Advertisement

ಸಂಘಟನೆಯಿಂದ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳೋಣ

03:45 AM Jul 03, 2017 | Team Udayavani |

ಕುಂದಾಪುರ: ನಮ್ಮ ದೇಶದ ರಾಜಕೀಯ ಒಂದು ಬಲಪಂಥ ವಾದದತ್ತ ದಾಪುಗಾಲು ಹಾಕುತ್ತಿದೆ. ಆ ಬಲ ಪಂಥಕ್ಕೆ ಸವಾಲು ಹಾಕಲು ಸಾಧ್ಯ ಇರುವುದಾದರೆ ಅದು ಎಡ ಶಕ್ತಿಗಳಿಂದ  ಮಾತ್ರ ಸಾಧ್ಯ. ಇಂದು ಕರ್ನಾಟಕದಲ್ಲಿ ಎಡಪಂಥೀಯ ಶಕ್ತಿ ಕಡಿಮೆ ಇರುವ ಸಂದರ್ಭದಲ್ಲಿ  ವಿವಿಧ ಸಂಘಟನೆಯ  ಕಾರ್ಮಿಕರು ಒಂದಾಗಿ ಯೋಜನೆಗಳನ್ನು ರೂಪಿಸಿ ರಾಜ್ಯದ  29 ಸಾವಿರ ಹಳ್ಳಿಗಳಲ್ಲಿ  ಸಂಘಟನೆ  ತಲುಪಲು ಸಾಧ್ಯವಾದರೆ ನಾವು ಕೂಡಾ ಕರ್ನಾಟಕದ ರಾಜಕೀಯದಲ್ಲಿ  ಒಂದು ಎಡ ಚಳುವಳಿಯನ್ನು ಬಲಿಷ್ಠಗೊಳಿಸಲು ಅವಕಾಶ ಇದೆ ಎಂದು ನವದೆಹಲಿಯ ಸಿಡಬುÉÂ ಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಬಂಜನ್‌ ಚಕ್ರವರ್ತಿ ಹೇಳಿದರು.

Advertisement

ಅವರು  ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ  ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ (ರಿ.) ಇವರ ಆಶ್ರಯದಲ್ಲಿ  ನಡೆದ ಕಟ್ಟಡ ಕಾರ್ಮಿಕರ ಮೂರನೇ ರಾಜ್ಯ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಇಂದು ಯುವ ಜನರಲ್ಲಿ  ಧಾರ್ಮಿಕವಾದ ಹಾಗೂ ಭಾವನಾತ್ಮಕವಾದ ಪ್ರಚೋದನೆಯನ್ನು ಹುಟ್ಟು ಹಾಕುವುದನ್ನು ನೋಡುತ್ತಿದ್ದೇವೆ. ನಮ್ಮ  ಸಂವಿಧಾನ  ದೇಶದಲ್ಲಿರುವ ಎಲ್ಲ ಧರ್ಮದವರ  ಅವರವರ ಆಚರಣೆಗಳನ್ನು ಹಾಗೂ ಧಾರ್ಮಿಕ ಹಕ್ಕುಗಳನ್ನು  ರಕ್ಷಣೆ ಮಾಡಲು ಅವಕಾಶವನ್ನು ಕೊಟ್ಟಿದೆ. ಆದರೆ ಕೇಂದ್ರ ಸರಕಾರ ಧರ್ಮದ ಹೆಸರಿನಲ್ಲಿ ಯುವಜನರನ್ನು ಹಾಗೂ ಜನರನ್ನು ಒಡೆಯುವ ಪ್ರಯತ್ನವನ್ನು  ನಡೆಸುತ್ತಾ ಇದೆ. ಆದ್ದರಿಂದ ಇದು ಎಲ್ಲ ಧರ್ಮಗಳ  ದುಡಿಯುವ ಜನರಿಗೆ ಒಂದು  ಸವಾಲಿನ ಕೆಲಸವಾಗಿದೆ.  ಇದನ್ನು ಸೈದ್ಧಾಂತಿಕವಾಗಿ  ಹಾಗೂ ಸಂಘಟನಾತ್ಮಕವಾಗಿ ಮುಂದಿನ ದಿನದಲ್ಲಿ  ಎದುರಿಸಬೇಕಾದ ಅಗತ್ಯ ಇದೆ ಎಂದರು.

ಕರ್ನಾಟಕದಲ್ಲಿ  ಇಂದು ಜನಾಂಗವನ್ನು ವಿಂಗಡನೆ ಮಾಡುವ ಕೆಲಸ ಮಾಡುತ್ತಾ ಅವರವರ ನಡುವೆ ಜಗಳವನ್ನು ತಂದು ಹಾಕುವ ಕೆಲಸವನ್ನು  ಮಾಡುತ್ತಾ ಇದೆ. ನಾವು ದುಡಿಯುವ ಜನಾಂಗವಾಗಿ ಇದನ್ನೆಲ್ಲವನ್ನು ಎದುರಿಸಬೇಕಾದ ಅನಿವಾರ್ಯತೆ  ಎದುರಾಗಿದೆ.  ಹಿಂದೂ,  ಮುಸ್ಲಿಂ, ಕ್ರೈಸ್ತರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಇಂದು ಮಹಿಳೆಯರ ಮೇಲೆ ಬೀದಿಗಳಲ್ಲಿ ಹಾಗೂ ಅವರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ದಾಳಿ , ದೌರ್ಜನ್ಯ ಹೆಚ್ಚುತ್ತಾ ಇದೆ. ಇಂತಹ ಪರಿಸ್ಥಿತಿಯಲ್ಲಿ   ಕಾರ್ಮಿಕ  ಸಂಘಟನೆಗಳು ಇಂತಹ ಘಟನೆಯನ್ನು ಖ‌ಂಡಿಸಿ ಹೋರಾಟ ಮಾಡಬೇಕಾದ ಅಗತ್ಯ ಇದೆ.  ರಾಜ್ಯದ  20 ಸಾವಿರ ಹಳ್ಳಿಗಳಿಗೆ , 30 ಜಿಲ್ಲೆಗಳಿಗೆ  ನಮ್ಮ ಕಾರ್ಮಿಕ ಸಂಘಟನೆಯನ್ನು   ವಿಸ್ತರಣೆಮಾಡುವ ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದರು.

