Advertisement

ಎಲ್‌ಐಸಿಯಿಂದ ಎರಡು ಐಪಿಒ? 2 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಲು ಚಿಂತನೆ

08:37 PM Aug 14, 2021 | Team Udayavani |

ನವದೆಹಲಿ: “ಇನಿಷಿಯಲ್‌ ಪಬ್ಲಿಕ್‌ ಆಫ‌ರಿಂಗ್‌’ (ಐಪಿಒ) ಮೂಲಕ ಬಂಡವಾಳ ಆಕರ್ಷಿಸಲು ಮುಂದಾಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ), ಎರಡು ಐಪಿಒ ಮಾರ್ಗಗಳನ್ನು ಸೃಷ್ಟಿಸಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

Advertisement

ಐಪಿಒ ಮೂಲಕ 2,000 ಕೋಟಿ ರೂ. ಬಂಡವಾಳ ಸಂಗ್ರಹಿಸಲು ಎಲ್‌ಐಸಿ ಉದ್ದೇಶಿಸಿದೆ. ಆದರೆ, ಇತ್ತೀಚೆಗೆ ಹಲವಾರು ಸಂಸ್ಥೆಗಳು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿದ್ದು, ಅವುಗಳಲ್ಲಿ ಹಲವಾರು ಐಪಿಒಗಳು ತಮಗೆ ಬೇಕಿದ್ದ ನಿರೀಕ್ಷಿತ ಬಂಡವಾಳ ಬಂದ ಕೂಡಲೇ ತಮ್ಮ ವ್ಯವಹಾರ ಸ್ಥಗಿತಗೊಳಿಸಿವೆ. ಇನ್ನೂ ಕೆಲವು ಸದ್ಯದಲ್ಲೇ ಸ್ಥಗಿತಗೊಳ್ಳಲಿವೆ. ಅಲ್ಲಿಗೆ, ಹೂಡಿಕೆದಾರರ ಹಣ ಈಗಾಗಲೇ ಈ ಕಂಪನಿಗಳಿಗೆ ಹರಿದುಹೋಗಿದೆ.

ಹಾಗಾಗಿ, ಒಂದೇ ಐಪಿಒನಿಂದ 2,000 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಸಂಗ್ರಹಣೆ ಕಷ್ಟವಾಗಬಹುದು ಎಂದೆಣಿಸಿರುವ ಎಲ್‌ಐಸಿ ಆಡಳಿತ ಮಂಡಳಿ, ಎರಡು ಐಪಿಒಗಳ ಮೂಲಕ ಬಂಡವಾಳ ಸಂಗ್ರಹಣೆ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ :ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ 9, 10 , ಪಿಯುಸಿ ತರಗತಿ ಪ್ರಾರಂಭ

Advertisement

Udayavani is now on Telegram. Click here to join our channel and stay updated with the latest news.

Next