ರಾಯ್ಪುರ: “50 ಕೋಟಿ ರೂ. ಕೊಡದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಲಿದ್ದೀರಿ’ ಎಂದು ಉದ್ಯಮಿ ನವೀನ್ ಜಿಂದಾಲ್ ಅವರಿಗೆ ಕೈದಿಯೊಬ್ಬ ಪತ್ರ ಬರೆದಿದ್ದಾನೆ.
ಛತ್ತೀಸಗಡದ ಬಿಲಾಸ್‌ಪುರ್ ಸೆಂಟ್ರಲ್ ಜೈಲಿನಲ್ಲಿರುವ ಕೈದಿ ಈ ಕೃತ್ಯವೆಸಗಿದ್ದಾನೆ. ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಕಳೆದ ವಾರ ಜಾರ್ಸುಗುಡ ಜಿಲ್ಲೆಯ ಪತ್ರಪಾಲಿ ಗ್ರಾಮದಲ್ಲಿರುವ ಜಿಂದಾಲ್ ಉಕ್ಕು ಮತ್ತು ಇಂಧನ ಲಿ.(ಜಿಎಸ್‌ಪಿಎಲ್) ಫ್ಯಾಕ್ಟರಿಗೆ ಪೋಸ್ಟ್ ಮೂಲಕ ಬೆದರಿಕೆ ಪತ್ರ ಬಂದಿದೆ.
ಕೆಲವು ದಿನಗಳ ಹಿಂದೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೈದಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಮಾಡಿ 100 ಕೋಟಿ ರೂ.ನೀಡದಿದ್ದರೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದ.