Advertisement

Hotel ಬ್ಯುಸಿನೆಸ್‌ಗೆ ಬರಲಿದ್ದಾರೆ ಸಲ್ಲು: ತಾಯಿ ಹೆಸರಲ್ಲಿ ಪರವಾನಗಿ

08:42 PM May 20, 2023 | Team Udayavani |

ಮುಂಬೈ: ಬಾಲಿವುಡ್‌ ತಾರೆಯರು ವಿವಿಧ ಉದ್ದಿಮೆಗಳಲ್ಲಿ ಹೂಡಿಕೆ ಮಾಡುವುದು ಹೊಸ ವಿಚಾರ ಏನೂ ಅಲ್ಲ. ಇದೀಗ ಬಾಲಿವುಡ್‌ ನಟ ಸಲ್ಮಾನ್‌ಖಾನ್‌ ಅವರು ಆ ಸಾಲಿಗೆ ಸೇರಿದ್ದು, ಮುಂಬೈನ ಬಾಂದ್ರಾದಲ್ಲಿ ಸಮುದ್ರಕ್ಕೆ ಮುಖ ಮಾಡಿ 19 ಅಂತಸ್ತುಗಳ ಅದ್ಧೂರಿ ಹೋಟೆಲ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Advertisement

ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪ್ರಸಿದ್ಧವಾಗಿರುವ ಬಾಂದ್ರಾದಲ್ಲಿ ಈ ಬಗ್ಗೆ ಬೃಹನ್ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಪರವಾನಗಿಯನ್ನೂ ಪಡೆದಿದ್ದಾರೆ. ಹೋಟೆಲ್‌ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಸದ್ಯ 69.90 ಮೀಟರ್‌ ಎತ್ತರದ ವಸತಿ ಕಟ್ಟಡವನ್ನು ಸಲ್ಮಾನ್‌ ಖಾನ್‌ ಅವರ ತಾಯಿ ಹೆಸರಿನಲ್ಲಿ ಈಗಾಗಲೇ ಖರೀದಿ ಮಾಡಲಾಗಿದೆ. ಆ ಕಟ್ಟಡವನ್ನು ವಾಣಿಜ್ಯ ಕಟ್ಟಡವನ್ನಾಗಿ ಮರು ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಿದೆ.

ಮೂರು ಹಂತದ ಬೇಸ್‌ಮೆಂಟ್‌, ಒಂದು ಮತ್ತು ಎರಡನೇ ಅಂತಸ್ತಿನಲ್ಲಿ ಕೆಫೆ ಹಾಗೂ ರೆಸ್ಟೋರೆಂಟ್‌, 3ರಲ್ಲಿ ಜಿಮ್‌, 4ನೇ ಅಂತಸ್ತಿನಲ್ಲಿ ಸರ್ವೀಸ್‌ ಹಾಲ್‌, 5 ಮತ್ತು 6 ಸಭಾಂಗಣದಂತೆ ಅಭಿವೃದ್ಧಿ ಪಡಿಸಿ, ನಂತರ 7 ರಿಂದ 19ನೇ ಫ್ಲೋರ್‌ವರೆಗೆ ಹೋಟೆಲ್‌ ಬಳಕೆಗೆ ಬಳಕೆ ಮಾಡಲು ಖಾನ್‌ ಚಿಂತನೆ ನಡೆಸಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next