Advertisement

ನಿರೀಕ್ಷೆ ಮಿತಿಯಲ್ಲಿರಲಿ

10:11 PM Dec 22, 2019 | mahesh |

ಜೀವನದ ಪ್ರತಿ ಹಂತ ಅನೇಕ ಮಜಲಿನ ಆಗರ…ಆ ಹಂತದಲ್ಲಿ ಸಂಭವಿಸುವ ಎಲ್ಲ ಪ್ರಕ್ರಿಯೆಗಳು ಮನಸ್ಸಿನ ಇಷ್ಟಾರ್ಥವಾಗಿ ನಡೆಬೇಕೆಂಬುದು ಎಲ್ಲರ ಮಹದಾಸೆ. ಅನೇಕ ನಿರೀಕ್ಷೆಗಳ ಬೃಹತ್‌ ಕೂಪ ನಮ್ಮ ಮನಸ್ಸು. ಬೆಟ್ಟದ ಎತ್ತರದಷ್ಟು ನಿರೀಕ್ಷೆಗಳನ್ನ ಜೋಳಿಗೆ ಹಾಕೊಂಡು ಕನಸು ಕಾಣುವ ಪರಿ ನಮ್ಮದು. ಕಂಡ ಕನಸು ನನಸಾಗದೇ ಉಳಿದಾಗ ನಮ್ಮ ನಿರೀಕ್ಷೆ ಹುಸಿಯಾಗುವುದು ನಿಶ್ಚಿತ. ಕಾಣುವ ಪ್ರತಿಯೊಂದು ವಿಚಾರದಲ್ಲಿ ನಮ್ಮ ಪಾತ್ರ ಸದಾ ಇರಬೇಕೆಂದು ಬಯಸುವುದು ಮೂರ್ಖತನ. ಕೈಗೆಟುಕದ ಕಾರ್ಯವನ್ನು ಮುಂದಿಟ್ಟು ನಿರೀಕ್ಷೆಗಳನ್ನು ಸೃಷ್ಟಿಸಿ ಬಳಿಕ ವೇದನೆ ಪಡುವುದು ಸಲ್ಲ.

Advertisement

ನಿರೀಕ್ಷೆ ತಪ್ಪೇ?
ತನ್ನ ಯೋಗ್ಯತೆಗಿಂತ ಜಾಸ್ತಿ ಕನಸು ಕಾಣುತ್ತಾರೆ. ನಿರೀಕ್ಷಿತ ಪ್ರತ್ಯುತ್ತರ ಅಥವಾ ನಿರೀಕ್ಷಿತ ಸ್ವರ ಬಾರದೇ ಹೋದಾಗ ಕೊಂಚ ಮುದು ಡುವುದು ಸಹಜ. ನಮ್ಮ ನಿರೀಕ್ಷೆಗಳು ಮತ್ತೂಬ್ಬರಲ್ಲಿ ನೋವುಂಟು ಮಾಡುತ್ತದೆ ಎನ್ನುವುದುದಾದರೆ ನಮ್ಮ ನಿರೀಕ್ಷೆಗಳಿಗೆ ಅರ್ಥ ಎಲ್ಲಿದೆ? ಜೀವನದ ಹಂತದಲ್ಲಿ ಬುದುಕು ಹೀಗೆಯೇ ಶೃಂಗಾರ ಗೊಳ್ಳಬೇಕೆಂದು ಕಾಣದ ಕಸರತ್ತಿಗೆ ಕೈ ಹಾಕುತ್ತೇವೆ.ಅದರಲ್ಲಿ ಯಶಸ್ಸು ಕಾಣಲು ಸಾಧ್ಯವೇ ಇಲ್ಲವೆಂದು ತಿಳಿದಾಗ ಮನಸ್ಸು ಬೇಡದ ಕಾರ್ಯಕ್ಕೆ ತೊಡಗಿಸಿಕೊಳ್ಳಲು ಮುಂದಾಗುತ್ತದೆ. ನಿರೀಕ್ಷೆ ಹುಟ್ಟಿಸಲು ಮತ್ತೂಬ್ಬ ವ್ಯಕ್ತಿಯಿಂದಲೂ ಸಾಧ್ಯ. ಆದರೆ ಆತನ ಜೀವನ ನಿರೀಕ್ಷೆಗಳ ಸಾಗರದಲ್ಲಿ ಮಿಂದೇ ಳದಿದ್ದರೆ ಸಮಾಜದಲ್ಲಿ ವ್ಯವಹರಿಸಲು ಸಾಧ್ಯ. ವೈಯಕ್ತಿಕ ಜೀವನದಲ್ಲಿ ಸೋಲುಂಡಾಗ ಅದರ ಹೊರೆ ಮತ್ತೂಬ್ಬರಿಗೆ ವಹಿಸುವುದು ತುತ್ಛ ಕಾರ್ಯ. ಯಶಸ್ಸಿನ ತೋಟಕ್ಕೆ ನಾವೇ ಗೊಬ್ಬರ ಹಾಕಬೇಕು. ಮತ್ತೂಬ್ಬರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಾರದು. ಹಾಗಾಗಿ ಜೀವನದ ಮುನ್ನಡೆ ಅಥವಾ ಹಿನ್ನಡೆಗೆ ನಾವೇ ಕಾರಣ ಹೊರತು ನಮ್ಮ ನಿರೀಕ್ಷೆಗಳಲ್ಲ.ಪ್ರಯತ್ನ ರಹಿತ ಕಾರ್ಯದಲ್ಲಿ ಫಲ ದೊರೆಯುವುದು ಬೇಸಿಗೆಯಲ್ಲಿ ಮಾವಿನ ಮರದಲ್ಲಿ ಚಿಗುರು ಕಂಡಂತೆ.

- ಗಣೇಶ್‌ ಪವಾರ್‌

Advertisement

Udayavani is now on Telegram. Click here to join our channel and stay updated with the latest news.

Next