Advertisement

ಕಾರ್ಮಿಕರ ಶೋಷಣೆ ತೊಲಗಲಿ

06:41 PM Nov 04, 2021 | Team Udayavani |

ಕೆರೂರ: ಡಾ| ಬಿ.ಆರ್‌. ಅಂಬೇಡ್ಕರ್‌ ಆಶಯದಂತೆ ಸಂವಿಧಾನದಲ್ಲಿ ಕೂಲಿ ಕಾರ್ಮಿಕರಿಗೆ ಸ್ವಾತಂತ್ರ್ಯ, ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅವರದ್ದು ಶೋಷಣೆ ಮುಕ್ತ, ಸೌಲಭ್ಯಯುಕ್ತ ಬದುಕಾಗಲಿ ಎಂದು ರಾಮಾರೂಢ ಮಠದ ಪರಮರಾಮಾರೂಢ ಶ್ರೀ ಹೇಳಿದರು.

Advertisement

ಜಲಗೇರಿ ಗ್ರಾಮದಲ್ಲಿ ಕರ್ನಾಟಕ ಕಾರ್ಮಿಕರ ವೇದಿಕೆ ಬಾಗಲಕೋಟೆ ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ “ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತ ನಾಡಿದರು. ಇಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯ, ಸೌಕರ್ಯ ದೊರಕುತ್ತಿಲ್ಲ. ಬಡ ಕೂಲಿಗಳ ಮೇಲಿನ ಶೋಷಣೆ ಹೋಗಲಾಡಿಸಲು ಕರ್ನಾಟಕ ಕಾರ್ಮಿಕರ ವೇದಿಕೆ ಉತ್ತರ ಕರ್ನಾಟಕ್ಕೆ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.

ಬೆಂಗಳೂರಿನ ಯಶೋಧಾ ಎಜ್ಯುಕೇಶನ್‌ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕಿ ವಾಣಿ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಕಾರ್ಮಿಕರ ವೇದಿಕೆ ಹುಟ್ಟು ಹಾಕಿ ಉತ್ತರ ಕರ್ನಾಟಕದಲ್ಲಿ ಶೋಷಿತ ವರ್ಗಕ್ಕೆ ಸಂಘಟನೆ ಮೂಲಕ ಸೌಲಭ್ಯ ಹಾಗೂ ನ್ಯಾಯ ಕೊಡಿಸುವ ಕೆಲಸ ಕಾರ್ಮಿಕ ಸಂಘಟನೆ ಮಾಡುತ್ತಿದೆ ಎಂದರು.

ಮಾಜಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಕಾರ್ಮಿಕರ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ನಟ ಪುನೀತ್‌ಗೆ ಶ್ರದ್ಧಾಂಜಲಿ: ಕರ್ನಾಟಕ ಕಾರ್ಮಿಕ ವೇದಿಕೆಯಿಂದ ನಟ ಪುನೀತ್‌ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ರಸಮಂಜರಿ ಕಾರ್ಯಕ್ರಮ ನಡೆಯಿತು.

Advertisement

ಸಾಧಕರ ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕ ಎಲ್‌.ಎಚ್‌. ನದಾಫ್‌, ಗುರುಪಾದಯ್ನಾ ಹಿರೇಮಠ, ವಾಣಿ ಶೆಟ್ಟಿ, ಗುರುನಾಥ ಶೀಲವಂತರ, ಹಣಮಂತ ಶಿರಗುಪ್ಪಿ ಅವರಿಗೆ ವೇದಿಕೆಯಿಂದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಹಿರೇಮಠದ ಡಾ| ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ಕಾರ್ಮಿಕರ ವೇದಿಕೆ ರಾಜ್ಯಾಧ್ಯಕ್ಷ ರಾ.ಪ್ರಕಾಶ, ರಾಜ್ಯ ಉಪಾಧ್ಯಕ್ಷ ಹುಸೇನಸಾಬ ಕೆರೂರ, ಜಿಲ್ಲಾಧ್ಯಕ್ಷ ಮಹ್ಮದಅಲಿ ಕೆರೂರ, ಪಿಕೆಪಿಎಸ್‌ ಅಧ್ಯಕ್ಷ ಎಂ.ಎಸ್‌. ಕೆರೂರ, ನಾಗು ಎಂ, ಮಹ್ಮದರಫೀಕ್‌ ಪೀರಖಾನ, ಗ್ರಾಪಂ ಅಧ್ಯಕ್ಷ ಮುತ್ತಪ್ಪ ಕುಪಲಿ, ಗ್ರಾಪಂ ಸದಸ್ಯೆ ಮೈರುನಬಿ ಕೆರೂರ, ರಾಜೇಸಾಬ ಮೊಕಾಶಿ, ಸುನಂದಾ ಮಾದರ, ಹಣಮಂತಗೌಡ ಪಾಟೀಲ, ಶಿವಾನಂದ ಉದಗಟ್ಟಿ, ಬೀರಪ್ಪ ಕುಪಲಿ,
ರಂಗಪ್ಪ ನಿರುಗ್ಗಿ, ಎ.ಡಿ. ಪಠಾಣ, ಹುಸೇನಸಾಬ ಹುಲ್ಲಿಕೇರಿ, ಸಿ.ಎನ್‌. ಗಿಡ್ಡಪ್ಪಗೋಳ, ಹಸನಸಾಬ ಹುದ್ದಾರ, ಹೊಳಬಸಪ್ಪ ಶೀಲವಂತರ, ಬಾಬುಸಾಬ ಮೊಕಾಶಿ, ಎಂ.ಬಿ. ಮಸೂತಿ ಇತರರಿದ್ದರು.

ಶೋಷಿತರು ಹಾಗೂ ಅತೀ ಬಡ ಕುಟುಂಬದ ಗ್ರಾಮಸ್ಥರು ಇಲ್ಲಿದ್ದರೆ ನಿಮ್ಮ ಕುಟುಂಬದವರೇ ಎಂದು ಭಾವಿಸಿ ಅಂತಹ ಮಕ್ಕಳನ್ನು ನಮ್ಮ ಸಂಸ್ಥೆಗೆ ಕಳಿಸಿ ಸಹಾಯ ಪಡೆದುಕೊಳ್ಳಿ.
ವಾಣಿ ಶೆಟ್ಟಿ,
ಯಶೋಧಾ ಎಜ್ಯುಕೇಶನ್‌ ಚಾರಿಟೇಬಲ್‌
ಟ್ರಸ್ಟ್‌ ಸಂಸ್ಥಾಪಕಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next