ಕಟೀಲು: ಬ್ರಾಹ್ಮಣರನ್ನು ಟೀಕಿಸಿದಾಗ ಸನಾತನ ಧರ್ಮವನ್ನು ಕೀಳು ಮಾಡಬಹುದು ಎಂಬ ಭಾವನೆ ಇದೆ. ಬ್ರಾಹ್ಮಣ ಸಮಾಜದ ವಿರುದ್ಧದ ಟೀಕೆಗಳಿಗೆ ಗಮನ ಕೊಡದೆ ಸಮಾಜದ ಅಭಿವೃದ್ಧಿ, ಒಳಿತಿಗೆ ಕೆಲಸ ಮಾಡೋಣ. ನಮ್ಮ ಧರ್ಮದ ಮೌಲ್ಯಗಳನ್ನು ಅರ್ಥ ಮಾಡಿ ಕೊಂಡು ಸಾಧನೆಯತ್ತ ಸಾಗೋಣ ಎಂದು ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಆರ್. ಅಶೋಕ್ ಹಾರನಹಳ್ಳಿ ಹೇಳಿದರು.
ಅವರು ಜ. 22ರಂದು ಕಟೀಲು ದೇವ ಸ್ಥಾನದ ಪದವೀ ಪೂರ್ವಕಾಲೇಜಿನ ವಿದ್ಯಾಸದನದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಯುವ ಘಟಕ ಹಾಗೂ ಮಹಿಳಾ ಘಟಕಗಳ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರಕಾರ ಬ್ರಾಹ್ಮಣ ಸಮಾಜಕ್ಕೆ ಘೋಷಣೆ ಮಾಡಿದ ಆರ್ಥಿಕ ಮೀಸಲಾತಿ, ರಾಜ್ಯ ಸರಕಾರ ಮುಂದಾಗಿದ್ದ ದೇವ ಸ್ಥಾನಗಳ ಸ್ವಾಯತ್ತೆ ಹೀಗೆ ಅನೇಕ ಸಂಗ ತಿಗಳು ಅನುಷ್ಠಾನಗೊಳ್ಳತ್ತಿಲ್ಲ. ಹಾಗಾಗಿ ರಾಜಕೀ ಯವಾಗಿಯೂ ಎಚ್ಚೆತ್ತುಕೊಳ್ಳಬೇಕು. ತ್ರಿಮ ತಸ್ಥರು ಒಂದಾಗಲೇಬೇಕಾಗಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜದ ಎಲ್ಲ ಸ್ವಾಮೀಜಿಗಳನ್ನು ಒಂದಾಗಿಸಿ ಒಗ್ಗಟ್ಟಿನ ಸಂದೇಶ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಕಟೀಲು ದೇಗುಲದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ವೆಂಕರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳೂರಿನ ಉದ್ಯಮಿ ರಘುನಾಥ ಸೋಮಯಾಜಿ, ಮಹಿಳಾ ಘಟಕದ ರಾಜ್ಯ ಸಂಚಾಲಕಿ ಡಾ| ಶುಭಮಂಗಳಾ ಸುನಿಲ್, ಯುವ ಪರಿಷತ್ ರಾಜ್ಯ ಸಂಚಾಲಕ ಸಂದೀಪ ರವಿ, ಉಪಾಧ್ಯಕ್ಷ ಮಹೇಶ್ ಕಜೆ, ಸೂರ್ಯನಾರಾಯಣ ಭಟ್ ಕಶೆಕೋಡಿ, ಗಿರಿಪ್ರಕಾಶ್ ತಂತ್ರಿ ಪೊಳಲಿ, ಹರಿಪ್ರಸಾದ್ ಪೆರಿಯಾಪು, ರಾಜ್ಯ ಮಹಿಳಾ
ಸಹ ಸಂಚಾಲಕಿ ಚೇತನಾ ದತ್ತಾತ್ರೇಯ, ಜಿಲ್ಲಾ ಮಹಿಳಾ ಸಂಚಾಲಕಿ ಉಮಾ ಸೋಮಯಾಜಿ, ರಾಜ್ಯ ಯುವ ಸಹಸಂಚಾಲಕ ಸುಬ್ರಹಮಣ್ಯ ಕೋರಿಯಾರ್, ನಿಯೋಜಿತ ಜಿಲ್ಲಾ ಯುವ ಘಟಕದ ಸಂಚಾಲಕ ಹರಿನಾರಾಯಣ ದಾಸ ಆಸ್ರಣ್ಣ , ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಶಿವಳ್ಳಿ ಸ್ಪಂದನ ಜಿಲ್ಲಾಧ್ಯಕ್ಷ ಡಾ| ದಯಾಕರ್ ಮತ್ತಿತರರು ಉಪಸ್ಥಿರಿದ್ದರು.
ಇದೇ ಸಮಯದಲ್ಲಿ ಅನನ್ಯ ಸಾಧಕ ಡಾ| ಹರಿಕೃಷ್ಣ ಪುನರೂರು, ರಾಷ್ಟ್ರಮಟ್ಟದ ಸಾಧಕ ಪ್ರಹ್ಮಾದ ಮೂರ್ತಿ ಕಡಂದಲೆ, ಸಾಧಕಿ ಜ್ಞಾನ ಐತಾಳ್ ಮಂಗಳೂರು, ಸಿಎ ಸಾಧಕಿ ರಮ್ಯಶ್ರೀ ಸುರತ್ಕಲ್ ಅವರನ್ನು ಗೌರವಿಸಲಾಯಿತು. ಅನಂತ ಪದ್ಮನಾಭ ಶಿಬರೂರು ನಿರೂಪಿಸಿದರು.