Advertisement

ಮೌಲ್ಯಯುತ ರಾಜಕೀಯ ಮರುಕಳಿಸಲಿ: ಮಹಿಮ

12:44 AM Dec 23, 2019 | Lakshmi GovindaRaj |

ಬೆಂಗಳೂರು: ರಾಜಕಾರಣಿಗಳು ಮಾತನಾ ಡುವು ದಷ್ಟೇ ಅಲ್ಲ, ಜನರ ಮಾತುಗಳನ್ನೂ ಕೇಳಿಸಿ ಕೊಳ್ಳಬೇಕು ಎಂದು ಸಂಯುಕ್ತ ಜನತಾ ದಳ ರಾಜ್ಯಾಧ್ಯಕ್ಷ ಮಹಿಮ ಜೆ. ಪಟೇಲ್‌ ಹೇಳಿದರು. ಯುವ ಜನತಾದಳ (ಸಂಯುಕ್ತ) ವತಿಯಿಂದ ಭಾನುವಾರ ಆಯೋಜಿಸಿದ್ದ ಜೆಡಿಯು ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೆ ರಾಜಕೀಯ ಸೇವೆಯಾಗಿತ್ತು.

Advertisement

ಈಗ ರಾಜ ಕಾರಣಿಗಳ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಇಲ್ಲ. ಆರೋಪ ಸಾಬೀತಾದ ರಾಜಕಾರಣಿಗಳಿಗೂ ಜೈಕಾರ ಕೂಗಲಾ ಗುತ್ತಿದೆ. ಗಂಭೀರ ಆರೋಪ ಎದುರಿಸಿದವರೂ ಮುಖ್ಯಮಂತ್ರಿಗಳಾಗುತ್ತಿದ್ದಾರೆ. ಈ ಹಿಂದೆ ಇದ್ದ ಮೌಲ್ಯವೂಂದಿನ ರಾಜಕಾರಣದಲ್ಲಿ ಉಳಿದಿಲ್ಲ ಎಂದು ವಿಷಾದಿಸಿದರು. ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ, ಸಮಾನತೆ ಮತ್ತು ಸೋದರತ್ವವೇ ಪ್ರಜಾಪ್ರಭುತ್ವದ ಮೂಲ ಆಶಯ.

ಆದರೆ, ಈಗ ಎಲ್ಲ ಪಕ್ಷಗಳೂ ವಂಶ ರಾಜಕೀಯಕ್ಕೆ ಮಹತ್ವ ನೀಡುತ್ತಿವೆ. ಹೀಗಾಗಿ, ಕಾರ್ಯಕರ್ತರು ಮೂಲೆಗುಂಪಾಗು ತ್ತಿದ್ದಾರೆ ಎಂದರು. ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಯುವ ಜೆಡಿ(ಯು)ರಾಷ್ಟ್ರೀಯ ಅಧ್ಯಕ್ಷ ಸಂಜಯ್‌ ಕುಮಾರ್‌, ರಾಜ್ಯ ಕಾರ್ಯಾಧ್ಯಕ್ಷ ಜಿ.ವಿ.ರಾಮ ಚಂದ್ರಯ್ಯ, ರಾಜ್ಯಾಧ್ಯಕ್ಷ ಡಾ.ಕೆ.ನಾಗರಾಜ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next