Advertisement
ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ನನಗೆ ಎರಡು ಖಾತೆ ಬೇಕು ಎಂದು ಡಾ.ಸುಧಾಕರ್ ಹಠ ಮಾಡಿ ಎರಡು ಖಾತೆಗಳನ್ನು ಪಡೆದರು. ಇದೇನಾ ಎರಡು ಖಾತೆಗಳನ್ನು ನಿಭಾಯಿಸುವ ವೈಖರಿ ಎಂದು ಅವರು ಕಿಡಿ ಕಾರಿದರು.
Related Articles
Advertisement
ಕೋವಿಡ್ ಸಂಬಂಧ ಚಾಮರಾಜನಗರದಲ್ಲಿ ನಡೆದ ಸಾವಿನ ಪ್ರಕರಣ ಹಾಗೂ ಬೆಂಗಳೂರು ನಗರದಲ್ಲಿ ಬೆಡ್ ಮಾರಾಟ ದಂಧೆಗಳು ತಲೆ ತಗ್ಗಿಸುವ ಪ್ರಕರಣಗಳು. ಇಂತಹ ಕೆಲಸ ಮಾಡಿದ ವ್ಯಕ್ತಿಗಳು ನಿಜವಾಗಿಯೂ ಪಾಪಿಗಳು. ಅವರಿಗೆ ಭಗವಂತನೇ ಶಿಕ್ಷಿಸಲಿ ಎಂದರು.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರಿಗೆ ದೂರವಾಣಿ ಮೂಲಕ ಸಾವು ಬದುಕಿನ ಹೋರಾಟದಲ್ಲಿರುವ ಜನರಿಗೆ ಸ್ಪಂದಿಸುವ ಕಾರ್ಯಮಾಡಿ ಎಂದು ಕರೆ ಮಾಡಿದರೆ ಕರೆಗಳನ್ನು ಸ್ವೀಕರಿಸಲಿಲ್ಲ. ನಂತರ ಸಂದೇಶಗಳನ್ನು ಹಾಕಿ ವಾಟ್ಸಾಪ್ ಮೂಲಕ ಕಳಿಸಿದ್ದೆ. ಇದ್ಯಾವುದಕ್ಕು ಉತ್ತರ ನೀಡಲಿಲ್ಲ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಅವರ ಗಮನಕ್ಕೆ ತರುವೆ ಎಂದರು.
ಮುಖ್ಯಮಂತ್ರಿಗಳು ಎರಡು ಬಾರಿ ಕೋವಿಡ್ ಸೋಂಕಿಗೆ ಒಳಪಟ್ಟರು. ಇದೀಗ ಗುಣಮುಖರಾಗಿ ಜನತೆಯ ಆರೋಗ್ಯದ ದೃಷ್ಟಿಯಿಂದ ಅವರೇ ಫೀಲ್ಡಿಗಿಳಿದು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಖಾಸಗೀ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಭಾರತಾಂಬೆಯ ಮಕ್ಕಳನ್ನು ರಕ್ಷಣೆ ಮಾಡಲು ಕೋವಿಡ್ ವಿರುದ್ದ ಸಾಕಷ್ಟು ನಿಯಮಗಳನ್ನು ಜಾರಿ ಮಾಡಿದ್ದು ಪ್ರತಿಯೊಬ್ಬರು ಅದನ್ನು ಪಾಲನೆ ಮಾಡಬೇಕಾಗಿದೆ ಎಂದರು. ಅದೇ ರೀತಿ ಮುಖ್ಯಮಂತ್ರಿಗಳೂ ಕೂಡ ರಾಜ್ಯದಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಜಾರಿ ಮಾಡಿದ್ದು ಪ್ರತಿಯೊಬ್ಬರೂ ಇದನ್ನು ಕಡ್ಡಾಯವಾಲಿ ಪಾಲಿಸಬೇಕು ಎಂದರು.