Advertisement
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮೈಸೂರಿನ ಸಂವಹನ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರೊ| ಬಿ. ಸೋಮಶೇಖರಪ್ಪನವರ ವಿಶ್ವಬಂಧು, ಡಾ| ಚಂದ್ರಶೇಖರಯ್ಯನವರ ಇಂಗ್ಲಿಷ್ ಭಾಷೆಯ ಗಾಡ್ ಆಫ್ ದಿ ಲೆಸ್ ಫಾಚೂನೆಟ್… ಕಾದಂಬರಿ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
Related Articles
Advertisement
ತಮಗೆ ತಿಳಿದಿರುವಂತೆ ವಿಶ್ವಬಂಧು ಮರುಳಸಿದ್ಧರು ಹೆಚ್ಚಿನ ಅಧ್ಯಯನ ಮಾಡಿದವರಲ್ಲ. ಅವರು ನಾಡಿಗಿಂತಲೂ ಕಾಡಿನಲ್ಲೇ ಹೆಚ್ಚಿನ ಸಂಪರ್ಕ ಹೊಂದಿದವರು. ಜನರಲ್ಲಿ ವಾಮಾಚಾರವನ್ನ ಬಿತ್ತುತ್ತಿದ್ದ ರಸಸಿದ್ಧರ ಮನ ಪರಿವರ್ತನೆಗೆ ಶ್ರಮಿಸಿದವರು. ಅಂತಹ ಮಹಾನ್ ಶಕ್ತಿಯ ಬಗ್ಗೆ ಏಕಕಾಲಕ್ಕೆ ಎರಡು ಕಾದಂಬರಿ ಲೋಕಾರ್ಪಣೆಗೊಳ್ಳುತ್ತಿರುವುದು ತಮಗೆ ಹೆಚ್ಚಿನ ಆಶ್ಚರ್ಯ ಉಂಟು ಮಾಡುತ್ತಿದೆ ಎಂದು ತಿಳಿಸಿದರು.
ವಿಶ್ವಬಂಧು ಮರುಳಸಿದ್ಧರು ಕೆಳಸ್ತರದಿಂದ ಬಂದವರು ಮಾತ್ರವಲ್ಲ ಅನೇಕಾನೇಕರ ಉಪೇಕ್ಷೆಗೆ ಒಳಗಾದವರು. ಹಾಗಾಗಿಯೇ ಅವರ ಕುರಿತಂತೆ ಹೆಚ್ಚಿನ ಸಾಹಿತ್ಯ ಹೊರ ಬರಲಿಲ್ಲ. ಹೆಚ್ಚಿನದ್ದಾಗಿ ಮಾತನಾಡಲೂ ಇಲ್ಲ. ವಿಶ್ವಬಂಧು ಮರುಳಸಿದ್ಧರು 68 ಸಾವಿರ ವಚನಗಳನ್ನ ನೆಲಮೂಲ ಭಾಷೆಯಲ್ಲಿ ಬರೆದವರು.
ಅವರಲ್ಲಿ ಪುಸ್ತಕದ ಜ್ಞಾನಕ್ಕಿಂತೂ ಮಸ್ತಕದ ಜ್ಞಾನವೇ ಹೆಚ್ಚಾಗಿತ್ತು. ತಮ್ಮ ಜೀವಿತಾವಧಿಯುದ್ದಕ್ಕೂ ಸಮಾಜದ ಅಂಕುಡೊಂಕು ತಿದ್ದುವುದಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡವರು ಎಂದು ತಿಳಿಸಿದರು. ವಿಶ್ವಬಂಧು ಮರುಳಸಿದ್ಧರು ಸಮಾಜದಲ್ಲಿನ ಜನರ ಹಾದಿ ತಪ್ಪಿಸುವ ಕೆಲಸ ಮಾಡುವರನ್ನು ಸರಿಪಡಿಸುವ ಕೆಲಸ ಮಾಡಿದವರು. ಅಂತಹ ಕೆಲಸವನ್ನೇ ಈಗ ನಾವೆಲ್ಲರೂ ಮಾಡಬೇಕಿದೆ.
ವಿಶ್ವಬಂಧು ಮರುಳಸಿದ್ಧರು ಬಾಲ್ಯದಲ್ಲಿ ದನಕರು ಕಾಯುತ್ತಾ, ಪಕ್ಷಿ, ಪ್ರಾಣಿಗಳೊಂದಿಗೆ ಬಾಳಿದವರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮಾರಿಜಾತ್ರೆಯಲ್ಲಿನ ಮೂಕಪ್ರಾಣಿಗಳ ಬಲಿಯನ್ನ ವಿರೋಧಿಸುವ ಮೂಲಕ ಹೋರಾಟ ಪ್ರಾರಂಭಿದವರು. ವಿಶ್ವಬಂಧು ಮರುಳಸಿದ್ಧರು ಅಂದೇ ಮಾರಿಹಬ್ಬದ ವಿರುದ್ದ ಧ್ವನಿ ಎತ್ತಿದವರು. ನಾವು ಇಂದು ಸಹ ಅದೇ ಕೆಲಸ ಮಾಡುತ್ತಿದ್ದೇವೆದು ತಿಳಿಸಿದರು.