Advertisement

ಗ್ರಾಮಸ್ಥರು ಸ್ವಾಮಿತ್ವ ಯೋಜನೆ ಲಾಭ ಪಡೆಯಲಿ

03:15 PM Oct 04, 2020 | Suhan S |

ಕನಕಪುರ: ಆಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಆಸ್ತಿಗಳಿಗೆ ನಿಖರವಾದ ದಾಖಲೆಗಳನ್ನು ಉಚಿತವಾಗಿ ನೀಡಲು ಸರ್ಕಾರ ನಿಮ್ಮ ಮನೆ ಬಾಗಿಲಿಗೆ ತಂದಿರುವ ಸ್ವಾಮಿತ್ವ ಯೋಜನೆಯ ಉಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮು ತಿಳಿಸಿದರು.

Advertisement

ತಾಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ಇಲಾಖೆಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಸ್ವಾತಂತ್ರ ಪೂರ್ವದಿಂದಲೂ ಗ್ರಾಮ ಪಂಚಾಯ್ತಿ ಆಸ್ತಿಗಳು ಗಣಕೀಕೃತವಾಗಿಲ್ಲ.  ಆಡಳಿತಾತ್ಮಕ ಉಪಯೋಗಕ್ಕೆ ಆಸ್ತಿಗಳ ನಿಖರವಾದದಾಖಲೆಗಳಅಗತ್ಯವಿದೆ.ಈ ಹಿಂದೆ ಇ ಖಾತೆ ಪಡೆಯಬೇಕಾದರೆ,ತಿಂಗಳುಗಟ್ಟಲೇ ಕಾಯಬೇಕಿತ್ತು. ಆದರೆ ಪ್ರಸ್ತುತ ಕಾಯುವ ಅಗತ್ಯವಿಲ್ಲ ಎಂದರು. ತಾಲೂಕಿನ 4 ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾರಂಭವಾಗಿದ್ದು, ಅಧಿಕಾರಿಗಳು ಸರ್ವೆಗೆ ಬಂದಾಗ ಗ್ರಾಮದ ಜನರು ಸಹಕಾರ ನೀಡಿದರೆ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.

ಸರ್ವೇ ಇಲಾಖೆ ಮೇಲ್ವಿಚಾರಕ ನಂದೀಶ್‌ ಮಾತನಾಡಿ, ಆಧುನಿಕ ತಂತ್ರಜ್ಞಾನ ಆಧಾರಿತ ಡ್ರೋನ್‌ ಮೂಲಕ ಸರ್ವೆ ಮಾಡಿ ನಿಮ್ಮ ಆಸ್ತಿ ದಾಖಲೆ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ವಿಜ್ಞಾನ ಬೆಳೆದಂತೆಲ್ಲ. ಜನ ಸಂಖ್ಯೆಯೂ ಬೆಳೆದು ಗ್ರಾಮಗಳ ಗಡಿ ವಿಸ್ತರಣೆಯಾಗಿ ಕೃಷಿಯೇತರ ಮನೆ ಆಸ್ತಿಗಳ ದಾಖಲೆ ಗ್ರಾಮ ಪಂಚಾಯ್ತಿಗಳಲ್ಲಿ ಸೇರ್ಪಡೆಯಾಗಿಲ್ಲ. ನಿಮ್ಮ ಆಸ್ತಿಗಳಿಗೆ ನಿಖರವಾದ ದಾಖಲೆ ಇದ್ದರೆ, ಸೌಲಭ್ಯ ಪಡೆಯಬಹುದು. ಅಲ್ಲದೆ ಆಸ್ತಿ ತೆರಿಗೆ ಸಂಗ್ರಹಿಸಲು ಅನುಕೂಲವಾಗಲಿದೆ. ಹಾಗಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಲು ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಂಡ ದೇಶದ 6 ರಾಜ್ಯಗಳಲ್ಲಿ ನಮ್ಮ ರಾಜ್ಯವು ಸೇರ್ಪಡೆಗೊಂಡಿದೆ. ರಾಜ್ಯ ಸರ್ಕಾರ ಆಯ್ಕೆ ಮಾಡಿಕೊಂಡ 16 ಜಿಲ್ಲೆಗಳಲ್ಲಿ ರಾಮನಗರ ಜಿಲ್ಲೆಯು ಸೇರಿದೆ. ಹಾಗಾಗಿ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ಕೆ.ಎಂ.ಮಾದೇಶ್‌, ಮುನಿ ಹುಚ್ಚೇಗೌಡ, ಶಿವರಾಜು, ಅಶೋಕ, ಷಣ್ಮುಕಿ, ಕಿರಣ್,ಶಿವಣ್ಣ,ಜಮೀರ್‌,ಸರ್ವೇಇಲಾಖೆಯ ಟಿ.ಇ.ಪ್ರಕಾಶ್‌, ಪುಟ್ಟಬೋರೇಗೌಡ, ಧರ್ಮರಾಜು, ರವಿ, ಅನಿಲ…, ರುದ್ರೇಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next