ಕೋಲಾರ: ನಾನು ಹಳೆಯದನ್ನು ಮರೆತಿದ್ದೇನೆ. ಗುಂಪುಗಾರಿಕೆ ಬಿಟ್ಟು ಒಟ್ಟಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರು ರಮೇಶ್‌ಕುಮಾರ್ ನೇತೃತ್ವದ ಘಟಬಂಧನ್ ನಾಯಕರುಗಳ ಹೆಸರು ಹೇಳದೆ ಪರೋಕ್ಷವಾಗಿ ಕರೆ ನೀಡಿದರು.
ಡಿಸೆಂಬರ್ ತಿಂಗಳ ಕೊನೆ ವಾರದಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಸಮಾವೇಶ ಮಾಡುವ ಉದ್ದೇಶದಿಂದ ಸೋಮವಾರಕೆ.ಎಚ್.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿ ಬಳಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಕ್ಷದಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಾ, ಒಗ್ಗಟ್ಟು ಮೂಡಿಸದೇ ಕೆಲವರು ಪ್ರತ್ಯೇಕಸಭೆಗಳನ್ನು ನಡೆಸುತ್ತಿರುವುದರಿಂದ ಪಕ್ಷದಸಂಘಟನೆಗೆ ಹಾಗೂ ಪಕ್ಷದ ಅಭ್ಯರ್ಥಿಗಳಗೆಲುವಿಗೆ ತೊಂದರೆಯಾಗಲಿದೆ. ಇದನ್ನುಅರ್ಥ ಮಾಡಿಕೊಂಡು, ಇನ್ನು ಮುಂದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಗೊಂಡು ಸಭೆಗಳನ್ನು ನಡೆಸುವಂತೆ ಎಚ್ಚರಿಕೆ ನೀಡಿದರು.
ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದರೆ ಸ್ವಾಗತ ಮಾಡಿ, ಗೆಲುವಿಗೆ ಶ್ರಮಿಸೋಣ. ಒಂದು ವೇಳೆ ಅವರು ಇಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ ಸ್ಥಳೀಯರಿಗೆಟಿಕೆಟ್ ನೀಡಬೇಕು ಎಂದು ಹೈ ಕಮಾಂಡ್‌ಗೆ ಒತ್ತಾಯಿಸುವುದಾಗಿ ತಿಳಿಸಿದರು.
ಗುಂಪುಗಾರಿಕೆ, ಗೊಂದಲ ಸರಿಪಡಿಸಿ: ಕೋಲಾರ ಕ್ಷೇತ್ರಕ್ಕೆ ಬರುವುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ, ಒಂದು ವೇಳೆ ಹೈ ಕಮಾಂಡ್ ಹೇಳಿದರೆ ಸಿದ್ದರಾಮಯ್ಯ ಅವರನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ, ಕೋಲಾರದಲ್ಲಿಗುಂಪುಗಾರಿಕೆ, ಗೊಂದಲಗಳು ಇವೆ. ಇವುಗಳನ್ನು ಸರಿಮಾಡಿಕೊಂಡು ಕೋಲಾರಕ್ಕೆಬನ್ನಿ ಎಂದು ಸಿದ್ದರಾಮಯ್ಯಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದೇನೆ ಎಂದರು.
ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿ: ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಇಚ್ಚಿಸಿರುವ ಮಾಜಿ ಸಭಾಪತಿ ವಿ.ಆರ್.ಸುದರ್ಶನ್,ಪಕ್ಷದ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಕಿಸಾನ್ ಕೇತ್ ಜಿಲ್ಲಾ ಅಧ್ಯಕ್ಷ ಊರುಬಾಗಿಲುಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಿಂದ ತೊಲಗಿಸಿ, ಕಾಂಗ್ರೆಸ್‌ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿನಮ್ಮ ಮೇಲಿದೆ. ಗುಂಪುಗಾರಿಕೆ ಬಿಟ್ಟು ಮಾಜಿಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್, ಪಕ್ಷದಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷಕೆ.ಜಯದೇವ್, ಪಕ್ಷದ ಎಸ್.ಟಿ ವಿಭಾಗದ ಜಿಲ್ಲಾಧ್ಯಕ್ಷ ನಾಗರಾಜ್, ಹಿಂದುಳಿದ ವರ್ಗಗಳ ಮಂಜುನಾಥ್, ಲಾಲ್ ಬಹಾದ್ದೂರ್ ಶಾಸ್ತ್ರಿ, ಜಗನ್, ರತ್ನಮ್ಮ, ವೆಂಕಟಪತೆಪ್ಪ,ತ್ಯಾಗರಾಜ್, ಇಕ್ಬಾಲ್ ಅಹಮದ್, ಸಲ್ಲಾವುದ್ದೀನ್ ಬಾಬು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.