಕರೆತರುವುದು ಹಾಗೂ ಕಳುಹಿಸುವ ಪೂಜೆಯ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ವಿಶೇಷ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾವುದು. ಗೋವುಗಳು ಅಲಭ್ಯವಾದಲ್ಲಿ ಸ್ಥಳೀಯ ಗೋಶಾಲೆ, ಮಠದಲ್ಲಿರುವ ಇಲಾಖೆಯ ಗೋವುಗಳು ಅಥವಾ ಹತ್ತಿರದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಸಂಪರ್ಕಿಸುವುದು ಹಾಗೂ ಪೂಜಾ ಸಂದರ್ಭದಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರಿರಬೇಕು ಎಂದು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 – ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next