Advertisement

ಮನುಷ್ಯ ಪರಿಸರ ಸ್ನೇಹಿಯಾಗಲಿ

04:13 PM Jun 06, 2017 | |

ಕಲಬುರಗಿ: ಮನುಷ್ಯ ವಿಕಾಸದ ಹಾದಿಯ ಆತುರದಲ್ಲಿ ಕೈಗಾರೀಕರಣ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮತ್ತು ಪರಿಸರದ ನಾಶ ಮಾಡುವ ಬದಲು ಪರಿಸರ ಸ್ನೇಹಿಯಾಗಿ ಪ್ರಗತಿ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಕಲಬುರಗಿ ಪೀಠದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು.

Advertisement

ನಗರದ ಹೈಕೋರ್ಟ್‌ ಪೀಠದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಈಗ ನಾವೆಲ್ಲರೂ ಪರಿಸರ ಹಾಳು ಮಾಡುವಂಥ ಯಾವುದೇ ಕಾರ್ಯ ಕೈಗೊಳ್ಳದಿರುವ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಮ್ಮ ಮನೆಯಂತೆ ಕಾಪಾಡುವ ಬಗ್ಗೆ ದೃಢ ಸಂಕಲ್ಪ ಮಾಡಬೇಕು.

ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಕಸ ಹಾಕುವುದು, ಉಗುಳುವುದನ್ನು ಮೊದಲು ನಿಲ್ಲಿಸಿ ಸ್ವತ್ಛತೆ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಭಾರತೀಯ ನ್ಯಾಯಾಂಗವು ಪರಿಸರ ಸ್ವತ್ಛತೆ ಕಾಪಾಡುವಲ್ಲಿ ಮಹತ್ತರ ಮಾತ್ರ ವಹಿಸುತ್ತಿದೆ.

ದೇಶದ ಅರಣ್ಯ, ನದಿ, ವನ್ಯಜೀವಿ, ಗಣಿ ಸಂಪತ್ತಿನ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸುಪ್ರಿಂ ಕೋರ್ಟ್‌ ಮತ್ತು ಕರ್ನಾಟಕ ಹೈಕೋರ್ಟ್‌ ಹಲವಾರು ಸೂಚನೆ, ಆದೇಶ ಮತ್ತು ಮಾರ್ಗದರ್ಶ ನೀಡಿವೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆ ಹಿರಿಯ ಅಧಿ ಕಾರಿಗಳು ಕೋರ್ಟುಗಳು ನೀಡಿರುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. 

ಕಲಬುರಗಿ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಬಿ. ವೀರಪ್ಪ ಮಾತನಾಡಿ, ಪರಿಸರದಲ್ಲಿ ಗಿಡಮರಗಳಿದ್ದರೆ ಎಲ್ಲ ಜೀವ ಸಂಕುಲಗಳು ಬದುಕಲು ಸಾಧ್ಯ. ಮಾನವನ ಅ ಧಿಕಾರ ದಾಹಕ್ಕೆ ಪರಿಸರ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಪರಿಶುದ್ಧ ಗಾಳಿ, ನೀರು, ಬೆಳಕು, ಆಹಾರ, ಗೊಬ್ಬರ, 

Advertisement

-ಪೀಠೊಪಕರಣ ನೀಡುವ ಹಾಗೂ ಭೂ ಮತ್ತು ಜಲ ಸಂರಕ್ಷಣೆ ಮಾಡುವ ಮತ್ತು ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಪ್ರಮಾಣ ತಗ್ಗಿಸಲು ಸಹಾಯಕಾರಿಯಾಗಿರುವ ಗಿಡಮರಗಳು ಮಾನವನಗಿಂತ ಹೆಚ್ಚು ಪರೋಪಕಾರಿಯಾಗಿವೆ. ಗಿಡಗಳನ್ನು ಪ್ರತಿಯೊಂದು ಮನೆಯಲ್ಲಿ ಬೆಳೆಸುವ ಸಂಕಲ್ಪ ಮಾಡಬೇಕಲ್ಲದೇ ಇವುಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿದ್ದ ಕಲಬುರಗಿ ಹೈಕೋರ್ಟ್‌ ಪೀಠದ ಇನ್ನೋರ್ವ ನ್ಯಾಯಮೂರ್ತಿ ಬಿ.ಎ. ಪಾಟೀಲ, ಹೈಕೋರ್ಟ್‌ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ. ಹಿರೇಮಠ ಮಾತನಾಡಿದರು. ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಶ್ರೀಕಾಂತ ಹೊಸೂರ, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಶಿವಶಂಕರ,

ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಎಂ.ಎಲ್‌. ಭಾವಿಕಟ್ಟಿ, ವಲಯ ಅರಣ್ಯಾಧಿಕಾರಿ ಮುನೀರ್‌ ಅಹ್ಮದ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹ್ಮದ್‌ ಅಲಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಕಬುಲ್‌ ಹುಸೇನ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರರಾದ ಮಹ್ಮದ್‌ ಅಜೀಜುದ್ದೀನ್‌, ಸಿ. ಇಬ್ರಾಹಿಂ ಪಾಲ್ಗೊಂಡಿದ್ದರು. 

ಕಲಬುರಗಿ ಹೈಕೋರ್ಟ್‌ ಪೀಠದ ಅಪರ ಮಹಾವಿಲೇಖನಾಧಿಕಾರಿ ಎಸ್‌.ವೈ. ವಟವಟಿ ಸ್ವಾಗತಿಸಿದರು. ಕಲಬುರಗಿ ಹೈಕೋರ್ಟ್‌ ಪೀಠದ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ ವಂದಿಸಿದರು. ಇದಕ್ಕೂ ಮುನ್ನ ಕಲಬುರಗಿ ಹೈಕೋರ್ಟ್‌ ಪೀಠದ ಆವರಣದಲ್ಲಿ ವಿವಿಧ ಜಾತಿಯ 250 ಸಸಿಗಳನ್ನು ನೆಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next