Advertisement

ವಿದೇಶಿಗರಿಗೆ ಎಲ್‌ಐಸಿ ಶೇ.20 ಷೇರು ಮಾರಾಟ?

12:00 PM Sep 09, 2021 | Team Udayavani |

ನವದೆಹಲಿ: ಸರ್ಕಾರಿ ಸ್ವಾಮ್ಯದ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಶೇ.20ರಷ್ಟು ಷೇರು ಗಳ ಖರೀದಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Advertisement

ಇದನ್ನೂ ಓದಿ:ಕಲಬುರಗಿಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ: ಸಿಎಂ ಬೊಮ್ಮಾಯಿ

ಎಲ್‌ಐಸಿ ಖಾಸಗೀಕರಣ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಸರ್ಕಾರ,ಕಂಪನಿಯ ಷೇರುಗಳ ಮಾರಾಟಕ್ಕೆ ಮುಂದಾ ಗಿದ್ದು, ಶೇ.20ರಷ್ಟು ಷೇರುಗಳನ್ನು ವಿದೇಶಿ ಹೂಡಿಕೆದಾರರಿಗೆ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಎಲ್‌ಐಸಿ ಷೇರುಗಳ ಮಾರಾಟದಿಂದ 90ಕೋಟಿ ರೂ.ಗಳನ್ನು ಗಳಿಸುವುದು ಸರ್ಕಾರದ ಉದ್ದೇಶ. ಈವರೆಗೆ ವಿದೇಶಿ ಹೂಡಿಕೆದಾರರಿಗೆ ಖಾಸಗಿ ವಿಮಾ ಕಂಪನಿಗಳಲ್ಲಿ ಶೇ.74ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಶೇ.20ರಷ್ಟು ಹೂಡಿಕೆ ಮಾಡಲು ಅವಕಾಶವಿತ್ತು. ಆದರೆ, ಎಲ್‌ಐಸಿ ಷೇರುಗಳನ್ನು ಹೊಂದಲು ಅವಕಾಶವಿರಲಿಲ್ಲ. ಈ ನಡುವೆ, ಎಲ್‌ಐಸಿ ಆಂಶಿಕ ಬಂಡವಾಳ ಹಿಂಪಡೆಯುವ ಪ್ರಸ್ತಾಪ ಜಾರಿ ಮಾಡಲು ಹತ್ತು ಮಧ್ಯವರ್ತಿ ಸಂಸ್ಥೆಗಳನ್ನು ಸರ್ಕಾರ ನೇಮಕ ಮಾಡಲಿದೆ. ಈ ಬಗ್ಗೆಕೇಂದ್ರ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ “ಸಿಎನ್‌ಬಿಸಿ-ಟಿವಿ18′ ವರದಿ ಮಾಡಿದೆ.

ಇಂದು 70 ಸಚಿವರ ಕಾಶ್ಮೀರ ಪ್ರವಾಸ
ಜಮ್ಮು:ಕೇಂದ್ರ ಸರ್ಕಾರದ ವಿಶೇಷ ಜನ ಸಂಪರ್ಕ ಅಭಿಯಾನದ ಅಂಗವಾಗಿ ಕೇಂದ್ರದ 70 ಸಚಿವರು ಗುರುವಾರದಿಂದ ಜಮ್ಮು ಮತ್ತುಕಾಶ್ಮೀರ ಪ್ರವಾಸಕೈಗೊಳ್ಳಲಿದ್ದಾರೆ. ಸೆ.9 ರಿಂದ ಅಕ್ಟೋಬರ್‌5ರವರೆಗೆ ಈ ಅಭಿಯಾನ ನಡೆಯಲಿದ್ದು ಸಚಿವರು ಹಂತ ಹಂತವಾಗಿ ತೆರಳಿ ಕಣಿವೆ ರಾಜ್ಯದ ಜನರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Advertisement

ಮೊದಲ ಹಂತದಲ್ಲಿ ಸಚಿವರಾದ ಸ್ಮತಿ ಇರಾನಿ, ಅರ್ಜುನ್‌ ಮುಂಡಾ ಸೇರಿ 28 ಸಚಿವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಜನರಕುಂದುಕೊರತೆಗಳನ್ನು ಆಲಿಸಿ, ಕೇಂದ್ರ ಸರ್ಕಾರಕೈಗೊಂಡಿರುವ ಯೋಜನೆಗಳಕುರಿತು ಮಾಹಿತಿ ನೀಡಲಿದ್ದಾರೆ. ಜತೆಗೆ,370ನೇ ವಿಧಿ ರದ್ದತಿ ಬಳಿಕ ಜನರ ಹಕ್ಕುಗಳನ್ನು ಕಸಿಯಲಾಗುತ್ತದೆ ಎಂದು ಪ್ರತಿಪಕ್ಷಗಳು ಭಯ ಹುಟ್ಟಿಸಿದ್ದು, ಆ ಭಯ ಹೋಗಲಾಡಿಸುವ ಪ್ರಯತ್ನವನ್ನೂ ಸಚಿವರು ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next