Advertisement

ಎಲ್‌ಐಸಿ ಆದಾಯದಲ್ಲಿ ಶೇ. 6ರಷ್ಟು ಏರಿಕೆ

08:23 PM Jun 30, 2022 | Team Udayavani |

ಮುಂಬೈ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಇದೇ ವರ್ಷ ಮಾ. 31ಕ್ಕೆ ಮುಕ್ತಾಯಗೊಂಡ 2021-22ನೇ ಆರ್ಥಿಕ ವರ್ಷದಲ್ಲಿ 4,27419 ಕೋಟಿ ರೂ. ಆದಾಯವನ್ನು ಗಳಿಸಿದೆ. 2021ರ ಮಾ. 31ಕ್ಕೆ ಮುಕ್ತಾಯವಾಗಿದ್ದ 2020-21ರಲ್ಲಿ ನಿಗಮದ ಆದಾಯ 4,02,844 ಕೋಟಿ ರೂ.ಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ, 2021-22ರಲ್ಲಿ ನಿಗಮದ ಆದಾಯ ಶೇ. 6.1ರಷ್ಟು ಹೆಚ್ಚಾಗಿದೆ ಎಂದು ಈ ಕುರಿತಂತೆ ಹೊರಡಿಸಲಾದ ಪ್ರಕಟಣೆಯಲ್ಲಿ ಎಲ್‌ಐಸಿ ತಿಳಿಸಿದೆ.

Advertisement

2021-22ರಲ್ಲಿ ಬಂದಿರುವ ಆದಾಯದಲ್ಲಿ ತೆರಿಗೆ ಪಾವತಿಸಿದ ನಂತರದ ಲಾಭಾಂಶ (ಪಿ.ಎ.ಟಿ) 4,043.12 ಕೋಟಿ ರೂ.ಗಳಷ್ಟಾಗಿದೆ. 2020-21ರಲ್ಲಿ ಈ ಲಾಭಾಂಶ 2,900.57 ಕೋಟಿ ರೂ.ಗಳಷ್ಟಿತ್ತು. ಅಲ್ಲಿಗೆ, ಕಂಪನಿಯ ಪಿ.ಎ.ಟಿ. ಶೇ. 39.39ರಷ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

2021-22ರಲ್ಲಿ ಬಂದಿರುವ ಪಿ.ಎ.ಟಿ. ಲಾಭದ ಆಧಾರದಲ್ಲಿ ಪ್ರತಿ ಷೇರಿನ ಮೇಲೆ 1.50 ರೂ.ಗಳಷ್ಟು ಡಿವಿಡೆಂಡ್‌ ನೀಡಲು ಎಲ್‌ಐಸಿ ನಿಗಮದ ನಿರ್ದೇಶಕರ ಮಂಡಳಿ ತೀರ್ಮಾನಿಸಿದೆ.

ಅದರಂತೆ, ಲಾಭಾಂಶದ ಶೇ. 23.46ರಷ್ಟು ಮೊತ್ತ, ಅಂದರೆ, 948.75 ಕೋಟಿ ರೂ.ಗಳಷ್ಟನ್ನು ಡಿವಿಡೆಂಡ್‌ ಪೇಔಟ್‌ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ಎಲ್‌ಐಸಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next