Advertisement
ಕರ್ನಾಟಕ-ಕೇರಳದ ವ್ಯಾಪ್ತಿಯಲ್ಲಿಹಾದು ಹೋಗಿರುವ ರಸ್ತೆ ಇದು. ಸುಳ್ಯದ ಮುಂದಕ್ಕೆ ಆಲೆಟ್ಟಿ ,ಬಡ್ಡಡ್ಕ, ಪಾಣತ್ತೂರು, ಕರಿಕೆ ರಸ್ತೆಯ ಅಲ್ಲಲ್ಲಿ ಗುಡ್ಡ ಕುಸಿಯುವ ಸ್ಥಿತಿಯಲ್ಲಿದೆ. ಕೇರಳ ಭಾಗ ದಾಟಿ ಕೊಡಗು ಪ್ರವೇಶಿಸುವ ಹದಗೆಟ್ಟಿದ್ದು ಸಂಚಾರವೇ ಕಷ್ಟಕರ ಅನ್ನುವ ಸ್ಥಿತಿಯಲ್ಲಿದೆ. ಈ ಮಳೆಗಾಲದಲ್ಲಂತೂ ದುರ್ಗಮ ಹಾದಿಯಂತಿರುವ ಈ ರಸ್ತೆಯಲ್ಲಿ ಕೇರಳ, ಸುಳ್ಯ ಭಾಗದಿಂದ ನೂರಾರು ವಾಹನ ಸಂಚರಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲವು ದಿನಗಳಿಂದ ಕರಿಕೆ-ಭಾಗಮಂಡಲದ ನಡುವಿನ ಕಾಡು ಮಧ್ಯೆ ರಸ್ತೆಯಲ್ಲಿ ಮರಗಳು ಅಲ್ಲಲ್ಲಿ ಉರುಳಿ ಬೀಳುತ್ತಿದೆ. ಸಣ್ಣ ಸಣ್ಣ ನೀರಿನ ತೊರೆಯೂ ಉಕ್ಕಿ ಹರಿಯುತ್ತಿದ್ದು ಗುಡ್ಡ ಕುಸಿತದ ಆತಂಕವೂ ಹೆಚ್ಚಾಗಿದೆ. ಹತ್ತಾರು ಮರಗಳು ರಸ್ತೆಯ ಅಂಚಿಗೆ ಬಾಗಿ ನಿಂತಿದೆ. ಏಕೈಕ ದಾರಿ
Related Articles
Advertisement
ಕನಿಷ್ಠ ಸುರಕ್ಷೆಯೂ ಇಲ್ಲ
ಸುಳ್ಯ-ಆಲೆಟ್ಟಿ-ಪಾಣತ್ತೂರು-ಕರಿಕೆ ಮಾರ್ಗದ ಕಾಡಿನ ರಸ್ತೆಯಂತೂ ಸಂಪೂರ್ಣ ಹಾಳಾಗಿದೆ. ಅಲ್ಲಿ ಕನಿಷ್ಠ ಸುರಕ್ಷೆಯೂ ಇಲ್ಲ. ಮಳೆಗಾಲದಲ್ಲಿ ಸಂಚರಿಸುವುದು ತುಂಬಾ ಅಪಾಯಕಾರಿಯಾಗಿದೆ.-ಮನೀಷಾ ರೈ , ಕೆಳಗಿನಪೇರಾಲು ಸಂಪೂರ್ಣ ಹಾಳಾಗಿದೆ ಕರಿಕೆ-ಭಾಗಮಂಡಲ ನಡುವಿನ ರಸ್ತೆ ದುರಸ್ತಿ ಆಗಿಲ್ಲ. ತೀರಾ ಕಿರಿದಾದ ರಸ್ತೆ ಇದು. ಜತೆಗೆ ಸಂಪೂರ್ಣ ಹಾಳಾಗಿದೆ. ನಮಗೆ ಬೇರೆ ರಸ್ತೆ ಇಲ್ಲ. ದುರಸ್ತಿ ಆಗಬೇಕು ಅನ್ನುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.
-ಮೇಘ ಶ್ಯಾಮ , ಕರಿಕೆ – ಕಿರಣ್ ಪ್ರಸಾದ್ ಕುಂಡಡ್ಕ