Advertisement
ಮಾನವನ ಸಹಜ ಸಮಸ್ಯೆಗಳ ನಡುವೆ ಕಾಡುವ ಭಯಾನಕ ರೋಗಗಳು ಆತನ ನೆಮ್ಮದಿಯನ್ನು ಕಸಿದುಕೊಂಡುಬಿಡುತ್ತವೆ. ಅಂತಹ ಹತ್ತು ಭಯಾನಕ ರೋಗಗಳಲ್ಲಿ ಮಹಾಮಾರಿ ಏಡ್ಸ್ ಒಮ್ಮೆ ಬಂದರೆ ಸಾಕು ಅದು ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ. ಯಾವುದೇ ವಯೋಮಾನದ ಭೇದಭಾವವಿಲ್ಲದೇ ಬರುವ ಈ ಮಹಾಮಾರಿಗೆ ಇಂದಿಗೂ ಔಷಧ ಕಂಡು ಹಿಡಿದಿಲ್ಲ. ಆಗಾಗಿ ಇದೊಂದು ವೈದ್ಯಕ್ಷೇತ್ರಕ್ಕೆ ಸವಾಲಾಗಿದೆ.
ಅಸುರಕ್ಷತೆಯ ಜೀವನ ಪದ್ಧತಿಯಿಂದ ಎಚ್.ಐ.ವಿ. ( ಹ್ಯುಮಾನ್ ಇಮ್ಯಾನುಡಿಫಿಸಿಯೆನ್ಸಿ ವೈರಸ್) ವೈರಸ್ ಸೋಂಕು ತಗುಲಿದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಹಂತ ಹಂತವಾಗಿ ದೇಹವು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತಿಮವಾಗಿ ಸೋಂಕಿತನು ಏಡ್ಸ್ ರೋಗಕ್ಕೆ ಬಲಿಯಾಗುತ್ತಾನೆ.
ಜಾಗೃತಿ ದಿನ ಏಡ್ಸ್ ರೋಗದ ಬಗೆಗಿನ ಜಾಗೃತಿ ಹಾಗೂ ಸೋಂಕಿನಿಂದ ಬಳುತ್ತಿರುವ ರೋಗಿಗಳ ಬಗ್ಗೆ ಕಾಳಜಿಗಾಗಿ 1987ರಲ್ಲಿ ವಿಶ್ವ ಆರೋಗ್ಯ ಸಂಸ್ಥೆನ ಏಡ್ಸ್ ರೋಗದ ಕಾರ್ಯಕ್ರಮದಲ್ಲಿ ವಿಶೇಷ ಅಧಿಕಾರಿಗಳಾದ ಥೋಮಸ್ ನೆಟ್ಟರ್ ಹಾಗೂ ಜೇಮ್ಸ್ ಡಬ್ಲ್ಯು. ಬನ್ ಅವರು ಡಿಸೆಂಬರ್ 1ರಂದು ವಿಶ್ವ ಏಡ್ಸ್ ಜಾಗೃತಿ ದಿನವನ್ನಾಗಿ ಆಚರಿಸಲು ಮನವಿ ಮಾಡಿದರು. ಇದರ ಫಲವಾಗಿ 1988ರಿಂದ ಡಿ. 1 ರಂದು ಮೊದಲ ಬಾರಿಗೆ ವಿಶ್ವ ಏಡ್ಸ್ ಜಾಗೃತಿ ದಿನವನ್ನು ಆಚರಿಸಲಾಯಿತು. 2019ರಲ್ಲಿ Communities make the difference ಎಂಬ ಥೀಮ್‌ನೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ KNOW UR STATUS ಎಂಬ ಸಂದೇಶದೊಂದಿಗೆ ಆಚರಿಲಾಗಿತ್ತು. ಏಡ್ಸ್ ರೋಗಿಗಳ
ಅಂಕಿ ಅಂಶಗಳು
1 ವಿಶ್ವಾದ್ಯಂತ 37.9 ಮಿಲಿಯನ್ ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಅದರಲ್ಲಿ 36.2 ಮಿಲಿಯನ್ ಯುವಕರು ಹಾಗೂ 1.7 ಮಿಲಿಯನ್ ಮಕ್ಕಳು ಏಡ್ಸ್ ಪೀಡಿತರಾಗಿದ್ದಾರೆ. ಶೇ. 79 ಜನರಿಗೆ ರೋಗದ ಬಗ್ಗೆ ಮಾಹಿತಿ ಇದ್ದು, ಇನ್ನು ಶೇ. 21 ರಷ್ಟು ಯಾವುದೇ ಮಾಹಿತಿಯಿಲ್ಲ. ಪ್ರತಿ ವರ್ಷ 7,70,000 ಜನರು ಏಡ್ಸ್‌ನಿಂದಾಗಿ ಮೃತಪಡುತ್ತಿದ್ದಾರೆ.
