ನವ ದೆಹಲಿ : ದಕ್ಷಿಣ ಕೊರಿಯಾದ ಮೊಬೈಲ್ ಫೋನ್ ದೈತ್ಯ ಎಲ್ ಜಿ ಎಲೆಕ್ಟ್ರಾನಿಕ್ಸ್ ತನ್ನ ಸ್ಮಾರ್ಟ್ ಫೋನ್ ಗಳ ವ್ಯಾಪಾರ ವಹಿವಾಟನ್ನು ಜಗತ್ತಿನಾದ್ಯಂತ ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ವರದಿಯೊಂದು ತಿಳಿಸಿದೆ.
ಓದಿ : ನಿಮಗಿದು ಗೊತ್ತೇ : ಈ ಮೊಲಗಳೇಕೆ ಮುಂಗಾಲಿನಲ್ಲಿ ನಡೆಯುತ್ತವೆ!
ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆಗುತ್ತಿರುವ ತೀವ್ರ ಪೈಪೋಟಿ ಹಾಗೂ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಗಳ ಆಗಮನದಿಂದಾಗಿ ಎಲ್ ಜಿ ಸ್ಮಾರ್ಟ್ ಫೋನ್ ಗಳ ವ್ಯವಹಾರಕ್ಕೆ ಹೊಡೆತ ಬಿದ್ದಿದ್ದು, ಕಳೆದ ಆರು ವರ್ಷಗಳಲ್ಲಿ 4.5 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದ ಕಾರಣದಿಂದಾಗಿ ಕಂಪೆನಿ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಎಲ್ ಜಿ ಇತರೆ ಸ್ಮಾರ್ಟ್ ಫೋನ್ ಕಂಪೆನಿಗಳೊಂದಿಗೆ ವಿಲೀನ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರೂ ಕೂಡ ಪ್ರಯತ್ನ ಫಲಿಸದ ಕಾರಣ ಹಾಗೂ ಎಲ್‌ಜಿ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಭಾರೀ ನಷ್ಟದಿಂದ ಉತ್ಪನ್ನ ಮಾರಾಟವನ್ನು ಕೊನೆಗೊಳಿಸಲು ಕಂಪೆನಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಓದಿ : ಡಿಜಿಟಲ್ ಲೋಕಕ್ಕೆ ಪ್ರೇಮಲೋಕದ ದೊರೆ ರವಿಚಂದ್ರನ್ ಎಂಟ್ರಿ..!