ಸಿಡಬ್ಲೂé ಎಫ್‌ಐ  ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ  ವೀರಸ್ವಾಮಿ  ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಿಡಬ್ಲೂé ಎಫ್‌ಐ ರಾಷ್ಟ್ರ ಅಧ್ಯಕ್ಷ ಬಂಗಾರವೇಲು, ಕೇರಳ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ  ಚೇರ್‌ಮ್ಯಾನ್‌ ಸಿ.ಎ. ಜೋಸೆಫ್‌, ತೆಲಂಗಾಣ ರಾಜ್ಯದ ಸಿಡಬ್ಲೂéಎಫ್‌ಐ ಮುಖಂಡ ಕೊಟ್ಟಂ ರಾಜು, ಸಿಐಟಿಯು ರಾಜ್ಯ ಸಮಿತಿಯ ಕಾರ್ಯದರ್ಶಿ ಮಹಾಂತೇಶ್‌, ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ವಿಶ್ವನಾಥ ರೈ, ಸಿಡಬ್ಲೂé ಎಫ್‌ಐ ಪ್ರಧಾನ ಕಾರ್ಯದರ್ಶಿ  ಬಿ. ಉಮೇಶ್‌, ಸಿಐಟಿಯು ಕುಂದಾಪುರ ಅಧ್ಯಕ್ಷ ಎಚ್‌. ನರಸಿಂಹ,  ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ (ರಿ.) ತಾಲೂಕು ಕಾರ್ಯದರ್ಶಿ ಸುರೇಶ್‌ ಕಲ್ಲಾಗರ, ಕೋಶಾಧಿಕಾರಿ ಶೇಖರ ಬಂಗೇರ ಉಪಸ್ಥಿತರಿದ್ದರು.

Advertisement

ಕುಂದಾಪುರ ತಾಲೂಕು  ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ (ರಿ.) ಇದರ ಅಧ್ಯಕ್ಷ ಯು. ದಾಸ ಭಂಡಾರಿ ಸ್ವಾಗತಿಸಿದರು. 

ಇಂದು ದೇಶದಲ್ಲಿ  ಜಿಎಸ್‌ಟಿ ಏಕರೂಪದ ತೆರಿಗೆ ಜಾರಿಗೆ ತರಲಾಗಿದೆ. ಈ ಜಿಎಸ್‌ಟಿ ಒಳಗಡೆ ಕಟ್ಟಡ  ಮತ್ತು ಇತರೆ ನಿರ್ಮಾಣದ ಕಾರ್ಮಿಕರಿಗೆ ಸಂದಾಯಮಾಡಬೇಕಾದ ಸೆಸ್‌ನ್ನು ವಿಲೀನಮಾಡದೇ ಇದ್ದರೂ  1971 ರಿಂದ ನಮ್ಮ  ದೆಶದಲ್ಲಿ  29 ರಾಜ್ಯಗಳಲ್ಲಿ  ಜಾರಿಯಲ್ಲಿದ್ದ  ಬೀಡಿ ಕಾರ್ಮಿಕರ ನಿಧಿಯನ್ನು ಇದರಲ್ಲಿ ವಿಲೀನ ಮಾಡಲಾಗಿದೆ. ಇದರಿಂದ  ಬೀಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳಿನ್ನು ಅವರಿಗೆ ಸಿಗದೇ ರೀತಿಯಲ್ಲಿ ಅಪಾಯಕ್ಕೆ ಸಿಲುಕಿಸಲಾಗಿದೆ. ಮುಂದೆ ಒಳ್ಳೆಯ ದಿನಗಳು ಬರುತ್ತಿದೆ ಎಂದು ಮೋದಿ ಹೇಳಿದರು ಆದರೆ ಇಂದು ಎಲ್ಲಾ  ದಿನ ಬಳಕೆಯ ವಸ್ತುಗಳ ದರ ಗಗನಕ್ಕೇರುತ್ತಿದೆ. ಕಾರ್ಮಿಕರು  ಈ ಸುಧಾರಣೆಗಳ ವಿರುದ್ಧ ಐಕ್ಯ ಹೋರಾಟ ನಡೆಸಬೇಕಾಗಿದೆ.
– ದಿಬಂಜನ್‌ ಚಕ್ರವರ್ತಿ 

Advertisement

Udayavani is now on Telegram. Click here to join our channel and stay updated with the latest news.

Next