Advertisement

ಪಕ್ಷ-ಜಾತಿ ಭೇದ ಮರೆತು ಕನ್ನಡ ಕಟ್ಟುವ ಕೆಲಸವಾಗಲಿ

04:22 PM Jun 19, 2022 | Team Udayavani |

ಮುನವಳ್ಳಿ: ಕನ್ನಡದ ನೆಲ, ಜಲ, ಭಾಷೆ ರಕ್ಷಣೆಗೆ ಎಲ್ಲರೂ ಪಕ್ಷಭೇದ, ಜಾತಿ ಭೇದ ಮರೆತು ಒಂದಾದರೆ ಮಾತ್ರ ಕನ್ನಡ ಕಟ್ಟುವ ಕೆಲಸವಾಗುತ್ತದೆ. ತಾಯ್ನಾಡು ಹಾಗೂ ಮಾತೃಭಾಷೆ ಉಳಿಸುವ ಕೆಲಸವಾಗಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

Advertisement

ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮುನವಳ್ಳಿ ಹೋಬಳಿ ಘಟಕದ ನೂತನ ಪದಾಧಿ ಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಅನ್ಯ ಭಾಷೆಗಳು ಹೊಕ್ಕು, ಕನ್ನಡ ನುಂಗಿ ಹಾಕುತ್ತಿವೆ. ಇದರಿಂದ ನಮ್ಮ ಕನ್ನಡ ಸಂಸ್ಕೃತಿ ಬಿಟ್ಟು ಬೇರೆ ಭಾಷೆಗಳ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡುವ ಪ್ರತಿಜ್ಞೆ ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂದರು.

ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ, ಎಲ್ಲ ಭಾಷೆಯ ಪತ್ರಿಕೆಗಳು ಸಿಗುವ ರಾಜ್ಯ ಕರ್ನಾಟಕ ಮಾತ್ರ. ಏಕೆಂದರೆ, ತಮಿಳಿನಲ್ಲಿ ತಮಿಳು ಪತ್ರಿಕೆ, ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ, ಆಂಧ್ರದಲ್ಲಿ ತೆಲುಗು ಪತ್ರಿಕೆ ಮಾತ್ರ ಸಿಗುತ್ತವೆ. ಆದರೆ ನಮ್ಮ ಕರ್ನಾಟಕದಲ್ಲಿ ಎಲ್ಲ ಭಾಷೆ ಪತ್ರಿಕೆಗಳು ದೊರೆಯುತ್ತವೆ ಎಂದರು.

ಬಸವರಾಜ ನಾವಲಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ| ವೈ.ಎಂ. ಯಾಕೊಳ್ಳಿ, ಟಿ.ಎಂ. ಕಾಮಣ್ಣವರ, ಮುಖಂಡರಾದ ರಮೇಶ ಗೋಮಾಡಿ, ರವೀಂದ್ರ ಯಲಿಗಾರ, ಉಮೇಶ ಬಾಳಿ, ಪಂಚನಗೌಡ ದ್ಯಾಮನಗೌಡರ, ಪುರಸಭೆ ಮುಖ್ಯಾಧಿಕಾರಿ ರಮೇಶ ಹಿಟ್ಟಣಗಿ, ಅನ್ನಪೂರ್ಣ ಲಂಬೂನವರ, ಮುನವಳ್ಳಿ ಹೋಬಳಿ ಘಟಕದ ನೂತನ ಅಧ್ಯಕ್ಷ ಮೋಹನ ಸರ್ವಿ ಆಗಮಿಸಿದ್ದರು.

Advertisement

ಇದೇ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸು ಬೇವಿನಗಿಡದ, ಡಾ| ಎ.ಎಸ್‌. ಅಮೋಘಿಮಠ, ಡಾ| ಎಚ್‌.ಎಸ್‌. ಗೋಟಿ, ಬಿ.ಬಿ. ಹುಲಿಗೊಪ್ಪ, ಸುಧಿಧೀರ ವಾಘೇರಿ, ಅಶ್ವಿ‌ನಿ ಪಾತಾಳಿ, ಸಹನಾ ರಾಯರ ಅವರನ್ನು ಸನ್ಮಾನಿಸಲಾಯಿತು.

ಅಲ್ಲದೇ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಿತು. ಈ ವೇಳೆ ಸುರೇಶ ಜಾವೂರ, ಶ್ರೀಕಾಂತ ಮಿರಜಕರ, ಮಂಜುನಾಥ ಭಂಡಾರಿ, ಗುರುನಾಥ ಪತ್ತಾರ, ಸುಧಿಧೀರ ವಾಘೇರಿ, ಪ್ರಶಾಂತ ತುಳಜಣ್ಣವರ, ವೀರಣ್ಣ ಕೊಳಕಿ, ರಮೇಶ ಮುರಂಕರ, ಗಂಗಾಧರ ಗೊರಾಬಾಳ, ಟಿ.ಎನ್‌. ಮುರಂಕರ, ಬಿ.ಎಚ್‌. ಖೊಂದುನಾಯ್ಕ, ಬಾಳು ಹೊಸಮನಿ, ಜಿ.ಎಸ್‌. ಚಿಪ್ಪಲಕಟ್ಟಿ, ನಾಗೇಶ ಹೊನ್ನಳ್ಳಿ, ರಾಧಾ ಕುಲಕರ್ಣಿ, ಅನುರಾಧಾ ಬೆಟಗೇರಿ, ಶಾರದಾ ದ್ಯಾಮನಗೌಡರ, ಸುಮಾ ಯಲಿಗಾರ, ಪುಷ್ಪಾ ಪಶುಪತಿಮಠ, ವೈ. ಎಫ್‌. ಶಾನಭೋಗ, ವಿರಾಜ ಕೊಳಕಿ, ಎಂ.ಬಿ. ಅಷ್ಟಗಿಮಠ, ಅರುಣಗೌಡ ಪಾಟೀಲ, ಪ್ರಾಚಾರ್ಯ ಎಂ.ಎಚ್‌. ಪಾಟೀಲ, ಶ್ರೀಶೈಲ ಗೋಪಶೆಟ್ಟಿ, ಶಂಕರ ರಾಠೊಡ, ರಾಜೇಶ್ವರಿ ಬಾಳಿ, ಎಂ.ಜಿ. ಹೊಸಮಠ, ಅನಿತಾ ಯಲಿಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next