2 ಆಫ್ರಿಕಾದಲ್ಲಿ ಶೇ. 67.99 ರಷ್ಟು ಏಡ್ಸ್ ಪೀಡಿತರಿದ್ದು ಇದು ವಿಶ್ವದಲ್ಲಿ ಹೆಚ್ಚು ಕಾಯಿಲೆ ಹೊಂದಿರುವ ದೇಶದವಾಗಿದೆ. ಎರಡನೇ ಸ್ಥಾನದಲ್ಲಿ ಸೌತ್ ಈಸ್ಟ್ ಏಷ್ಯ ಇದ್ದು ಶೇ. 10.05 ರಷ್ಟು ಜನರಿಗೆ ಕಾಯಿಲೆಯಿದೆ. ಅಮೆರಿಕದಲ್ಲಿ ಶೇ. 9.6 ಜನರಿಗೆ ಏಡ್ಸ್ ಕಾಯಿಲೆ ಇದೆ.
3 ಏಡ್ಸ್ ರೋಗ ರಕ್ತ, ವೀರ್ಯ, ಗುದನಾಳದ ದ್ರವಗಳು, ಯೋನಿ ದ್ರವಗಳು ಹಾಗೂ ಎದೆ ಹಾಲಿನ ಮೂಲಕ ಹರಡುತ್ತದೆ.
Related Articles
· ಎಚ್‌ಐವಿ ತಪಾಸಣೆ ವಿಧಾನದಲ್ಲಿನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.
· ಪ್ರತಿ ಗರ್ಭೀಣಿಯರ, ನವಜಾತ ಶಿಶುಗಳ ರಕ್ತ ಪರೀಕ್ಷೆ ಕಡ್ಡಾಯ.
· ಧಾರ್ಮಿಕ ಮುಖಂಡರ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.
· ಸರಕಾರದಿಂದ ಉಚಿತವಾಗಿ ಆಂಟಿರೆಟ್ರೋವೈರಲ್ ಥೆರಫಿ ಮತ್ತು ಔಷಧಗಳನ್ನು ನೀಡಲಾಗುತ್ತದೆ.
· ಕಾಲೇಜುಗಳಲ್ಲಿ ಗುಪ್ತ ಸಮಾಲೋಚಕರನ್ನು ನೇಮಿಸಲಾಗಿದೆ.
· ಏಡ್ಸ್ ಕುರಿತಾಗಿ ಜಾಗೃತಿ ಮೂಡಿಸುವ ಆರೋಗ್ಯ ಕಾರ್ಯಕರ್ತೆಯರ
ನೇಮಕ ಮಾಡಲಾಗಿದೆ.
· ಕೆಲವೊಂದು ದೇಶಗಳು ಏಡ್ಸ್ ರೋಗ ನಿರ್ಮೂಲನೆಗೆ ಬಜೆಟ್‌ನಲ್ಲಿ ಹಣ ಇರಿಸಿವೆ.
· ವಿಶ್ವ ಆರೋಗ್ಯ ಸಂಸ್ಥೆಯೂ ಏಡ್ಸ್‌ನ ವಿರುದ್ಧ ಗೆದ್ದು ಆತ್ಮವಿಶ್ವಾಸದಿಂದ
ಬದುಕುತ್ತಿರುವ ವ್ಯಕ್ತಿಗಳಿಂದ ಪ್ರಚಾರ ಕಾರ್ಯ ನಡೆಸುತ್ತಿದೆ.
Advertisement
ತಡೆಗಟ್ಟುವ ಕ್ರಮಗಳು1 ಏಡ್ಸ್ ರೋಗದ ಭೀಕರತೆಯ ಬಗ್ಗೆ ಎಚ್ಚರಿಕೆ ಮೂಡಿಸುವುದು. ಎನ್‌ಜಿಒಗಳ ಸಹಾಯವನ್ನು ಪಡೆಯುವುದು.
2 ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ ದೂರವಿರುವುದು.
3 ಬ್ಲಿಡ್ ಬ್ಯಾಂಕ್‌ಗಳು ರಕ್ತ ಸಂಗ್ರಹಿಸುವಾಗ ಆದಷ್ಟು ಎಚ್ಚರ ವಹಿಸುವುದು.
4 ಏಡ್ಸ್ ಕಾಯಿಲೆ ಇರುವ ಗರ್ಭಿಣಿ ಅದು ಮಗುವಿಗೆ ತಗುಲದಂತೆ ಎಚ್ಚರ ವಹಿಸುವುದು. ಅದಕ್ಕಾಗಿ ಮುನ್ಸೂಚನೆಗಳನ್ನು ವೈದ್ಯರಿಂದ ಪಡೆದುಕೊಳ್ಳಬೇಕು.
