Advertisement
ಹೀಗಾಗಿ ನೀರಿನ ಸಮಸ್ಯೆ ಎದುರಿಸಲು ಒಂದಲ್ಲ ಒಂದು ರೀತಿಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನೀರಿನ ಸಂರಕ್ಷಣೆ ಯಾವ ರೀತಿಯಲ್ಲಿ ಮಾಡಬಹುದು ಎಂಬ ಕೆಲವು ಚಿಂತನೆಗಳು, ಯೋಜನೆಗಳು ನಮ್ಮ ಬಳಿ ಇದೆಯಾದರೂ ಸ್ವಿಮ್ಮಿಂಗ್ ಪೂಲ್‌ನ ವಿಚಾರದಲ್ಲಿ ನಾವು ಹಿಂದೆ ಇದ್ದೇವೆ. ಯಾಕೆಂದರೆ ನಮ್ಮ ನಗರಗಳಲ್ಲಿ ಒಂದೆರಡು ಸಾರ್ವಜನಿಕ ಸ್ವಿಮ್ಮಿಂಗ್ ಪೂಲ್‌ಗಳಿವೆ. ಉಳಿದಂತೆ ಖಾಸಗಿ ಸ್ವಿಮ್ಮಿಂಗ್ ಪೂಲ್‌ಗಳು ಇರುತ್ತವೆ. ಆದರೆ ಸಾರ್ವಜನಿಕವಾಗಿ ಅತೀ ಹೆಚ್ಚು ಸ್ವಿಮ್ಮಿಂಗ್ ಪೂಲ್‌ಗಳನ್ನು ನಿರ್ಮಿಸಬೇಕು ಎಂಬ ಚಿಂತನೆ ಇದ್ದರೆ ಪ್ಯಾರಿಸ್‌ನಲ್ಲಿ ಅಳವಡಿಸಿದ ಯೋಜನೆಯನ್ನು ಜಾರಿಗೆ ತರಬಹುದು.
ಗ್ರಾಮೀಣ ಮಟ್ಟಕ್ಕಿಂತ ಹೆಚ್ಚಾಗಿ ನಗರ ಪ್ರದೇಶಗಳು ಬೇಸಗೆ ಸಂದರ್ಭದಲ್ಲಿ ಸುಡು ಬಿಸಿಲು ಕಾಡುತ್ತದೆ. ಯಾವುದಾದರೂ ಸ್ವಿಮ್ಮಿಂಗ್ ಪೂಲ್ ಇದ್ದರೆ ಸಾಕು ಹಾರಿ ಬಿಡೋಣ ಎಂದೆನಿಸುತ್ತದೆ. ಆದರೆ ನಗರದಲ್ಲಿ ಸಾರ್ವಜನಿಕರಿಗಾಗಿ ಹೆಚ್ಚು ಸ್ವಿಮ್ಮಿಂಗ್‌ಪೂಲ್‌ಗಳನ್ನು ನಿರ್ಮಿಸುವುದು ಅಸಾಧ್ಯ. ಮಾತ್ರವಲ್ಲ ಅದರ ನಿರ್ವಹಣೆಯೂ ಕಷ್ಟ. ಆದರೆ ಇದಕ್ಕೆಲ್ಲಾ ಪರಿಹಾರ ಎಂಬಂತೆ ಪ್ಯಾರಿಸ್‌ನ ಆಡಳಿತ ಮಂಡಳಿ ಕೈಗೊಂಡ ವಿನೂತನ ಯೋಜನೆಯೇ ಸ್ವಿಮ್ಮಿಂಗ್ ಹಾಟ್‌ಸ್ಪಾಟ್. ಹೌದು ಹರಿಯುತ್ತಿರುವ ನದಿಯನ್ನೇ ಸ್ವಿಮ್ಮಿಂಗ್ ಪೂಲ್‌ಗಳಾಗಿ ಪರಿವರ್ತಿಸುವುದು. ನದಿಗಳ ಇಕ್ಕೆಲಗಳಲ್ಲಿ ಸ್ವಿಮ್ಮಿಂಗ್ ಪೂಲ್ ಮಾದರಿಯಂತೆ ಅನೇಕ ಚೌಕಟ್ಟುಗಳನ್ನು ನಿರ್ಮಿಸಿ ಆ ಮುಖೇನ ಹೆಚ್ಚಿನ ಜನರಿಗೆ ಈಜಲು ಅವಕಾಶ ಕೊಡುವುದಾಗಿದೆ. ಇದರಿಂದಾಗಿ ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಬಳಸುವ ಕ್ಲೋರಿನ್ ನೀರಿನಿಂದ ಮುಕ್ತಿ ಪಡೆದು ಕ್ಲೋರಿನ್ ರಹಿತ ಉತ್ತಮ ನೀರಲ್ಲಿ
ಮನೋರಂಜನೆ ಪಡೆಯಬಹುದಾಗಿದೆ. ಈ ಮೂಲಕ ಬೇಸಗೆಯಲ್ಲಿ ಈಜುಕೊಳಕ್ಕಾಗಿ ತತ್ತರಿಸುವ ಜನರಿಗೆ ಮುಕ್ತಿ ದೊರೆತಂತಾಗುತ್ತದೆ.ಇಲ್ಲಿನ ಈ ಪೂಲ್‌ಗಳು ಮಕ್ಕಳಿಗೆ ಮತ್ತು ಹಿರಿಯರಿಗೆ ಎನ್ನುವಂತೆ 2 ವಿಭಾಗಗಳಲ್ಲಿ ವಿಂಗಡಿಸಲಾಗಿರುತ್ತದೆ. ದಿನದಲ್ಲಿ ಸಾವಿರಾರು ಈಜುಗಾರರು ಇಲ್ಲಿಗೆ ಆಗಮಿಸುತ್ತಾರೆ.
Related Articles
ಸ್ಮಾರ್ಟ್ ನಗರಿಯಾಗಿ ಬೆಳೆಯುತ್ತಿರುವ ಕಡಲ ತೀರಕ್ಕೆ ಅಂಟಿಕೊಂಡಿರುವ ನಮಮ್ ಮಂಗಳೂರು ಸುತ್ತಮುತ್ತ ಹಲವಾರು ನದಿಗಳು ಹರಿಯುತ್ತಿವೆ.
Advertisement
ಈ ನದಿಗಳಿಗೆ ಪ್ಯಾರಿಸ್‌ನಲ್ಲಿರುವ ಬಾಸ್ಸಿನ್ ಡೆ ವಿಲ್ಲೆಟ್ ಈಜುಕೊಳದ ಟಚ್ ಕೊಟ್ಟರೆ ಅದು ಅನಂತರ ಪ್ರವಾಸೋದ್ಯಮವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಮಾತ್ರವಲ್ಲದೇ ಒಂದಷ್ಟು ಕಠಿನ ಕ್ರಮಗಳನ್ನು ಕೈಗೊಂಡರೆ ಇದರಿಂದ ನದಿ ಮಾಲಿನ್ಯ ತಡೆಗಟ್ಟrಲೂ ಸಾಧ್ಯವಿದೆ.
– ವಿಶ್ವಾಸ್ ಅಡ್ಯಾರ್