Advertisement

ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

10:36 AM May 02, 2019 | Team Udayavani |

ಬಂಗಾರಪೇಟೆ: ಭದ್ರತೆ ಇಲ್ಲದೇ ಮಳೆ, ಗಾಳಿ, ಬಿಸಿಲು ಎನ್ನದೇ ದಿನದ 10 ಗಂಟೆ ದುಡಿಯುವ ಪ್ರತಿಯೊಬ್ಬ ಕೂಲಿ ಕಾರ್ಮಿಕರ ಬದುಕು ಅತಂತ್ರದಲ್ಲಿದ್ದು, ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಅಪರ ಸಿವಿಲ್‌ ನ್ಯಾಯಾಧೀಶ ಡಿ.ಸಿ.ದೀಪು ಹೇಳಿದರು.

Advertisement

ಪಟ್ಟಣದ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಏರ್ಪಡಿಸಿದ್ದ ಕಾನೂನು ಅರಿವು ಹಾಗೂ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕೆಲಸ ಸಿಗುವುದೋ? ಇಲ್ಲವೋ? ಎಂಬ ಆಭದ್ರತೆ ನಡುವೆ ಒಂದು ಕಡೆ ಯಿಂದ ಮತ್ತೂಂದು ಕಡೆಗೆ ಹೋಗುವ ಕೂಲಿ ಕಾರ್ಮಿಕರ ಬದುಕು ಅಲೆಮಾರಿಯಾಗಿದೆ. ಈ ಕಾರಣದಿಂದಮಕ್ಕಳಿಗೆ ವಿದ್ಯಾಭ್ಯಾಸವಿಲ್ಲದೇ ಅನಕ್ಷರಸ್ಥರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಗಾರೆ ಕೆಲಸ, ಪೈಂಟರ್‌, ಪ್ಲಂಬರ್‌, ಮರಗೆಲಸ, ಎಲೆಕ್ಟ್ರೀಷನ್‌, ವೆಲ್ಡಿಂಗ್‌, ಟೈಲ್ಸ್‌, ಕಂಬಿ ಕೆಲಸ, ಸ್ಟೀಲ್‌ ಸೆಂಟ್ರಿಂಗ್‌, ಪಾಯ ಅಗೆಯುವುದು, ಇಟ್ಟಿಗೆ ಕೆಲಸ, ಜಲ್ಲಿ ಒಡೆಯುವರು, ಕಾಂಕ್ರೀಟ್‌ ಹಾಕುವವರು, ರಸ್ತೆ ನಿರ್ಮಾಣ, ಚರಂಡಿ, ಟವರ್‌, ರೈಲ್ವೆ ಹಳಿ, ಮರಳು ಸಾಗಾಣಿಕೆ, ಸಿಮೆಂಟ್‌ ಮೂಟೆ ಹೊರೆಯುವವರು, ಮತ್ತಿತರೆ ಕಾರ್ಮಿಕರ ಬದುಕು ಮಾತ್ರ ಬಹಳ ಅತಂತ್ರ ಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

5 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ: ಈ ಅಲೆಮಾರಿ ಅಭದ್ರತೆಯ ಮಧ್ಯೆ ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಕಟ್ಟಡ ಕಾರ್ಮಿಕ ಮುಖಂಡರ ನೇತೃತ್ವದಲ್ಲಿ ನಡೆಸಿದ ಹೋರಾಟದ ಫ‌ಲವಾಗಿ ಸರ್ಕಾರ 14 ಕಲ್ಯಾಣ ಸೌಲಭ್ಯಗಳನ್ನು ಜಾರಿಗೆ ತಂದಿದೆ.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 5 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವಿದೆ. ಕಲ್ಯಾಣ ಸೌಲಭ್ಯಗಳನ್ನು ಇನ್ನಿಷ್ಟು ಹೆಚ್ಚಿಸಬೇಕೆಂದು ಸಂಘಟನೆಯು ಹೋರಾಟ ಮಾಡುತ್ತಿದೆ. ಜೊತೆಗೆ ಕಟ್ಟಡ ಕಾರ್ಮಿಕರನ್ನು ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಶ್ರಮಿಸುತ್ತಿದೆ ಎಂದರು.

Advertisement

ಆರ್ಥಿಕವಾಗಿ ಮುಂದೆ ಬನ್ನಿ: ಎಲ್ಲಾ ವರ್ಗದ ಕಾರ್ಮಿಕರನ್ನು ಸಂಘಟಿಸಿ ಕಲ್ಯಾಣ ಮಂಡಳಿಯಲ್ಲಿ ಸಿಗುವ ಸೌಲಭ್ಯ

ಒದಗಿಸುವಲ್ಲಿ ಸಂಘ ನಿರಂತರವಾಗಿ ಕೆಲಸ ಮಾಡುತ್ತಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸದಸ್ಯರಾಗಿ 14 ಸೌಲಭ್ಯ ಪಡೆದು ಆರ್ಥಿಕವಾಗಿ ಮುಂದುವರಿಯುವಂತೆ ಹೇಳಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಹುಲಿಬೆಲೆ ನಾರಾಯಣಪ್ಪ, ಮಾಜಿ ಅಧ್ಯಕ್ಷರಾದ ವಿ.ಎಸ್‌.ವೇಣುಗೋಪಾಲ್‌, ಅಮರೀಶ್‌, ರಾಮೇಗೌಡ, ಎನ್‌.ನಾರಾಯಣಪ್ಪ, ಶಶಿಕುಮಾರ್‌, ಎಂ.ಜಿ.ಕುಮಾರ್‌, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ದೊಡ್ಡ ಅಂಕಂಡಹಳ್ಳಿ ಪೆರಮಾಳಪ್ಪ, ಗೌರವಾಧ್ಯಕ್ಷ ಎಂ.ರಾಮನ್‌, ದೊಡ್ಡಚಿನ್ನಹಳ್ಳಿ ಕನ್ನಯ್ಯ, ಮಾದಮಂಗಲ ಶ್ರೀನಿವಾಸ್‌, ಎ.ಗೊಲ್ಲಹಳ್ಳಿ ಕೃಷ್ಣಪ್ಪ, ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next