ಗುಳೇದಗುಡ್ಡ: ಪಟ್ಟಣದ ಪಡಸಾಲೆ ಯಲ್ಲಿರುವ ಮೇವು ಬ್ಯಾಂಕ್‌ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ ಗಿರಿನಾಥ ಭೇಟಿ ನೀಡಿ, ಮೇವು ಬ್ಯಾಂಕಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ರೈತರನ್ನು ಮಾತನಾಡಿಸಿ ಮಾಹಿತಿ ಪಡೆದರು.
ನಂತರ ಮಾತನಾಡಿ, ಸತತ ಬರಗಾಲದಿಂದ ಮೇವಿನ ಸಮಸ್ಯೆ ಎದುರಾಗಿದೆ. ಸರಕಾರ 12 ರೂಪಾಯಿಗೆ ಮೇವು ಖರೀದಿ ಮಾಡಿ, ರೈತರಿಗೆ 2 ರೂ.ಗೆ ಕೊಡುತ್ತಿದೆ. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು. ಅಧಿಕಾರಿಗಳು ಸರಿಯಾಗಿ ಮೇವು ತೂಕ ಮಾಡಿಸಿಕೊಳ್ಳಬೇಕು. ಸಮರ್ಪಕ ರೀತಿಯಲ್ಲಿ ಮೇವು ವಿತರಿಸಬೇಕೆಂದು ಹೇಳಿದರು.
ಮೇವು ಕೇಂದ್ರದ ಕಟ್ಟಡ ಪರಿಶೀಲಿಸಿದರು. ನಂತರ ರಜಿಸ್ಟರ್ ನೋಡಿ, ಎಷ್ಟು ಮೇವು ವಿತರಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಾರ್ಯದರ್ಶಿಯವರಿಗೆ ಮೇವು ಬ್ಯಾಂಕಿನ್ ರಜಿಸ್ಟರ್ ತೋರಿಸಲು ಅಧಿಕಾರಿಗಳು ಮುಂದಾದಾಗ ಏನ್ರಿ ಇದು ಸರಿಯಾಗಿ ಬರೆದಿಲ್ಲ. ನಾವು ಬರುತ್ತೇವೆ ಎಂದು ಇಂದು ರಜಿಸ್ಟರ್ ಬರೆದಿದ್ದೀರಾ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ತಹಶೀಲ್ದಾರ್ ಎಸ್.ಎಸ್.ಇಂಗಳೆ, ತಾಪಂ ಇಒ ಲಾಳಿ, ಉಪತಹಶೀಲ್ದಾರ್ ಎಂ.ಎಸ್.ಅಂಗಡಿ, ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಜೆಇ ಬಿ.ಎಂ.ಕೊಡಕೇರಿ ಇದ್ದರು.