Advertisement

ವಿವೇಕಾನಂದರ ಮಾರ್ಗದಲ್ಲಿ ಸಾಗೋಣ

11:29 AM Jan 20, 2022 | Team Udayavani |

ಆಳಂದ: ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಿಂದಲೇ ನಿಗದಿತ ಗುರಿ ನಿರ್ಧರಿಸಿ, ಅದಕ್ಕೆ ತಕ್ಕಂತೆ ನಿರಂತರವಾಗಿ ಶ್ರಮಿಸಬೇಕು ಎಂದು ಉಪನ್ಯಾಸಕ, ಚಿಂತಕ ಎಚ್‌.ಬಿ. ಪಾಟೀಲ ಹೇಳಿದರು.

Advertisement

ತಾಲೂಕಿನ ಎಲೆ ನಾವದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ “ರಾಷ್ಟ್ರೀಯ ಯುವ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರವರು ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು. ಭಾರತದ ಭವ್ಯ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದರು. ಸಮಾಜದಲ್ಲಿರುವ ಬಡವರು, ಅಶಕ್ತರ ಏಳ್ಗೆಗಾಗಿ ಶ್ರಮಿಸಿದರು. ಯುವ ಸಮೂಹವು ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.

ಕ.ರಾ.ಪ್ರಾ. ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ ಮಾತನಾಡಿ, ಪ್ರಸ್ತುತವಾಗಿ ಯುವಶಕ್ತಿ ಅನೇಕ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಸಮಯ ಮತ್ತು ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯವಾಗಿದೆ. ಅಂತಹ ಯುವಕರಿಗೆ ಸೂಕ್ತವಾದ ಮಾರ್ಗದರ್ಶನ, ಮೌಲ್ಯಗಳು, ಸಂಸ್ಕಾರ ನೀಡಿ, ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಬ್ದಾರಿ ಪಾಲಕ-ಪೋಷಕ, ಶಿಕ್ಷಕ ಮತ್ತು ಸಮಾಜದ ಮೇಲಿದೆ ಎಂದರು.

ಬಳಗದ ವತಿಯಿಂದ ಶಾಲೆ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಮುಖ್ಯ ಶಿಕ್ಷಕ ಶಿವಾನಂದ ಎಂ.ಯಳಮೇಲಿ, ಶಿವಲಿಂಗಪ್ಪ ಆರ್‌.ಭಾವಿಮನಿ, ಮಲ್ಲಯ್ಯ ಸ್ವಾಮಿ, ಕಾವೇರಿ ಎಲ್‌.ಗಂಗಾ, ವಿಜಯಕುಮಾರ ಮುಣಜಿ, ನಿರಂಜಯ್ಯ ಜಿ.ಸ್ವಾಮಿ, ಚಂಪಾವತಿ ಪರತಾಪುರೆ ಹಾಗೂ ವಿದ್ಯಾರ್ಥಿಗಳು, ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next