Advertisement

ಜನಸಂಖ್ಯೆ ನಿಯಂತ್ರಣಕ್ಕೆ ಯುವಶಕ್ತಿ ಕೈ ಜೋಡಿಸಲಿ

03:53 PM Jul 20, 2022 | Shwetha M |

ವಿಜಯಪುರ: ದೇಶದ ಹಿತಕ್ಕಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಯುವಸಮೂಹ ಕೈ ಜೋಡಿಸಬೇಕು ಎಂದು ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ| ಸಂಪತ್‌ ಗುಣಾರಿ ಮನವಿ ಮಾಡಿದರು.

Advertisement

ನಗರದ ನವಬಾಗನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಂಖ್ಯೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ, ಶಾಶ್ವತ ವಿಧಾನಗಳನ್ನು ಜಾರಿಗೆ ತಂದಿವೆ ಎಂದರು.

ಅನಪೇಕ್ಷಿತ ಗರ್ಭಧಾರಣೆ ತಡೆಗಟ್ಟಬೇಕು. ಮದುವೆಯಾಗಿ 3 ವರ್ಷದವರೆಗೆ ಗರ್ಭಧಾರಣೆ ಮುಂದೂಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ತಾತ್ಕಾಲಿಕ ಗರ್ಭನಿರೋಧಕ ಗುಳಿಗೆಗಳಾದ ಮಾಲಾ-ಡಿ ಛಾಯಾ, ಅಂತರ ಚುಚ್ಚು ಮದ್ದು, ಪುರುಷರಿಗಾಗಿ ನಿರೋಧ ಇತ್ಯಾದಿ ತಾತ್ಕಾಲಿಕ ವಿಧಾನಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಕವಿತಾ ದೊಡ್ಡಮನಿ ಮಾತನಾಡಿ, ವಿಶ್ವ ಜನಸಂಖ್ಯಾ ದಿನ ಆಚರಣೆಯನ್ನು ಅರಿಯುವುದು ಇಂದಿನ ತುರ್ತು ಅಗತ್ಯವಾಗಿದೆ. 1987 ಜುಲೈ 11ಕ್ಕೆ ಪ್ರಚಂಚದ ಜನಸಂಖ್ಯೆ 500 ಕೋಟಿಗೆ ತಲುಪಿದ್ದ ಪ್ರಯುಕ್ತ ವಿಶ್ವ ಸಂಸ್ಥೆಯ ತಜ್ಞರೆಲ್ಲರೂ ಸೇರಿ ಜನಸಂಖ್ಯೆ ಬೆಳವಣಿಗೆಯ ಗಂಭೀರತೆ ಕುರಿತು ಗಂಭೀರ ಚಿಂತನೆ ನಡೆಸಿದರು. ಹೀಗಾಗಿ ತುರ್ತಾಗಿ ನಿಯಂತ್ರಣ ಮಾಡದಿದ್ದರೆ ಮುಂದೊಂದು ದಿನ ತೀವ್ರ ಪರಿಣಾಮ ಎದುರಿಸುವ ಅಪಾಯವಿದೆ ಎಂದು ಎಚ್ಚರಿಸಿದರು.

ಪರಿಣಾಮ 1989ರಂದು ಮೊದಲ ಬಾರಿಗೆ ವಿಶ್ವ ಜನಸಂಖ್ಯೆ ದಿನ ಆಚರಿಸಲಾಯಿತು. ಅಂದಿನಿಂದ ಪ್ರಪಂಚದ 200ಕ್ಕಿಂತ ಹೆಚ್ಚು ದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಜನ ಸಾಮಾನ್ಯರಲ್ಲಿ ಜನಸಂಖ್ಯಾ ನ್ಪೋಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿ ಸಲಾಗುತ್ತಿದೆ ಎಂದು ವಿವರಿಸಿದರು.

Advertisement

ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜನಸಂಖ್ಯೆ ನಿಯಂತ್ರಣದಲ್ಲಿ ಯುವಜವರ ಪಾತ್ರದ ಕುರಿತ ಭಾಷಣ ಸ್ಪರ್ಧೆಯಲ್ಲಿ 16 ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೂರು ವಿದ್ಯಾರ್ಥಿಗಳು ಮೊದಲ ಮೂರು ಸ್ಥಾನ ಪಡೆದರು. ಮಹಮ್ಮದ ಮನ್ಸೂರ, ಪವಿತ್ರಾ ಗೊರನಾಳ, ಧನರಾಜ ಚವ್ಹಾಣ ಮೊದಲ ಸ್ಥಾನ ಪಡೆದರು. ಪ್ರಾಚಾರ್ಯ ಎ.ಟಿ.ಮುದಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ.ಕೊಲೂರ, ಗುರು ಹಿರೇಮಠ, ಸುರೇಶ ಹೊಸಮನಿ, ಆರ್‌. ಎಂ.ಹಂಚಿನಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next