Advertisement

“ವಿದ್ಯುತ್‌ ಸೆಲ್‌ಗ‌ಳು ದೇಶೀಯವಾಗಿ ತಯಾರಾಗಲಿ’

09:12 AM May 10, 2022 | Team Udayavani |

ನವದೆಹಲಿ: “ದೇಶದಲ್ಲಿ ಬಳಕೆಯಾಗುತ್ತಿರುವ ವಿದ್ಯುತ್‌ ಚಾಲಿತ ವಾಹನಗಳಲ್ಲಿನ ಬ್ಯಾಟರಿಗಳಲ್ಲಿ ಬಳಸಲಾಗುವ ವಿದ್ಯುತ್‌ ಸೆಲ್‌ಗ‌ಳು ವಿದೇಶಗಳಲ್ಲಿ ತಯಾರಾಗುತ್ತಿರುವುದರಿಂದ ಭಾರತದ ಉಷ್ಣ ಹವಾಮಾನಕ್ಕೆ ಅವು ಹೊಂದಾಣಿಕೆಯಾಗುತ್ತಿಲ್ಲ.

Advertisement

ಹಾಗಾಗಿಯೇ, ಹಲವೆಡೆ ಇ-ಸ್ಕೂಟರ್‌ಗಳ ಬ್ಯಾಟರಿ ಸ್ಫೋಟದ ಪ್ರಕರಣಗಳು ಜರುಗಿವೆ ಎಂದು ನೀತಿ ಆಯೋಗದ ಸದಸ್ಯರೂ ಆಗಿರುವ ವಿಜ್ಞಾನಿ ವಿ.ಕೆ. ಸಾರಸ್ವತ್‌ ಹೇಳಿದ್ದಾರೆ.

ಅಲ್ಲದೆ, ಈ ಸಮಸ್ಯೆ ನೀಗಬೇಕೆಂದರೆ, ಭಾರತದ ಹವಾಮಾನಕ್ಕೆ ಒಗ್ಗುವಂಥ ವಿದ್ಯುತ್‌ ಸೆಲ್‌ಗ‌ಳು ನಮ್ಮಲ್ಲೇ ತಯಾರಾಗಬೇಕು. ಆಗ ಮಾತ್ರ ಇಂಥ ಸಮಸ್ಯೆಗಳಿಗೆ ನಿವಾರಣೆ ಕಂಡುಕೊಳ್ಳಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ.

ಇತ್ತೀಚೆಗೆ, ದೇಶದ ನಾನಾ ಭಾಗಗಳಲ್ಲಿ ಇ-ಸ್ಕೂಟರ್‌ಗಳು, ಬ್ಯಾಟರಿಗಳ ಅಗ್ನಿ ಅವಘಡಗಳು ಸಂಭವಿಸಿ ಕೆಲವರು ಸಾವನ್ನಪ್ಪಿದ್ದರು. ಮತ್ತೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ, ನಿತಿನ್‌ ಗಡ್ಕರಿ ಅವರು, ಈ ಅವಘಡಗಳ ತನಿಖೆ ನಡೆಸಲು ತಜ್ಞರ ಸಮಿತಿಯನ್ನು ನೇಮಿಸುವುದಾಗಿ ಹೇಳಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next