Advertisement

ಮೂಡುಬಿದಿರೆ: ಐತಿಹಾಸಿಕ ಕಟ್ಟಡ ಉಳಿಯಲಿ

11:49 AM Sep 12, 2022 | Team Udayavani |

ಮೂಡುಬಿದಿರೆ: ನೂರ ಹದಿನೈದು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಮೂಡುಬಿದಿರೆಯಲ್ಲಿ ನಿರ್ಮಾಣವಾಗಿದ್ದ ಸರ್‌ ಆರ್ಥರ್‌ ಲಾಲಿ ಬಂಗಲೆ (ಪ್ರವಾಸಿ ಬಂಗ್ಲೆ/ ತನಿಖಾಧಿಕಾರಿಗಳ ತಂಗುದಾಣ)ಯ ಬದಲಿಗೆ ಹೊಸ ಕಟ್ಟಡ ನಿರ್ಮಾಣವಾಗುವ ಸಾಧ್ಯತೆ ಇದೆ. ಅದೇ ವೇಳೆ ಹಳೆ ಕಟ್ಟಡವನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂಬ ವರದಿಯಿಂದ ನಾಗರಿಕರು ಕಳವಳ ಕ್ಕೀಡಾಗಿದ್ದಾರೆ.

Advertisement

ಬ್ರಿಟಿಷರ ಕಾಲದಲ್ಲಿ ಮಂಗಳೂರಿನಿಂದ ಕುದುರೆ ಸಾರೋಟಿನಲ್ಲಿ ಹೊರಡುವ ಜಿಲ್ಲಾ ಕಲೆಕ್ಟರ್‌ ಸಾಹೇಬರು ಹಾಗೂ ಬ್ರಿಟಿಷ್‌ ಅಧಿಕಾರಿಗಳಿಗೆ ತಂಗಲು ಮಂಗಳೂರಿನಿಂದ ಗುರುಪುರ, ಮೂಡುಬಿದಿರೆ, ಕಾರ್ಕಳ ಹೀಗೆ ಸುಮಾರು ಹನ್ನೆರಡರಿಂದ ಹದಿನೆಂಟು ಕಿ.ಮೀ. ಅಂತರದಲ್ಲಿ ತನಿಖಾಧಿಕಾರಿಗಳ ಬಂಗ್ಲೆ ನಿರ್ಮಿಸಲಾಗಿತ್ತು. ಆಗಿನ ಮದ್ರಾಸ್‌ ಪ್ರಾಂತದ ಗವರ್ನರ್‌ ಆಗಿದ್ದ ಸರ್‌ ಆರ್ಥರ್‌ ಲಾಲಿ ಅವರು ಮೂಡುಬಿದಿರೆಗೆ ಭೇಟಿ ನೀಡಿದ್ದುದರ ನೆನಪಿಗಾಗಿ ಈ ಬಂಗ್ಲೆ 1907ರ ನವೆಂಬರ್‌ 8ರಂದು ನಿರ್ಮಾಣವಾಗಿತ್ತು. ಆಗಿನ ಜಿಲ್ಲಾ ಕಲೆಕ್ಟರ್‌ ಮತ್ತು ಡಿಸ್ಟ್ರಿಕ್ಟ್ ಬೋರ್ಡ್‌ ಪ್ರಸಿಡೆಂಟ್‌ ಅಝೀಝುದ್ದೀನ್‌ ಅವರು ಈ ಬಂಗ್ಲೆ ನಿರ್ಮಿಸಿದವರು.

ಸಾಧ್ಯತೆಗಳಿವೆ

1. ವಿದೇಶಗಳಲ್ಲಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಪರಂಪರೆಯ ಕುರಿತಾದ ಕಾಳಜಿ ಇರುವಂತೆ ಇಲ್ಲೂ ಇಂಥ ಕಟ್ಟಡಗಳನ್ನು ಉಳಿಸಿಕೊಳ್ಳಬೇಕಾಗಿದೆ. ಈ ಕಟ್ಟಡ ತಕ್ಕ ಮಟ್ಟಿಗೆ ಸದೃಢ, ಸುಂದರವಾಗಿಯೇ ಇರುವ ಕಾರಣ, ಅಲ್ಪ ಸ್ವಲ್ಪ ದುರಸ್ತಿ ನಡೆಸಿ ಇದನ್ನು ಇದ್ದಲ್ಲೇ ಉಳಿಸಿಕೊಳ್ಳಬಹುದು.

