Advertisement

ಮನಸ್ಸು ಸಕಾರಾತ್ಮಕವಾಗಿರಲಿ: ಗುರುಮಹಾಂತ ಶ್ರೀ

11:28 AM Jun 24, 2022 | Team Udayavani |

ಇಳಕಲ್ಲ: ಮನಸ್ಸು ಸಕಾರಾತ್ಮಕವಾಗಿದ್ದರೇ ಮಹಾತ್ಮರಾಗುತ್ತಾರೆ. ಅದೇ ಮನಸ್ಸು ನಕಾರಾತ್ಮಕವಾಗಿದ್ದರೇ ರಾಕ್ಷಸನಾಗುತ್ತಾನೆ. ನಕಾರಾತ್ಮಕವಾದ ಮನಸ್ಸನ್ನು ದೇಹದ ಜತೆಗೆ ಸೇರಿಸಿಕೊಂಡು ಸಕಾರಾತ್ಮಕವಾಗಿ ಬೆಳೆಸುವ ವಿಧಾನವೇ ಯೋಗ ವಿಧಾನ ಎಂದು ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀ ಹೇಳಿದರು.

Advertisement

ನಗರದ ಶ್ರೀ ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯಮಹಾಂತೇಶ ಆಯುರ್ವೇದ ಮೆಡಿಕಲ್‌ ಕಾಲೇಜ ಹಾಗೂ ಆರ್‌.ಪಿ. ಕರಡಿ ಆಯುರ್ವೇದ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಮೂರು ತಿಂಗಳ ವಿಜಯಮಹಾಂತೇಶ ಸೈನಿಕ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ. ನಮ್ಮ ಭಾಗದ ನಿವೃತ್ತ ಮಿಲಿಟರಿ ಅಧಿಕಾರಿಗಳು ತರಬೇತಿ ನೀಡುತ್ತಿದ್ದರೆ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಾಸಕ ದೊಡ್ಡನಗೌಡ ಜಿ. ಪಾಟೀಲ ಮಾತನಾಡಿ, ಉತ್ತಮ ಹಾಗೂ ಆರೋಗ್ಯವಂತ ಪ್ರಜೆಗಳಿಂದ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಯುರ್ವೆದಿಕ್‌ ಮಹಾವಿದ್ಯಾಲಯದಿಂದ ರಾಷ್ಟಮಟ್ಟದ ಚಿತ್ರಸ್ಪರ್ಧೆ ಆನ್‌ಲೈನ್‌ ಮೂಲಕ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 180 ಸ್ಪರ್ಧಾಳುಗಳು ಅದ್ಭುತ ಚಿತ್ರ ಪ್ರದರ್ಶನ ಕಳುಹಿದ್ದು, ಅವುಗಳಲ್ಲಿ 9 ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

Advertisement

ಕಾರ್ಯಕ್ರಮದ ನಂತರ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಅಧ್ಯಕ್ಷ ಮಂಜುನಾಥ ಶೆಟ್ಟರ, ಉಪಾಧ್ಯಕ್ಷ ಗುರುದತ್ತಾತ್ರೇಯ ಗುಳೇದ, ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್‌ ಎಂ.ವ್ಹಿ. ಪಾಟೀಲ, ವೈಸ್‌ ಚೇರಮನ್‌ ಗೌತಮ ಬೋರಾ, ಉಪಾಧ್ಯಕ್ಷ ಪಿ.ಸಿ. ಸಾಲಿಮಠ, ರತ್ನಾಕರ ಹೂಲಿ, ಪ್ರಧಾನ ಕಾರ್ಯದರ್ಶಿ ಅಶೋಕ ಬಿಜ್ಜಲ, ಆಯುರ್ವೇದ ಮಹಾವಿದ್ಯಾಲಯದ ಚೇರಮನ್‌ ಬಸಣ್ಣ ಕಬ್ಬಿಣದ, ಆಡಳಿತ ಮಂಡಳಿ ಸದಸ್ಯರಾದ ಶರಣಪ್ಪ ಅಕ್ಕಿ, ದಿಲೀಪ ದೇವಗಿರಕರ, ಮಹಾಂತಪ್ಪ ಪಟ್ಟಣಶೆಟ್ಟಿ, ರಾಜಶೇಖರ ಸೂಡಿ, ಮಲ್ಲಣ್ಣ ಹರವಿ, ಕಾಲೇಜ್‌ ಪ್ರಾಚಾರ್ಯ ಡಾ| ಕೆ.ಸಿ. ದಾಸ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next