Advertisement

ಉಚಿತ ನಿವೇಶನ ಕೇಳಿಲ್ಲ ಎಂದು ಪ್ರಮಾಣ ಮಾಡಲಿ

05:28 PM Aug 10, 2021 | Team Udayavani |

ಬಂಗಾರಪೇಟೆ: ಸಂಸದ ಎಸ್‌.ಮುನಿಸ್ವಾಮಿ ನನ್ನ ಎಸ್‌.ಎನ್‌.ಸಿಟಿಯಲ್ಲಿ ಉಚಿತವಾಗಿ ನಿವೇಶನ ಕೇಳಿಲ್ಲ ಎಂದು ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡಲಿ ಎಂದು ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಸವಾಲು ಹಾಕಿದರು.

Advertisement

ತಾಲೂಕಿನ ಎಳೇಸಂದ್ರ ಗ್ರಾಪಂ ಕೋಟರಾಮ ಗುಳ್ಳು ರಸ್ತೆಯಿಂದ ಕನಮನಹಳ್ಳಿವರೆಗೆ 65 ಲಕ್ಷರೂ.ನಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸದ ಎಸ್‌.ಮುನಿಸ್ವಾಮಿಯಷ್ಟು ಭ್ರಷ್ಟರು ಮತ್ತೂಬ್ಬರಿಲ್ಲ, ಎಸ್‌.ಎನ್‌. ಸಿಟಿಯಲ್ಲಿ ಅವರು ಕೇಳಿದಷ್ಟು ನಿವೇಶನ ನೀಡಿದ್ದರೆ ನಾನು ಒಳ್ಳೆಯವನಾಗುತ್ತಿದ್ದೆ, ನಿರಾಕರಿಸಿದ್ದಕ್ಕೆ ನನ್ನ ಮೇಲೆ ಗೋಮಾಳ, ಗುಂಡು ತೋಪು ಒತ್ತುವರಿ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ತನಿಖೆ ಮಾಡಿಸಲಿ: ವಿನಾಕಾರಣ ಆರೋಪ ಮಾಡುವುದರಿಂದ ಲಾಭವಿಲ್ಲ, ಮೊದಲು ದಾಖಲೆ ನೀಡಲಿ, ಅವರದ್ದೇ ಸರ್ಕಾರ ಇದೆ, ತನಿಖೆ ಮಾಡಿಸಲಿ, ಇಲ್ಲವೆ ಕಾನೂನು ಹೋರಾಟ ಮಾಡಲಿ, ಅದು ಬಿಟ್ಟು ಸಾರ್ವಜನಿಕವಾಗಿ ತೇಜೋವಧೆ ಮಾಡುವುದು ಅವರ ಘನತೆಗೆ ಸಲ್ಲದು ಎಂದು ಹೇಳಿದರು.

ತಂಗುದಾಣವೇ ಇವರ ಸಾಧನೆ: ಎಂಪಿಯಾಗಿ 2 ವರ್ಷಗಳಾಗಿದೆ. ಜಿಲ್ಲೆಯಲ್ಲಿ ಏನೇನೂ ಮಾಡಿಲ್ಲ, ನಾಲ್ಕು ಬಸ್‌ ಪ್ರಯಾಣಿಕ ತಂಗುದಾಣ, ನಾಲ್ಕು ಹೈಮಾಸ್ಟ್‌ ದೀಪಗಳು ಇದೇ ಅವರ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇಂತಹವರು ನನ್ನ ಬಗ್ಗೆ ಟೀಕೆ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಅರ್ಜಿ ಹಾಕಿ ಜಮೀನು ಪಡೆದಿದ್ದಾರೆ: ನನ್ನ ತಾಯಿ ಹೆಸರಿಗೆ ಗೋಮಾಳ ಮಾಡಿಕೊಡಲಾಗಿದೆ ಎಂಬ ಆರೋಪ ಸುಳ್ಳು. ಅವರು ಅರ್ಜಿ ಸಲ್ಲಿಸಿದ್ದರು ಅದರಂತೆ ನ್ಯಾಯಯುತವಾಗಿ ಜಮೀನು ಬಂದಿದೆ.ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನನ್ನ ತಾಯಿ ಸರ್ಕಾರದಿಂದ ಜಮೀನು ಮಂಜೂರು ಮಾಡಿಕೊಳ್ಳಲು ಅರ್ಹರಲ್ಲವೇ,ಕುಪ್ಪನಹಳ್ಳಿ ಗ್ರಾಮದಲ್ಲಿ ಜೀವನ ನಡೆಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

Advertisement

ಸ್ವಯಂ ಚಿಂತನೆ ಮಾಡಿ ಹೇಳಿಕೆ ನೀಡಿ: ಖರಾಬು ಜಮೀನು ಮಾರಾಟ ಮಾಡಿ, ಅಕ್ರಮವಾಗಿ ಪೆಟ್ರೋಲ್‌ ಬಂಕ್‌ ನಿರ್ಮಾಣ, ಅದೇ ರೀತಿ ಗೋಮಾಳ ಜಮೀನಿನಲ್ಲಿ ಅಕ್ರಮ ನಿವೇಶನ ಮಾಡಿ ಮಾರಾಟ ಮಾಡಿಕೊಂಡವರ ಮಾತು ಕೇಳುವುದನ್ನು ಬಿಟ್ಟು ಸಂಸದರು ಮೊದಲು ಸ್ವಯಂ ಚಿಂತನೆ ಮಾಡಿ ಹೇಳಿಕೆ ನೀಡಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ:ರಾಜ್ಯದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಬಿ.ಸಿ.ಪಾಟೀಲ್ ಮನವಿ

ಬಿ.ಪಿ.ವೆಂಕಟಮುನಿಯಪ್ಪ ಶಾಸಕರಾಗಿದ್ದಾಗ ಮಲ್ಲೇಶನಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸಲಾಗದವರು ಇಂದು ಅವರ ಮಗ ಅದೇ ಗ್ರಾಮಕ್ಕೆ ಹೋಗಿ ಜನರ ಸಮಸ್ಯೆ ಆಲಿಸುವ ನಾಟಕ ಮಾಡುತ್ತಿರುವುದಕ್ಕೆ ನಾಚಿಕೆಯಾಗಬೇಕೆಂದು ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್‌ರನ್ನೂ ತರಾಟೆ ತೆಗೆದು ಕೊಂಡರು. ಈ ವೇಳೆ ಎಳೇಸಂದ್ರ ಗ್ರಾಪಂ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಬೂದಿಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ವಿ.ನಾಗರಾಜ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಚ್‌.ಕೆ.ನಾರಾಯಣಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ಟಿ.ಮಹಾದೇವ್‌, ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷ ಅರ್‌.ವಿಜಯಕುಮಾರ್‌, ಬೂದಿ ಕೋಟೆ ಗ್ರಾಪಂ ಉಪಾಧ್ಯಕ್ಷ ಬಿ.ಆರ್‌.ಮಂಜುನಾಥ್‌, ಮುಖಂಡರಾದ ಬಿ.ಕೃಷ್ಣಪ್ಪಶೆಟ್ಟಿ, ಮುನಿಸ್ವಾಮಿ, ಎಸ್‌.ಕೆ.ವೆಂಕಟರಾಮಯ್ಯ, ಜಿ.ಆರ್‌. ಸುರೇಶ್‌, ಒಬಿಸಿ ಅಧ್ಯಕ್ಷ ಶೋಬನ್‌ಬಾಬು, ತಿಮ್ಮಯ್ಯ, ಕೊಡಗುರ್ಕಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next