Advertisement

ಮಹಿಳೆಯರು ಸಾಕ್ಷರತೆಗೆ ಒತ್ತು ನೀಡಲಿ: ಕಂದಕೂರ

05:27 PM Jul 27, 2022 | Team Udayavani |

ಯಾದಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಜೀವನ ಮಟ್ಟ ಬದಲಾವಣೆಗಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಕಾರಣ ಗ್ರಾಮೀಣ ಭಾಗದ ಮಹಿಳೆಯರು ಸಾಕ್ಷರತೆಗೆ ಒತ್ತು ನೀಡಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಪರಿವರ್ತನೆಯಾಗಬೇಕು ಎಂದು ಗುರುಮಠಕಲ್‌ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಸಲಹೆ ನೀಡಿದರು.

Advertisement

ಇಲ್ಲಿನ ಗುರುಮಠಕಲ್‌ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಪಂ ಹಾಗೂ ಶಿಶು ಅಭಿವೃದ್ಧಿ ಯೋಜನೆಯಡಿ ಗುರುಮಠಕಲ್‌, ಯಾದಗಿರಿ ತಾಲೂಕಿನ ಗುರುಮಿಠಕಲ್‌ ಮತಕ್ಷೇತ್ರದ 46 ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳಿಗೆ, ಅಮೃತ ಯೋಜನೆಯಡಿ ಬೀಜಧನವಾಗಿ ತಲಾ ಗುಂಪಿಗೆ ಲಕ್ಷ ರೂ. ಚೆಕ್‌ ವಿತರಿಸಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಉಳಿತಾಯ ಮಾಡಿದ ಹಣ ಹಾಗೂ ಸರ್ಕಾರದ ಯೋಜನೆಗಳ ಲಾಭದ ಹಣದಿಂದ ಜನರಿಗೆ ಅವಶ್ಯಕತೆ ಇರುವ ಕಿರು ಹಾಗೂ ಮಧ್ಯಮ, ಗುಡಿ ಕೈಗಾರಿಕೆಗಳನ್ನು ಕೈಗೊಳ್ಳುವ ಮೂಲಕ ಮುಖ್ಯ ವಾಹಿನಿಗೆ ಬರಬೇಕೆಂದು ತಿಳಿಸಿದರು.

ತಾ.ಪಂ ಇಒ ಬಸವರಾಜ ಶರಭೈ ಮಾತನಾಡಿ, ಮಹಿಳೆಯರು ಗುಂಪುಗಳಾಗಿ ಸಣ್ಣ ಯೋಜನೆ ಆಯ್ಕೆ ಮಾಡಿಕೊಂಡು, ಕಾರ್ಯಕ್ಷಮತೆಯಿಂದ ಕೆಲಸ ಮಾಡಬೇಕು. ಆ ಯೋಜನೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಯಾದಗಿರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ರಾಧಾ ಮಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಮಿಠಕಲ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಬಂಡಿಗೇರ, ನರೇಗಾ ಅ ಧಿಕಾರಿ ಮಲ್ಲಣ್ಣ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next