ಎಲ್‌ಜಿ ಕಂಪೆನಿಯ ವಿ40 ಥಿನ್ ಕ್ಯೂ ಮೊಬೈಲ್ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 6.4 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಫೋನ್‌ನ ಸ್ಕ್ರೀನ್ ರೆಸಲ್ಯೂಷನ್ 1,440×3120 ಆಗಿದೆ. ಎಲ್‌ಜಿ ವಿ40 ಥಿನ್ ಕ್ಯೂ ಸ್ಮಾರ್ಟ್ ಫೋನ್ ಆ್ಯಂಡ್ರಾಯ್ಡ ವಿ8.1 ಸಿಸ್ಟಮ್‌ನ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಇದರ ಪವರ್ ಸಪ್ಲೆ„ ಒಕ್ಟಾಕೋರ್ ಪ್ರೊಸೆಸರ್ ಮೂಲಕ ನಡೆಯುತ್ತಿದ್ದು, 6 ಜಿಬಿ ರ್ಯಾಮ್ ಅನ್ನು ಇದು ಒಳಗೊಂಡಿದೆ.
ಇದರ ಬ್ಯಾಟರಿ ಸಾಮರ್ಥ್ಯವು 3,300 ಎಂಎಎಚ್ ಪವರ್ ಅನ್ನು ಹೊಂದಿದೆ. ಡಬಲ್ ಕೆಮರಾ ಹೊಂದಿರುವ ಎಲ್‌ಜಿ ವಿ40 ಥಿನ್ ಕ್ಯೂನಲ್ಲಿ 12 ಹಾಗೂ 16 ಮೆಗಾಪಿಕ್ಸೆಲ್‌ನ ಬ್ಯಾಕ್ ಕೆಮರಾ ಹಾಗೂ 12 ಮೆಗಾಪಿಕ್ಸೆಲ್‌ನ ಫ್ರೆಂಟ್ ಕೆಮರಾ ಹೊಂದಿದೆ. ಇತರ ಸೆನ್ಸಾರ್‌ಗಳಾದ ಪ್ರಾಕ್ಸಿಮಿಟಿ ಸೆನ್ಸಾರ್, ಆಕ್ಸೆಲರೋ ಮೀಟರ್, ಕೋಂಪಸ್, ಗೈರೋ ಸ್ಕೋಪ್‌ಗ್ಳು ಇದರಲ್ಲಿ ಲಭ್ಯವಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನೂ ಇದು ಹೊಂದಿದೆ. 128 ಜಿಬಿ ಇಂಟರ್‌ನಲ್ ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದ್ದು, ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕೆಂದಿದ್ದರೆ ಎಸ್‌ಡಿ ಕಾರ್ಡ್ ಹಾಕಿ ವಿಸ್ತರಿಸಬಹುದಾಗಿದೆ.
ಎಲ್‌ಜಿ ಕಂಪೆನಿ ತನ್ನ ಪ್ರತಿ ಉತ್ಪನ್ನಗಳನ್ನು ತಯಾರಿಸುವಾಗಲೂ ಅದರ ವಿನ್ಯಾಸದಲ್ಲಿ ಹೊಸತನವನ್ನು ಮೂಡಿಸಲು ಪ್ರಯತ್ನಿಸುತ್ತದೆ. ಎಲ್‌ಜಿ ವಿ40 ಥಿನ್ ಕ್ಯೂ ಫೋನ್ ಕೂಡ ವಿಭಿನ್ನ ಶೈಲಿಯಲ್ಲಿ ತಯಾರಾಗಿದೆ. ಮೆಟಲ್ ಫ್ರೆಮ್ ಹಾಗೂ ಗ್ಲಾಸ್ ಬ್ಯಾಕ್ ಈ ಫೋನ್‌ಗೆ ಹೊಸ ಲುಕ್ ನೀಡಿದೆ. ವೋಲ್ಯಮ್ ಬಟನ್ ಫೋನ್‌ನ ಎಡಬದಿಯಲ್ಲಿದ್ದರೆ, ಸಿಮ್ ಟ್ರೇ ಹಾಗೂ ಆನ್ ಬಟನ್‌ಗಳು ಫೋನ್‌ನ ಬಲ ಬದಿಯಲ್ಲಿ ಇವೆ. ಈ ಫೋನ್‌ನ ಜತೆ ಹೆಡ್‌ಫೋನ್ ಕೂಡ ಲಭ್ಯವಿದ್ದು, ಕನೆಕ್ಟರ್ ಫೋನ್‌ನ ಕೆಳಭಾಗದಲ್ಲಿದೆ.
ಫೋನ್ ಅಳತೆಯಲ್ಲಿ ದೊಡ್ಡದಾಗಿದ್ದರೂ ಒಂದು ಕೈಯಲ್ಲಿ ಹಿಡಿದು ಕಾರ್ಯ ನಿರ್ವಹಿಸಲು ಸುಲಭವಾಗುವಂತಿದೆ. ಧೂಳು ಮತ್ತು ನೀರಿನಿಂದ ಫೋನ್ ಸಂರಕ್ಷಣೆ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ಇದರ ಎದರು ಮತ್ತು ಹಿಂಭಾಗಕ್ಕೆ ಗೊರಿಲ್ಲ ಗ್ಲಾಸ್‌ನ ಸಂರಕ್ಷಣೆ ಇದೆ. ಸದ್ಯ ಈ ಫೋನ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ.