Advertisement
ಸದ್ಯ ಇಡೀ ವಿಶ್ವದ ಜನಸಂಖ್ಯೆಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಬಹುತೇಕ ದೇಶಗಳಲ್ಲಿ ಜನನ ಪ್ರಮಾಣ ಇಳಿಕೆಯಾಗುತ್ತಲೇ ಬಂದಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವಿಚಾರದಲ್ಲಿ ಭಾರತವೂ ಹೊರತಾಗಿಲ್ಲ. ದಶಕಗಳ ಹಿಂದೆ ಚೀನದಲ್ಲಿ ಜನಸಂಖ್ಯೆ ಒಂದೇ ಸಮನೆ ಏರತೊ ಡಗಿದಾಗ ಅಲ್ಲಿನ ಸರಕಾರ ಜನಸಂಖ್ಯೆ ನಿಯಂತ್ರಣಕ್ಕಾಗಿ ಹಲವಾರು ಕಠಿನ ಕ್ರಮ ಗಳನ್ನು ಕೈಗೊಂಡಿತು. ಇದರ ಪರಿಣಾಮವಾಗಿ ಕಳೆದೊಂದು ದಶಕದಿಂದೀಚೆಗೆ ಚೀನದಲ್ಲಿ ಜನಸಂಖ್ಯೆ ಭಾರೀ ಇಳಿಕೆಯನ್ನು ಕಂಡಿದ್ದು ಇದರ ದುಷ್ಪರಿಣಾಮವನ್ನು ಇದೀಗ ಎದುರಿಸುತ್ತಿದೆ. ಜನನ ಪ್ರಮಾಣ ಇಳಿಮುಖವಾದ್ದರಿಂದ ಅಲ್ಲೀಗ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಿದ್ದು ಯುವ ಮಾನವ ಸಂಪನ್ಮೂಲ, ಶ್ರಮಿಕ ವರ್ಗದ ಕೊರತೆ ಎದುರಾಗಿದೆ. ಇದರಿಂದಾಗಿ ಇಡೀ ದೇಶದ ಆರ್ಥಿಕ, ಸಾಮಾ ಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳುಂಟಾಗಿದೆ.ಒಟ್ಟಾರೆ ಜಾಗತಿಕ ಬೆಳವಣಿಗೆಗಳನ್ನು ಗಮನಿಸಿದಾಗ ಸದ್ಯದ ಮಟ್ಟಿಗೆ ಭಾರತ ಜನಸಂಖ್ಯೆ ನಿಯಂತ್ರಣದಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದ್ದರೂ ಕ್ರಮಿಸಬೇಕಾದ ಹಾದಿ ಇನ್ನೂ ಬಹಳ ದೂರವಿದೆ. ಹಾಗೆಂದು ಚೀನಾ ಜಾರಿಗೆ ತಂದಂಥ ಕಟ್ಟು ನಿಟ್ಟಿನ ಕ್ರಮಗಳಿಗೆ ಮುಂದಾದಲ್ಲಿ ಭಾರತ ಕೂಡ ಪ್ರತಿಕೂಲ ಪರಿಣಾಮಗಳಿಗೆ ತುತ್ತಾದೀತು. ಈ ಹಿನ್ನೆಲೆಯಲ್ಲಿ ಭಾರತ ಹಾಲಿ ಜಾರಿಯಲ್ಲಿರುವ ಜನಸಂಖ್ಯಾ ನಿಯಂತ್ರಣ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು. ಹೇರಳವಾಗಿರುವ ಮಾನವ ಸಂಪನ್ಮೂಲ ಅದರಲ್ಲೂ ಯುವ ಸಂಪನ್ಮೂಲವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕಿದೆ. ಯುವಜನರಿಗೆ ಕೌಶಲಭರಿತ ಶಿಕ್ಷಣ, ಗುಣಮಟ್ಟದ ಜೀವನ ನಡೆಸಲು ಅವಶ್ಯವಾದ ಉದ್ಯೋಗವನ್ನು ದೊರಕಿಸಿಕೊಟ್ಟಲ್ಲಿ ಇದಕ್ಕಿಂತ ದೊಡ್ಡ ಬಂಡವಾಳ ದೇಶದ ಪಾಲಿಗೆ ಮತ್ತೂಂದಿರಲಾರದು. ಆದರೆ ಇದನ್ನು ಸರಿಯಾಗಿ ಅರ್ಥೈಸಿಕೊಂಡು ಸಮರ್ಪಕ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಗುರುತರ ಹೊಣೆಗಾರಿಕೆ ಸರಕಾರಗಳದ್ದಾಗಿದೆ. ದುಡಿಯುವ ಕೈಗಳಿಗೆ ಅರ್ಹತೆಗ ನುಸಾರ ಕೆಲಸ ನೀಡಿದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಉತ್ಪಾದನೆ, ಆದಾಯ ವೃದ್ಧಿಯಾಗಿ ದೇಶದ ಸ್ವಾವಲಂಬನೆಯ ಕನಸು ನನಸಾಗಲು ಸಾಧ್ಯ.