Advertisement

“ರಾಷ್ಟ್ರ ರಕ್ಷಣೆಗೆ ಮಹತ್ತರ ಕೊಡುಗೆ ನೀಡಿದ ಸೈನಿಕರಿಗೆ ಗೌರವ ಸಿಗಲಿ’

09:03 PM May 17, 2019 | Team Udayavani |

ಸೋಮವಾರಪೇಟೆ: ರಾಷ್ಟ್ರ ರಕ್ಷಣೆಗೆ ಕೊಡಗು ಜಿಲ್ಲೆ ಮಹತ್ತರವಾದ ಕೊಡುಗೆ ನೀಡಿದ ಸೈನಿಕರಿಗೆ ಗೌರವ ಸಿಗಬೇಕೆಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.

Advertisement

ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್‌ ವಸತಿ ಕೇಂದ್ರದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು. ಕದಳಿ ಮಹಿಳಾ ವೇದಿಕೆ .ರೋಟರಿ ಸೋಮವಾರಪೇಟೆ ಹಿಲ್ಸ್‌ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ಬಸವ ಜಯಂತಿ ಹಾಗೂ ಕಾಯಕ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಶೌರ್ಯ ಚಕ್ರ ಪುರಸ್ಕೃತ ವೀರಯೋದ ಮಹೇಶ್‌ ರವರನ್ನು ಸಮ್ಮಾನಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್‌.ಮಹೇಶ್‌ ಮಾತನಾಡಿದರು.ಸಮಾರೋಪದಲ್ಲಿ ಮುದ್ದಿನ ಕಟ್ಟೆ ಮಠಾಧೀಶ ಶ್ರೀ ‌ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಅರಣ್ಯ ಇಲಾಖೆಯ ಹುದುಗೂರು ಉಪವಯ ಅರಣ್ಯಾಧಿಕಾರಿ ಸತೀಶ್‌ಕುಮಾರ್‌, ಶರಣ ಸಾಹಿತ್ಯ ಪರಿಷತ್ತು ತಾಲೋಕು ಅಧ್ಯಕ್ಷ ಮಹದೇವಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ ಧರ್ಮಂದ್ರ, ಅಕ್ಕನ ಬಳಗದ ಅಧ್ಯಕ್ಷೆ ಕಮಲಮ್ಮ, ಡಿ.ಬಿ. ಸೋಮಪ್ಪ, ಕಾರ್ಯದರ್ಶಿ ವಿರೂಪಾಕ್ಷಪ್ಪ, ನಿರ್ದೆಶಕ ರಾದ ಶಾಂಭಶಿವ ಮೂರ್ತಿ, ಉದಯಕುಮಾರ್‌, ಶಿವಲಿಂಗ, ಸೌಭಾಗ್ಯ, ಬಸವರಾಜ್‌, ಗಣೇಶ್‌, ಚಂದ್ರಕಲಾ ಉಪಸ್ಥಿತದ್ದರು.ಶ್ರೀಗಂಧದ ಗಿಡ ವಿತರಿಸುವ ಮೂಲಕ ಪರಿಸದ ಜಾಗೃತಿ, ಅರಿವು ಮೂಡಿಸಲಾಯಿತು.

ಛಾಪು ಮೂಡಿಸಿದೆ
ಕೊಡಗು ಪುಟ್ಟ ಜಿಲ್ಲೆಯಾದರೂ ಸಹ ಅಖಂಡ ಭಾರತದ ರಕ್ಷಣೆ ಗಾಗಿ ಸಹಸ್ರಾರು ಯೋಧರನ್ನು ನೀಡುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ತನ್ನ ಛಾ‌ಪು ಮೂಡಿ ಸಿದೆ. ಪೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್‌ ತಿಮ್ಮಯ್ಯ ನವರ‌ಂತಹ ವ್ಯಕ್ತಿಗಳು ಈ ಜಿಲ್ಲೆಯಲ್ಲಿ ಜನಿಸಿದವರು ಅಂದು ಅವರು ಮಾಡಿದ ರಾಷ್ಟ್ರ ಸೇವೆ ಇಂದಿನ ಯುವಕರಿಗೆ ಆದರ್ಶ, ಸ್ಪೂರ್ತಿ ಎಂದವರು ತಿಳಿಸಿದರು. ಜಿಲ್ಲೆಯ ಅತ್ಯಂತ ಕಿರಿಯ ಯುವಕ 27 ವರ್ಷದ ಮಹೇಶ್‌ ಉಗ್ರರನ್ನು ಸದೆ ಬಡಿಯುವ ಮೂಲಕ ದೇಶ ರಕ್ಷಣಾ ಕಾರ್ಯದಲ್ಲಿ ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನಾಗಿರುವುದು ಜಿಲ್ಲೆಗೆ ಹೆಮ್ಮೆ ತರುವಂತಹ ಸಂಗತಿಯಾಗಿದೆ ಅವರಿಗೆ ಹಾರೈಕೆ ಇರಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next