ರಾಮನಗರ: ಅತ್ಯಾಚಾರ, ದೌರ್ಜನ್ಯ, ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಮಸ್ಯೆಗೆ ಒಳಗಾದ ಮಹಿಳೆಹಾಗೂ ಹೆಣ್ಣು ಮಕ್ಕಳಿಗೆ ಸಹಾಯ ಒದಗಿಸಲು ಸಖೀ ಯೋಜನೆಜಾರಿಯಲ್ಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಜನಸಾಮಾನ್ಯರಿಗೆ ಮಾಹಿತಿ ನೀಡಿಎಂದು ಅಪರ ಜಿಲ್ಲಾಧಿಕಾರಿ ಜವರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿರುವ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪನೆಯಾಗಿರುವ ಸಖೀ (ಒನ್ ಸ್ಟಾಪ್ ಸೆಂಟರ್) ಕಾರ್ಯ ನಿರ್ವಹಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಸೆಂಟರ್‌ನಲ್ಲಿ ಘಟಕಾಧಿಕಾರಿಗಳು, ಆಪ್ತ ಸಮಾ ಲೋಚಕರು,ಕಾನೂನು ಸಲಹೆಗಾರರು ಹಾಗೂ ಮಹಿಳಾಪೊಲೀಸರುಕಾರ್ಯ ನಿರ್ವಹಿಸುತ್ತಾರೆ. ಅತ್ಯಾಚಾರಕೊಳಗಾದ ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆವೈದ್ಯಕೀಯ ಸೌಲಭ್ಯ,ಆಪ್ತ ಸಮಾ ಲೋಚನೆ, ಪುನರ್ವಸತಿ ಕಲ್ಪಿಸುವುದು,ಕಾನೂನು ನೆರವು ನೀಡುವುದು ಈ ಯೋಜನೆಯ ಉದ್ದೇಶ ವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ದೌರ್ಜನ್ಯಕೊಳಗಾದ ಮಹಿಳೆಯರು ಯಾವುದೇ ಆತಂಕಕ್ಕೆ ಒಳಗಾಗದೇ ಸಖೀ ಕೇಂದ್ರ ಸಂಪರ್ಕಿಸಿದರೆ, ಕೇಂದ್ರದ ಮೂಲಕವೇ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಲ್ಲಾ ರೀತಿಯ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುತ್ತದೆ ಎಂದು ಅಧಿಕಾರಿಗಳು ಸಭೆಯ ಗಮನ ಸೆಳೆದರು. ಸಖೀ ಕೇಂದ್ರದ ಸಹಾಯವಾಣಿ ಸಂಖ್ಯೆ 181 ಅಥವಾ ಕೇಂದ್ರದ ದೂರವಾಣಿ ಸಂಖ್ಯೆ 080 29500223 ಮೂಲಕ ಸಂಪರ್ಕಿಸಬಹುದು ಎಂದರು.
ಪೋಷಣ್ ಅಭಿಯಾನದ ಬಗ್ಗೆ: ಜಿಲ್ಲೆಯಲ್ಲಿ ಪೋಷಣ್ ಅಭಿಯಾನದ ಬಗ್ಗೆಯೂ ಎಡಿಸಿ ಜವರೇ ಗೌಡ ಮಾಹಿತಿ ಪಡೆದುಕೊಂಡರು. ಜನವರಿ 2020ರಿಂದ ಜಾರಿಯಲ್ಲಿದ್ದು, ಅಂಗನವಾಡಿ ಕೇಂದ್ರಗಳಲ್ಲಿದ್ದ 1,543 ಮಕ್ಕಳಿಗೆ ಸರಿಯಾದ ಸಮಯದಲ್ಲಿ ನಿಗದಿಪಡಿ ಸಿರುವ ಆಹಾರ ಪದಾರ್ಥಗಳು ತಲುಪುವಂತೆ ನಿಗಾವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಕೊಟ್ಟರು. ಯಾವುದೇ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಹೆಚ್ಚಿನ ಪೌಷ್ಟಿಕತೆ ಒದಗಿಸಲು ಆರೋಗ್ಯ ಇಲಾಖೆ ಗಮನಕ್ಕೆ ತರುವಂತೆ ತಿಳಿಸಿದರು.
ಸ್ಥಳಾವಕಾಶವಿರುವ ಅಂಗನವಾಡಿ ಕೇಂದ್ರಗಳಲ್ಲಿಪೌಷ್ಟಿಕ ಸಸ್ಯಗಳ ಕೈತೋಟ ನಿರ್ಮಾಣಕ್ಕೆ ಒತ್ತು ನೀಡಿ ಎಂದ ಅವರು, ತೋಟ ನಿರ್ಮಿಸಲು ನರೇಗಾಯೋಜನೆಯ ನೆರವು ಪಡೆದು. ತೋಟಗಾರಿಕೆ ಇಲಾಖೆಯಿಂದ ಗಿಡಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಆರ್.ಸಿ.ಎಚ್‌ಅಧಿಕಾರಿ ಡಾ. ಪದ್ಮಾ, ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್,ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಗಾಯಿತ್ರಿ ದೇವಿ, ಪೋಷಣ್ ಅಭಿಯಾನದ ಜಿಲ್ಲಾಸಂಯೋಜಕ ಚೇತನ್ ಕುಮಾರ್, ಕಾರ್ಯಕ್ರಮ ಸಹಾಯಕ ಪ್ರವೀಣ್ ಉಪಸ್ಥಿತರಿದ್ದರು.