ಇಂದಿನಿಂದ ಆರು ದಿನಗಳವರೆಗೆ (ಮೇ 4 – ಮೇ 9) ಬಹುನಿರೀಕ್ಷಿತ ಭಾರತೀಯ ಜೀವಿ ವಿಮಾ ನಿಗಮದಲ್ಲಿ (ಎಲ್‌ಐಸಿ) ಸಾರ್ವಜನಿಕರಿಂದ “ಆರಂಭಿಕ ಹೂಡಿಕೆ’ಗೆ (ಐಪಿಒ) ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಐಪಿಒ ಬಗ್ಗೆ ನೆನಪಿಟ್ಟುಕೊಳ್ಳಬಹುದಾದ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಪ್ರತಿ ಷೇರಿನ ಬೆಲೆ 902ರಿಂದ 949 ರೂ. ಎಂದು ನಿಗದಿ ಮಾಡಲಾಗಿದೆ. ಎಲ್‌ಐಸಿ ಪಾಲಿಸಿದಾರರಿಗೆ ಪ್ರತಿ ಷೇರಿನ ಮೇಲೆ 60 ರೂ. ರಿಯಾಯಿತಿ ಸಿಗಲಿದೆ. ಗರಿಷ್ಠ 2 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಬಹುದು.
2 ಲಕ್ಷಕ್ಕಿಂತ ಹೆಚ್ಚಿನ ಹೂಡಿಕೆಗೆ ಏನು ಮಾಡಬೇಕು?
ಎಲ್‌ಐಸಿ ಪಾಲಿಸಿದಾರರಿಗೆ 2 ಲಕ್ಷ ರೂ.ವರೆಗೆ ಮಾತ್ರ ಹೂಡಿಕೆಗೆ ಅವಕಾಶವಿದೆ. ಅದರ ಮೇಲ್ಪಟ್ಟು ಮಾಡಲಚ್ಛಿಸುವವರು ರಿಟೇಲ್ ಮಾರ್ಗದಲ್ಲಿ ಎಲ್‌ಐಸಿ ಐಪಿಒನಲ್ಲಿ ಹೂಡಿಕೆ ಮಾಡಬಹುದು. ರಿಟೇಲ್ ಖರೀದಿದಾರರಿಗೆ ಪ್ರತಿ ಷೇರಿನ ಮೇಲೆ 45 ರೂ. ರಿಯಾಯಿತಿ ಇರುತ್ತದೆ.
ನಿಬಂಧನೆ
ಎಲ್‌ಐಸಿ ಐಪಿಒದಲ್ಲಿ ಹೂಡಿಕೆ ಮಾಡುವ ಪಾಲಿಸಿದಾರರು ಡಿಮ್ಯಾಟ್ ಖಾತೆ ಹೊಂದಿರಬೇಕು. ಈ ಖಾತೆಗೆ ಜೋಡಿಸಲ್ಪಟ್ಟಿರುವ ಪ್ಯಾನ್ ಸಂಖ್ಯೆ, ಪಾಲಿಸಿದಾರನು ತಾನು ಪಾಲಿಸಿಗಳಿಗೆ ಜೋಡಿಸಲ್ಪಟ್ಟಿರುವ ಪ್ಯಾನ್ ಸಂಖ್ಯೆ- ಇವೆರಡೂ ಒಂದೇ ಆಗಿರಬೇಕು.
Related Articles
ವಿಶೇಷ ಅನುಕೂಲ
ಒಂದೊಮ್ಮೆ ಎಲ್‌ಐಸಿ ಪಾಲಿಸಿಗಳು ಮೆಚೂರಿಟಿಗೊಂಡಿದ್ದರೆ, ಪಾಲಿಸಿಗಳನ್ನು ಸರೆಂಡರ್ ಮಾಡಿದ್ದರೆ ಅಥವಾ ಪಾಲಿಸಿದಾರ ಅಕಾಲ ಮೃತ್ಯವಿಗೆ ಈಡಾಗಿ ಪಾಲಿಸಿಯ ಲ್ಯಾಪ್ಸ್ ಆಗಿದ್ದರೆ ಅಂಥ ಪಾಲಿಸಿಗಳನ್ನು ಬಳಸಿಯೂ ಐಪಿಒ ಷೇರು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಯಾರಿಗೆ ಹೂಡಿಕೆಗೆ ಅವಕಾಶವಿಲ್ಲ?
– ಎಲ್‌ಐಸಿ ಪಾಲಿಸಿದಾರರಾಗಿರುವ ಅನಿವಾಸಿ ಭಾರತೀಯರಿಗೆ.
– ಗ್ರೂಪ್ ವಿಮೆಗಳನ್ನು ಕೊಂಡಿರುವವರಿಗೆ.