Advertisement

ಕೃಷಿ ಉತ್ಪನ್ನಕ್ಕೆ ಲಾಭದಾಯಕ ಬೆಲೆ ದೊರೆಯಲಿ; ಕಿಸಾನ್‌ ಸಂಘ

06:21 PM Jan 12, 2022 | Team Udayavani |

ಚಿತ್ರದುರ್ಗ: ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘದಿಂದ ಮಂಗಳವಾರ ತಾಲೂಕು ಆಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದಿವೆ. ಈವರೆಗೆ ಭಾರತ ಅನೇಕ ಸಾಧನೆ ಮಾಡಿದೆ. ಮಂಗಳ ಗ್ರಹಕ್ಕೂ ಕಾಲಿಟ್ಟು ಬಂದಿದೆ. ಆದರೆ ಎಲ್ಲರ ಬದುಕಿಗೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಆಹಾರ ಧಾನ್ಯಗಳನ್ನು ಉತ್ಪಾಸುವ ತಂತ್ರಜ್ಞಾನ ಕಂಡು ಹಿಡಿಯುವುದು ಸಾಧ್ಯವಾಗಿಲ್ಲ.

ಇಡೀ ಮನುಕುಲಕ್ಕೆ ಆಹಾರ ಉತ್ಪಾದನೆ ಮಾಡುವ ರೈತನ ಬದುಕು ಸುಧಾರಣೆ ಆಗಿಲ್ಲ. ಈ ಕ್ಷೇತ್ರದಲ್ಲಿ ಆಗಿರುವ ಹಿನ್ನಡೆಯನ್ನು ಸರಿಪಡಿಸುವುದು ಇಂದಿನ ಆದ್ಯತೆಯಾಗಬೇಕಿದೆ. ಸಾಕಷ್ಟು ಜನ ಕೃಷಿ ಲಾಭದಾಯಕವಲ್ಲ ಎಂದು ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಬಿಟ್ಟು ನಗರಗಳ ಕಡೆಗೆ ವಲಸೆ ಹೋಗುತ್ತಿದ್ದಾರೆ. ರೈತ ಬೆವರು ಸುರಿಸಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದ ಸ್ಥಿತಿ ಇದೆ. ಹಾಕಿದ ಬಂಡವಾಳವೂ ಕೈಗೆ ಸಿಗದ ಸಂಕಷ್ಟದ ಪರಿಸ್ಥಿತಿಯಲ್ಲಿ
ರೈತ ಇದ್ದಾನೆ. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯನ್ನು ಬಿಡಬೇಕಾಗಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಆಹಾರ ಧಾನ್ಯಗಳನ್ನು ಕೃಷಿ ಹೊರತುಪಡಿಸಿ ಬೇರೆ ಯಾವ ಮೂಲಗಳಿಂದಲೂ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಇತರೆ ಎಲ್ಲಾ ವಸ್ತುಗಳಿಗೂ ಉತ್ಪಾದನೆ ಮಾಡಿದವರೇ ನಿ ರ್ದಿಷ್ಟ ದರ ನಿಗದಿ ಮಾಡುತ್ತಾರೆ. ಆದರೆ ಕೃಷಿ ಉತ್ಪನ್ನಗಳನ್ನು ಮಾತ್ರ ಬೀದಿಯಲ್ಲಿಟ್ಟು ಹರಾಜು ಹಾಕುವ ಸ್ಥಿತಿ ಶೋಚನೀಯವಾಗಿದೆ. ರೈತ ಬೆಳೆದ ಬೆಳೆಗೆ ಬೆಲೆಯನ್ನು ರೈತ ನಿಗದಿ ಮಾಡದೇ ಮಧ್ಯವರ್ತಿಗಳು ನಿಗಮಾಡುವುದರಿಂದ ರೈತ ಬಡವನಾಗುತ್ತಿದ್ದಾನೆ.

ಇದರಿಂದ ಕೃಷಿ ಕ್ಷೇತ್ರ ಸೊರಗುತ್ತಿದೆ. ಕೃಷಿ ನಾಶವಾದರೆ ಆಹಾರದ ಅಭಾವ ಉಂಟಾಗುತ್ತದೆ. ಆದ್ದರಿಂದ ರೈತರ ಉತ್ಪಾದನೆ ವೆಚ್ಚದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕು ಎಂದು ಒತ್ತಾಯಿಸಲಾಗಿದೆ. ಭಾರತೀಯ ಕಿಸಾನ್‌ ಸಂಘದ ತಾಲೂಕು ಅಧ್ಯಕ್ಷ ಜ್ಞಾನೇಶ್‌, ಕಾರ್ಯದರ್ಶಿ ವೆಂಕಟೇಶ್‌, ವೇಮದೇವ ರೆಡ್ಡಿ, ತಾಯಣ್ಣ, ವೀರೇಶ್‌ ಮತ್ತಿತರರು ಇದ್ದರು.

Advertisement

ಪ್ರಮುಖ ಬೇಡಿಕೆಗಳು;
ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ ಖರೀದಿ ಗ್ಯಾರಂಟಿ ನೀಡಿ ಘೋಷಿತ ಬೆಲೆಗಿಂತ ಕಡಿಮೆಗೆ ಖರೀದಿಯಾಗದಂತೆ ನೋಡಿಕೊಳ್ಳಬೇಕು. ಪ್ರತಿ ವರ್ಷ ಬೆಲೆ ಘೋಷಣೆಯು ಹಣದುಬ್ಬರದ ದರಕ್ಕೆ ಅನುಗುಣವಾಗಿರಬೇಕು. ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿ ಮಾಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next