Advertisement

ಕಾರ್ಮಿಕರು ಸಂಘಟಿತರಾಗಲಿ

01:12 PM May 06, 2022 | Team Udayavani |

ಆಳಂದ: ಸಂಘಟಿತ ಹೋರಾಟದ ಮೂಲಕ ಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪುರೆ ಹೇಳಿದರು.

Advertisement

ಪಟ್ಟಣದ ಭೀಮನಗರದಲ್ಲಿ ಸ್ಥಳೀಯ ಕಾರ್ಮಿಕ ಕಲ್ಯಾಣ ಸಮಿತಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಕಾರ್ಮಿಕರ ಮೇಲೆ ಬಂಡವಾಳ ಶಾಹಿಗಳ ದಬ್ಟಾಳಿಕೆ, ಶೋಷಣೆ ವಿರುದ್ಧ ಡಾ| ಬಿ.ಆರ್‌. ಅಂಬೇಡ್ಕರ್‌ ಅನೇಕ ಹೋರಾಟಗಳನ್ನು ಮಾಡಿ ಕಾರ್ಮಿಕರಿಗೆ ಅನುಕೂಲವಾಗುವ ಕಾನೂನುಗಳನ್ನು ರಚಿಸಿದ್ದಾರೆ. 12 ಗಂಟೆ ಕೆಲಸದ ಬದಲು ಎಂಟು ಗಂಟೆ ಕೆಲಸ ಮಾಡಬೇಕು. ರಜೆ, ಆಸ್ಪತ್ರೆ, ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯಗಳನ್ನು ನೀಡುವ ಕುರಿತು ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ ಎಂದು ಹೇಳಿದರು.

ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಕಾನೂನಿನ ಮೂಲಕ ಸೌಲಭ್ಯಗಳ ಲಾಭ ಪಡೆದುಕೊಳ್ಳಲು ಸಂಘಟನೆ, ಶಿಕ್ಷಣ ಮತ್ತು ಹೋರಾಟಕ್ಕೆ ಮುಂದಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಶ್ರೇಷ್ಠವಾಗಿದೆ. ಇವರನ್ನು ಪ್ರೀತಿ, ಗೌರವದಿಂದ ಕಾಣಬೇಕು ಎಂದು ಹೇಳಿದರು.

Advertisement

ಬೆಳಮಗಿ ಬುದ್ಧ ವಿಹಾರದ ಬಂತೇ ಅಮರಜೋತಿ ಮಾತನಾಡಿ, ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಅವರನ್ನು ಸನ್ಮಾನಿಸುವ ಶ್ಲಾಘನೀಯ ಕಾರ್ಯಮಾಡಿದ್ದಾರೆ ಎಂದರು.

ಮಕ್ಕಳ ವೈದ್ಯ ಡಾ| ನಿಖೀಲ ಶಾಹ, ಅಂಗನವಾಡಿ ಮೇಲ್ವಿಚಾರಕಿ ಭಾಗಿರಥಿ ಎಂ. ಯಲ್ಲಶೆಟ್ಟಿ, ಪ್ರಾಂತ ರೈತ ಸಂಘದ ಪಾಂಡುರಂಗ ಮಾವೀನಕರ್‌, ಜಿಲ್ಲಾ ದಲಿತ ಸಮನ್ವಯ ಸಮಿತಿ ಸುಧಾಮ ಧನ್ನಿ, ಭೀಮನಗರದ ಶಾಮರಾವ್‌ ಸಾಲೇಗಾಂವ, ಪುರಸಭೆ ಸದಸ್ಯ ಲಕ್ಷ್ಮಣ ಝಳಕಿ, ಮುತ್ತಣ್ಣಾ ಸಾಲೇಗಾಂವ, ಅಪ್ಪಾಸಾಬ್‌ ತೀಥೆì, ಜಯಭೀಮ ದೊಡ್ಡಿ, ಸೂರ್ಯಕಾಂತ ಸಾಲೇಗಾಂವ, ಮಲ್ಲಿಕಾರ್ಜುನ ಮಂಟಗಿಕರ್‌, ಆನಂದರಾವ್‌ ಯಲಶೆಟ್ಟಿ, ಲಕ್ಷ್ಮಣ ಮುದಗಲೆ, ದಯಾನಂದ ಸಾಲೇಗಾಂವ, ಅನಿಲ ಯಲಶೆಟ್ಟಿ, ಸತೀಶ ಮೊದಲೆ, ಪ್ರಥ್ವಿರಾಜ ಮೊದಲೆ, ಲಕ್ಷ್ಮೀಕಾಂತ ತೋಳೆ, ಮಡಿವಾಳಪ್ಪ ಯಲಶೆಟ್ಟಿ ಮತ್ತಿತರರು ಇದ್ದರು.

ಸಮಿತಿ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣ್ಣಾರಾವ್‌ ಪಾಟೀಲ ಸ್ವಾಗತಿಸಿದರು, ಮಡಿವಾಳಯ್ಯ ಮಠಪತಿ ನಿರೂಪಿಸಿದರು, ವಿಕ್ರಮ ಅಷ್ಟಗಿ ವಂದಿಸಿದರು. ಕಾರ್ಮಿಕ ಗೀತೆ ಕಲಾವಿದ ಕಾಶಿನಾಥ ಬಿರಾದಾರ, ಕಲ್ಯಾಣಿ ತುಕಾಣಿ ಹಾಡಿದರು

Advertisement

Udayavani is now on Telegram. Click here to join our channel and stay updated with the latest news.

Next