5 ಮಕ್ಕಳಲ್ಲಿ ಅಥವಾ ದೊಡ್ಡವರಲ್ಲಿ ಈ ರೋಗ ಕಂಡು ಬಂದಲ್ಲಿ ಅವರ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
6 ಒತ್ತಡವನ್ನು ಆದಷ್ಟು ಕಡಿಮೆ ಮಾಡುವುದು. ಏಕೆಂದರೆ ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದರಿಂದ ಅವಕಾಶವಾದಿ ಸೋಂಕುಗಳು ಬೆಳೆಯುವ ಅಪಾಯವಿರುತ್ತದೆ.
7 ವ್ಯಾಯಾಮ ಮಾಡುವುದು ಇದರಿಂದ ರಕ್ತ ಪರಿಚಲನೆ, ಉತ್ತಮ ನಿದ್ರೆ ಹೀಗೆ ಹಲವು ಪ್ರಯೋಜನಗಳು ಉಂಟಾಗುತ್ತದೆ. 1991ರಲ್ಲಿ ಏಡ್ಸ್ ಜಾಗೃತಿ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಆಗ ಅಮೆರಿಕದ ನ್ಯೂಯಾರ್ಕ್‌ನಲ್ಲಿ ರೆಡ್ ರಿಬ್ಬನ್‌ನ್ನು ಕಟ್ಟಿಕೊಂಡು, ಇದನ್ನು ಜಾಗೃತಿಯ ಸಂಕೇತವಾಗಿ ಆಚರಿಸಲಾಯಿತು. connection to blood and the idea of passion—not only anger, but love ಎಂಬ ಸಂದೇಶ ರೆಡ್ ರಿಬ್ಬನ್ ಮೂಲಕ ತಿಳಿಸಲಾಯಿತು. ಏಡ್ಸ್ ರೋಗ ಮತ್ತು ಭಾರತ
· 1981ರಲ್ಲಿ ಚೆನ್ನೈನ ಲೈಂಗಿಕ ಕಾರ್ಯಕರ್ತೆಯರಲ್ಲಿ ಮೊದಲಿಗೆ ಏಡ್ಸ್ ರೋಗದ ಲಕ್ಷಣ ಕಂಡು ಬಂದಿತ್ತು.
· 1987ರಲ್ಲಿ ಸುಮಾರು 52,907 ಮಂದಿಯನ್ನು ತಪಾಸಣೆಗೆ ಒಳಪಡಿಸಿದಾಗ ಈ ಪೈಕಿ 135 ಜನರಲ್ಲಿ ಸೋಂಕು ಪತ್ತೆಯಾಯಿತು.
· ಕರ್ನಾಟಕದಲ್ಲಿ ಬಾಗಲಕೋಟೆಯಲ್ಲಿ ಅತಿಹೆಚ್ಚು ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದು ದೇಶದಲ್ಲಿ ಮೂರನೇ ಸ್ಥಾನ ಹೊಂದಿದೆ ಎಂಬ ವರ್ಷದ ಹಿಂದೆ ವರದಿ ಪ್ರಕಟಗೊಂಡಿತ್ತು.
· ಜಾಗತಿಕವಾಗಿ 32 ದಶಲಕ್ಷಕ್ಕೂ ಹೆಚ್ಚು ಜನರನ್ನು ಎಚ್‌ಐವಿ ಸೋಂಕು ಬಲಿ ಪಡೆದುಕೊಂಡಿದೆ. ಮುಂದುವರಿದ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳಿಗೂ ಇದರ ನಿಯಂತ್ರಣ ಬಹುದೊಡ್ಡ ಸಮಸ್ಯೆಯಾಗಿದೆ. ಅವರೊಂದಿಗೆ ಇರೋಣಾ…..
ಏಡ್ಸ್ ಪೀಡಿತರನ್ನು ಮುಟ್ಟುವುದರಿಂದ ಈ ರೋಗ ಹರಡುವುದಿಲ್ಲ. ಹಾಗಾಗಿ ಏಡ್ಸ್ ಪೀಡಿತರನ್ನು ಅಸ್ಪೃಶ್ಯರಂತೆ ಕಾಣುವುದು ಕೂಡ ಸಲ್ಲ. ಅವರಿಗೂ ಸಮಾಜದಲ್ಲಿ ಬದುಕುವ ಹಕ್ಕು ಇದ್ದು ಅವರನ್ನು ನಾವು ನಮ್ಮ ಸಮುದಾಯದೊಂದಿಗೆ ಸೇರಿಸಿಕೊಳ್ಳಬೇಕಿದೆ. ಅವರೊಂದಿಗೆ ನಾವು ಇದ್ದು ಆತ್ಮವಿಶ್ವಾಸ ನೀಡೋಣ ಎಂಬುದು ಆಶಯವಾಗಲಿ. -ಶಿವ ಸ್ಥಾವರಮಠ,
ಪ್ರೀತಿ ಭಟ್, ಸುಶ್ಮಿತಾ ಶೆಟ್ಟಿ,
ಧನ್ಯಾ ಬೋಳಿಯಾರ್
ನಿರ್ವಹಣೆ: ಮಂಗಳೂರು ಡೆಸ್ಕ್