Advertisement

ಮಂಗಳೂರು: ತಂಬಾಕು ಉತ್ಪನ್ನ ಮಾರಾಟಕ್ಕೆ ಪರವಾನಿಗೆ ಕಡ್ಡಾಯ

11:56 PM Feb 06, 2023 | Team Udayavani |

ಮಂಗಳೂರು: ಸಿಗರೇಟ್‌ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಇನ್ನು ಪರವಾನಿಗೆ ಕಡ್ಡಾಯ ವಾಗಲಿದ್ದು, ಬೇಕಾಬಿಟ್ಟಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ.
ತಂಬಾಕು ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗಿರುವುದರಿಂದ ಮತ್ತು ಇಂತಹ ಉತ್ಪನ್ನಗಳು ಯುವಜನತೆ ಸೇರಿದಂತೆ ಸಾರ್ವಜನಿಕರ ಕೈಗೆ ಸುಲಭ ವಾಗಿ ದೊರೆಯುತ್ತಿರು ವುದರಿಂದ ಇದರ ನಿಯಂತ್ರಣಕ್ಕೆ ಅಬಕಾರಿ ಮಾದರಿಯಲ್ಲಿ ಪರವಾನಿಗೆ ಕಡ್ಡಾಯ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಪರವಾನಿಗೆ ಕಡ್ಡಾಯವಾಗಲಿದೆ.

Advertisement

“ಕೋಟ್ಪಾ’ಕ್ಕಿಂತ ಪರಿಣಾಮಕಾರಿ
ಪ್ರಸ್ತುತ ಕೋಟ್ಪಾ 2003 (ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ) ಜಾರಿಯಲ್ಲಿದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಕಡ್ಡಾಯವಿಲ್ಲ. ಪ್ಯಾಕೆಟ್‌ ಸಿಗರೇಟ್‌ ಮಾತ್ರವೇ ಮಾರಾಟ ಮಾಡಬೇಕು, ಸೂಕ್ತ ಎಚ್ಚರಿಕೆ ಫ‌ಲಕ ಗಳನ್ನು ಅಳವಡಿಸಬೇಕು ಮೊದಲಾದ ನಿಯಮಗಳು ಮಾತ್ರ ಜಾರಿಯಲ್ಲಿವೆ. ಈ ನಿಯಮಗಳನ್ನು ಉಲ್ಲಂ ಸಿದರೆ ಎಫ್ಐಆರ್‌ ದಾಖಲಿಸಿ ಲೈಸನ್ಸ್‌ ರದ್ದು ಮಾಡುವ ಅವಕಾಶವಿದೆ. ಸಾರ್ವಜನಿಕವಾಗಿ ಧೂಮಪಾನ ಮಾಡುವವರಿಂದಲೂ ದಂಡ ವಸೂಲಿ ಮಾಡಬಹುದಾಗಿದೆ. ಆದರೆ ಇದು ತುಂಬಾ ಪರಿಣಾಮಕಾರಿಯಾಗಿಲ್ಲ. ಪರವಾ ನಿಗೆ ಕಡ್ಡಾಯ ನಿಯಮದಿಂದ ಶಾಲಾ ಕಾಲೇಜುಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ.

ವರ್ಷಕ್ಕೆ 10 ಲಕ್ಷ ಜನ ಸಾವು
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಭಾರತದಲ್ಲಿ ವರ್ಷಕ್ಕೆ ಸುಮಾರು 10 ಲಕ್ಷ ಜನರು ತಂಬಾಕಿನ ಪರಿಣಾಮದ ಶ್ವಾಸಕೋಶದ ಕಾನ್ಸರ್‌ನಿಂದ ಮೃತಪಡುತ್ತಿದ್ದಾರೆ. ಇದರಲ್ಲಿ ಶೇ. 90ರಷ್ಟು ಪುರುಷರು, ಶೇ. 70ರಷ್ಟು ಮಂದಿ ಮಹಿಳೆಯರು ಇದ್ದಾರೆ ಎನ್ನುತ್ತಾರೆ ತಜ್ಞರು.

ದಂಡ ಪಾವತಿಸಿ ವ್ಯಾಪಾರ!
ಕೋಟಾ³ ತಂಡವು ನಿಯಮ ಉಲ್ಲಂ ಸುವ ಅಂಗಡಿ ಮಾಲಕರಿಗೆ, ಸಾರ್ವಜನಿಕವಾಗಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುತ್ತಿದೆ. ಆದರೆ ದಂಡ ಪಾವತಿಸಿ ಮತ್ತೆ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ! ಉಡುಪಿ ಜಿಲ್ಲೆಯಲ್ಲಿ 2021-22ರಲ್ಲಿ 45 ಕಡೆ ದಾಳಿ ನಡೆಸಿ 96,250 ರೂ., 2022-23ರಲ್ಲಿ ಇದುವರೆಗೆ 54 ಪ್ರಕರಣಗಳಲ್ಲಿ 1,29,350 ರೂ. ದಂಡ ವಸೂಲಿ ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ 2021-22ರಲ್ಲಿ 904 ಪ್ರಕರಣಗಳಲ್ಲಿ 1,42,160 ರೂ. ಹಾಗೂ 2022-23ರಲ್ಲಿ ಇದುವರೆಗೆ 800 ಪ್ರಕರಣಗಳಲ್ಲಿ 1,17,920 ರೂ. ದಂಡ ವಸೂಲಿ ಮಾಡಲಾಗಿದೆ.

ಬೇಕಾಬಿಟ್ಟಿಯಾಗಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರ ಪರವಾನಿಗೆ ಕಡ್ಡಾಯಗೊಳಿಸುವ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ನಿಯಮಾವಳಿ/ ಆದೇಶ ಶೀಘ್ರ ಕೈಸೇರುವ ನಿರೀಕ್ಷೆ ಇದ್ದು ಬಳಿಕ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯ ಕೋಟ್ಪಾ ಕಾಯಿದೆಯಂತೆ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜನರಲ್ಲಿ ಜಾಗೃತಿ ಕೂಡ ಇನ್ನಷ್ಟು ಹೆಚ್ಚಬೇಕಿದೆ.
– ಡಾ| ಜಗದೀಶ್‌, ಡಾ| ನಾಗರತ್ನಾ ದ.ಕ. ಮತ್ತು ಉಡುಪಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next