Advertisement

ಸತೀಶ ಜಾರಕಿಹೊಳಿ ಸಿಎಂ ಆಗಲಿ: ಸಿದ್ದು 

06:00 AM Dec 20, 2018 | |

ಬಾದಾಮಿ (ಬಾಗಲಕೋಟೆ): “ನಾನು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುವ ವ್ಯಕ್ತಿ. ಸತೀಶ ಜಾರಕಿಹೊಳಿ ಕೂಡ ಅದೇ ಸಾಮಾಜಿಕ ನ್ಯಾಯ ನಂಬಿದವರು. ಹೀಗಾಗಿ, ಅವರೂ ಒಮ್ಮೆ ಸಿಎಂ ಆಗಲಿ. ಅಧಿಕಾರಕ್ಕೆ ಯಾರೂ ಗೂಟ ಹೊಡೆದುಕೊಂಡು ಕೂತಿರಲ್ಲ. ಎಲ್ಲರಿಗೂ ಅಧಿಕಾರ ಸಿಗಬೇಕು. ಸತೀಶ ಜಾರಕಿಹೊಳಿ ಸಿಎಂ ಸ್ಥಾನಕ್ಕೆ ಸೂಕ್ತ ವ್ಯಕ್ತಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಪ್ರದೇಶಕ್ಕೂ ನ್ಯಾಯ ಸಿಗಬೇಕು. ಅದರಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ನಾನು ಬಿಡಲ್ಲ. ನಾನು ಸಿಎಂ ಆಗಿದ್ದಾಗ ಸಂಪುಟ ವಿಸ್ತರಣೆ ವೇಳೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೆ. ಈಗ ಸಮ್ಮಿಶ್ರ ಸರ್ಕಾರವಿದೆ. ಎಲ್ಲವನ್ನೂ ನೋಡಿಕೊಂಡು ಹೋಗಬೇಕಾಗುತ್ತದೆ’ ಎಂದರು. 

ಸಚಿವ ಸಂಪುಟ ವಿಸ್ತರಣೆಯಲ್ಲಿ 1-2 ಸ್ಥಾನಗಳು ಬದಲಾಗಬಹುದು. ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ, “ನನ್ನನ್ನು ಯಾಕೆ ಕೇಳುತ್ತೀರಿ? ನಾನು ದಿನೇಶ ಗುಂಡೂರಾವ್‌ ಅವರ ನಾಲಿಗೆನಾ?’ ಎಂದು ಪ್ರಶ್ನಿಸಿದರು. 

ಸಿಎಂ ಸ್ಥಾನಕ್ಕಾಗಿ ಕಾಯಬೇಕು: ಸತೀಶ 
ಬಾದಾಮಿ: ಎಲ್ಲ ಸಮಾಜದವರಿಗೆ ಒಂದು ಬಾರಿಯಾದರೂ ಮುಖ್ಯಮಂತ್ರಿ ಹುದ್ದೆಯ ಅವಕಾಶ ಬಂದೇ ಬರುತ್ತದೆ. ನಾವು ಕಾಯಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಸಚಿವ ಸ್ಥಾನ ಪಡೆದು ಅಭಿವೃದ್ಧಿ ಮಾಡಬೇಕೆಂದಿಲ್ಲ. ಸಚಿವ ಸ್ಥಾನ ಇರದಿದ್ದರೂ ಅಭಿವೃದ್ಧಿ ಮಾಡುವ ಶಕ್ತಿಯಿದೆ ಎಂದರು.

ಸಹೋದರ ಸಚಿವ ರಮೇಶ ಜಾರಕಿಹೊಳಿ ಸಂಪುಟ ಸಭೆ ಹಾಗೂ ಶಾಸಕಾಂಗ ಸಭೆಗೆ ಗೈರಾಗುತ್ತಿರುವ ವಿಚಾರ ಅವರ ವೈಯಕ್ತಿಕ ವಿಷಯ. ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವ ವಿಚಾರ ನನಗೆ ಗೊತ್ತಿಲ್ಲ. ನಾನು ಸಚಿವ ಸ್ಥಾನದ ಅಕಾಂಕ್ಷಿ ಅಲ್ಲ.
ಸಚಿವರಾಗಬೇಕಾದವರು ನನ್ನ ಬೆಂಬಲಿಗರು. ಸರಕಾರ ಮುಂದಿನ ನಾಲ್ಕೂವರೆ ವರ್ಷ ಸುಭದ್ರವಾಗಿರುತ್ತದೆ ಎಂದರು.

Advertisement

ವಿಧಾನಪರಿಷತ್‌ ಸಭಾಪತಿ ಆಯ್ಕೆ ಹೈಕಮಾಂಡ್‌ ಕೈಗೊಂಡ ನಿರ್ಧಾರ. ನಾನು ಎಸ್‌.ಆರ್‌. ಪಾಟೀಲರ ಹೆಸರು ಸೂಚಿಸಿದ್ದೆ.
ರಾಜಕೀಯದಲ್ಲಿ ಸಮಾಧಾನ, ಅಸಮಾಧಾನ ಎಂಬ ವಿಚಾರ ಇರುವುದಿಲ್ಲ. ಸಭಾಪತಿಯನ್ನು ಹೈಕಮಾಂಡ್‌ ನಿರ್ದೇಶನದಂತೆ ಆಯ್ಕೆ ಮಾಡಲಾಗಿದೆ.

● ಸಿದ್ದರಾಮಯ್ಯ, ಮಾಜಿ ಸಿಎಂ 

Advertisement

Udayavani is now on Telegram. Click here to join our channel and stay updated with the latest news.

Next