  1. ಹತ್ತಿರದಲ್ಲೇ ಇರುವ ಈಗಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮೊದಲು “ವಿಜ್ಞಾನ ಮಂದಿರ’ವಾಗಿತ್ತು. ಅಲ್ಲಿನ ಪ್ರಯೋಗಾಲಯ, ವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ ಶಾಲಾ ಮಕ್ಕಳು ಭೇಟಿ ನೀಡಿ ತಮ್ಮ ಜ್ಞಾನವರ್ಧಿಸಿಕೊಳ್ಳುವ ಜತೆಗೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದರು. ಈಗ, ಪ್ರವಾಸಿ ಬಂಗ್ಲೆಯನ್ನು ಸದೃಢಗೊಳಿಸಿ ಈ ಉದ್ದೇಶಕ್ಕೆ ಬಳಸಬಹುದು.
  2. ಹಳೆಯ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳುವ ಜತೆಗೆ ಹಿಂಭಾಗದಲ್ಲಿ ಹೊಸ ಕಟ್ಟಡ ಎಬ್ಬಿಸುವುದು. ಅಗತ್ಯವಿದ್ದರೆ ಚಿಕ್ಕ ಕಟ್ಟಡಗಳನ್ನು ನಿವಾರಿಸಬಹುದು.
  3. ಪೇಟೆಯ ಹೃದಯ ಭಾಗಕ್ಕೇ ಎಲ್ಲ ಕಟ್ಟಡಗಳನ್ನು ದಟ್ಟೆ$çಸಿ, “ಒತ್ತಡ’ ಹಾಕಿ “ಹೃದಯಾಘಾತ’ ವಾಗುವ ಬದಲು ಪ್ರಸ್ತಾವಿತ ನೂತನ ಬಂಗ್ಲೆಯನ್ನು ಅತ್ಯಾಕರ್ಷಕವಾಗಿ ಮೈದಳೆಯುತ್ತಿರುವ ಹತ್ತಿರದ ಕಡಲಕೆರೆ ಪ್ರದೇಶದಲ್ಲಿ ನಿರ್ಮಿಸಬಹುದು.

ಪಾರಂಪರಿಕ ಕಟ್ಟಡ ಉಳಿಸಿ: ದ.ಕ. ಜಿಲ್ಲೆ ಯ 32 ಪಾರಂಪರಿಕ ಪ್ರಾಚೀನ ಪಟ್ಟಣಗಳಲ್ಲಿ ಜೈನ ಕಾಶಿ ಮೂಡುಬಿದಿರೆಯೂ ಒಂದಾಗಿದೆ. ಇಲ್ಲಿನ ಪಾರಂಪರಿಕ ಕಟ್ಟಡಗಳನ್ನು ಉಳಿಸುವ, ಕಾಯಕಲ್ಪ ನೀಡುವ ಕಾರ್ಯ ನಡೆಯಬೇಕಾಗಿದೆ. ಅಂತೆಯೇ ಶತಮಾನ ಕಂಡ ಐತಿಹಾಸಿಕ ಕಟ್ಟಡ ಪ್ರವಾಸಿ ಬಂಗ್ಲೆಗೆ ಅವಶ್ಯವಿದ್ದರೆ ಕಾಯಕಲ್ಪ ನೀಡಲು ಸರಕಾರ ಮುಂದಾಗಬೇಕಾಗಿದೆ. – ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮೂಡುಬಿದಿರೆ ಶ್ರೀ ಜೈನ ಮಠಾಧೀಶರು

Advertisement

„ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next