ಬೆಂಗಳೂರು: ಜಿಎಸ್‌ಟಿ ಪರಿಹಾರವನ್ನು ಇನ್ನೂ 3 ವರ್ಷಗಳ ಕಾಲ ಮುಂದುವರಿಸುವಂತೆ ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2 ಬಾರಿ ದಿಲ್ಲಿಗೆ ಹೋದಾಗಲೂ ಜಿಎಸ್‌ಟಿ ಪರಿಹಾರದ ಬಗ್ಗೆ ಮನವಿ ಮಾಡಿದ್ದೇನೆ. ಕೇಂದ್ರ ಹಣಕಾಸು ಸಚಿವರು ಬೆಂಗಳೂರಿಗೆ ಬಂದಾಗಲೂ ಮನವಿ ಮಾಡಿದ್ದೇನೆ.
ಜಿಎಸ್‌ಟಿ ನಷ್ಟ ಪರಿಹಾರ ಸೇರಿದಂತೆ 2018-19ರಲ್ಲಿ 52,167 ಕೋಟಿ, 2019-20ರಲ್ಲಿ 57,522 ಕೋಟಿ., 2020-21ರಲ್ಲಿ 64,527 ಕೋಟಿ, 2021-22ರಲ್ಲಿ 70,108 ಕೋಟಿ ರೂ. ಜಿಎಸ್‌ಟಿ ರಾಜ್ಯದಿಂದ ಸಂಗ್ರಹವಾಗಿದೆ.
ಇದನ್ನೂ ಓದಿ:ಗುಪ್ತಚರ ವಿಭಾಗಕ್ಕೆ ವಿಶೇಷ ನೇಮಕಾತಿ: ಆರಗ ಜ್ಞಾನೇಂದ್ರ
ಕೇಂದ್ರ ಸರಕಾರದಿಂದ ತೆರಿಗೆ ಹಂಚಿಕೆ 2018-19ರಲ್ಲಿ 35,895 ಕೋಟಿ, ಕೇಂದ್ರ ಸರಕಾರದ ಸಹಾಯಧನ 14,727 ಕೋಟಿ, 2019-20ರಲ್ಲಿ ತೆರಿಗೆ ಹಂಚಿಕೆ 30,919 ಕೋಟಿ, ಸಹಾಯಧನ 19,983 ಕೋಟಿ, 2020-21ರಲ್ಲಿ ತೆರಿಗೆ ಹಂಚಿಕೆ 21,694 ಕೋಟಿ ಮತ್ತು ಸಹಾಯಧನ 16,287 ಕೋಟಿ ರೂ. ಹಂಚಿಕೆಯಾಗಿದೆ ಎಂದು ಹೇಳಿದರು.