ಕೋರಿದೆ. ಕೇಂದ್ರ ಸೇವೆಯ ನಿಯೋಜನೆಗೆ ಸಂಬಂಧಿಸಿದಂತೆ 1,051 ಹುದ್ದೆಗಳ ಪೈಕಿ 493ನ್ನು ಐಎಎಸ್ ಅಧಿಕಾರಿಗಳಿಗೆ ಮೀಸಲು ಇರಿಸಲಾಗಿದೆ. ಅದನ್ನು ಭರ್ತಿ ಮಾಡಿದ ಬಳಿಕ 558 ಹುದ್ದೆಗಳು ಮತ್ತೂ ಉಳಿದುಕೊಳ್ಳುತ್ತವೆ. ಕರ್ನಾಟಕ 44 ಅಧಿಕಾರಿಗಳ
ಸ್ಥಾನದಲ್ಲಿ 19, ಮಹಾರಾಷ್ಟ್ರ 66 ರ ಪೈಕಿ 20 ಅಧಿಕಾರಿಗಳನ್ನು ನಿಯೋಜಿಸಿದೆ.
Advertisement
ಐಎಎಸ್ ಅಧಿಕಾರಿಗಳ ವರ್ಗ: ರಾಜ್ಯ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಡಾ.ಕೆ.ಜಿ.ಜಗದೀಶ್ ಅವರನ್ನು ಕಾರ್ಮಿಕ ಇಲಾಖೆ ಆಯುಕ್ತರಾಗಿ, ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಪ್ರಸನ್ನ ಕುಮಾರ್ ಅವರು ಕೆಪಿಎಸ್‌ಸಿ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನಿಭಾಯಿಸಲಿದ್ದಾರೆ.