Advertisement

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

11:19 PM Apr 13, 2024 | Team Udayavani |

ಬಾಗಲಕೋಟೆ: ವಿಜಯಪುರ ನಗರ ಶಾಸಕ, ಬಿಜೆಪಿ ಸ್ಟಾರ್‌ ಪ್ರಚಾರಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗಂಡಸಾಗಿದ್ದರೆ ವಿಜಯಪುರ ನಗರ ಕ್ಷೇತ್ರದಲ್ಲಿ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಸವಾಲು ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಯತ್ನಾಳ್‌ ಬಿಜೆಪಿ ಬಿಟ್ಟು ವಿಜಯಪುರದಲ್ಲಿ ಪಕ್ಷೇತರರಾಗಿ ನಿಲ್ಲಲಿ. ನಾನೂ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ. ನನಗಿಂತ ಒಂದೇ ಒಂದು ಮತ ಹೆಚ್ಚಿಗೆ ಪಡೆದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ರಾಜ್ಯದಲ್ಲಿ ಈ ವರ್ಷ 74 ಕಾರ್ಖಾನೆಗಳು ಕಬ್ಬು ನುರಿಸಿವೆ. ಒಂದೇ ಒಂದು ಕಾರ್ಖಾನೆಯಿಂದ ಹಣ ವಸೂಲಿಗೆ ಪ್ರಯತ್ನಿಸಿದ್ದನ್ನು ಸಾಬೀತುಪಡಿಸಿದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲವಾದರೆ ಅವರು ನಿವೃತ್ತಿ ಪಡೆಯಲಿ ಎಂದು ಸವಾಲೆಸೆದರು.

 

Advertisement

Udayavani is now on Telegram. Click here to join our channel and stay updated with the latest news.

Next