Advertisement
ಗುರುವಾರವೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪನಿರ್ದೇಶಕರು ಸಹಿತ ಜಿಲ್ಲೆಯ ಏಳು ಸಹಾಯಕ ಕೃಷಿ ನಿರ್ದೇಶಕರನ್ನು ಕರೆಸಿ ಊಟಕ್ಕೂ ಬಿಡದೆ ಸು ದೀರ್ಘ ನಾಲ್ಕು ಗಂಟೆ ವಿಚಾರಣೆ ನಡೆಸಿದರು. ಸಿಐಡಿ ಅ ಧಿಕಾರಿಗಳ ಡ್ರಿಲ್‌ಗೆ ಕೃಷಿ ಅ ಧಿಕಾರಿಗಳು ಸುಸ್ತಾಗಿದ್ದಾರೆ.
ಅಂಚೆ ಸಿಬಂದಿ ವಿಚಾರಣೆ ಮೈಸೂರಿನ ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿಯಿಂದ ದೂರು ಅರ್ಜಿ ಹೋಗಿರುವ ಹಿನ್ನೆಲೆಯಲ್ಲಿ ಅಂಚೆ ಕಚೇರಿಯ ಸಿಬಂದಿಯನ್ನು ವಿಚಾರಣೆ ಮಾಡಲಾಯಿತು. ಮೈಸೂರಿನಿಂದ ಮಂಡ್ಯದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆಸಿಕೊಂಡ ಸಿಐಡಿ ಅ ಧಿಕಾರಿಗಳು ಕೆಲವು ತಾಸು ವಿಚಾರಣೆ ನಡೆಸಿದರು. ಅನಂತರ ಪತ್ರವೊಂದಕ್ಕೆ ಸಿಬಂದಿಯಿಂದ ಸಹಿ ಹಾಕಿಸಿಕೊಂಡು ಕಳುಹಿಸಿದರು.