Advertisement

ದೇವದಾಸಿಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಿ

02:22 PM Dec 11, 2021 | Team Udayavani |

ರಬಕವಿ-ಬನಹಟ್ಟಿ: ದೇವದಾಸಿಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗಮನ ನೀಡಬೇಕು. ಸರ್ಕಾರ ದೇವದಾಸಿ ಮತ್ತು ದೇವದಾಸಿಯರ ಮಕ್ಕಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬರ ಬೆಳವಣಿಗೆ ಸಾಧ್ಯ ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧಿಧೀಶರಾದ ಕಿರಣಕುಮಾರ ವಡಗೇರಿತಿಳಿಸಿದರು.

Advertisement

ಅವರು ಶುಕ್ರವಾರ ಸ್ಥಳೀಯ ವಕೀಲರ ಸಭಾ ಭವನದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತವಾಗಿ ದೇವದಾಸಿ ಮಹಿಳೆಯರಿಗೆಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಾಗಲಕೋಟೆಯ ದೇವದಾಸಿಯ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಕೆ.ಕೆ.ದೇಸಾಯಿ ಮಾತನಾಡಿ, ಸರ್ಕಾರ ದೇವದಾಸಿ ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ದೇವದಾಸಿಯರು ಸ್ವಂತ ನಿವೇಶನ ಹೊಂದಿದ್ದರೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ 1,75,000 ರೂ.ಮತ್ತು ನಗರ ಪ್ರದೇಶದ ಮಹಿಳೆಯರಿಗೆ 2,00,000ರೂ.ಅನುದಾನ ನೀಡುತ್ತಿದೆ. ಸ್ವಯಂ ಉದ್ಯೋಗಕೈಗೊಳ್ಳುವ ಮಹಿಳೆಯರಿಗೆ ಸರ್ಕಾರ 30000ರೂ.ಧನ ಸಹಾಯವನ್ನು ನೀಡುತ್ತಿದೆ. ಇದುವರೆಗೆಜಿಲ್ಲೆಯ 5156 ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

45 ಮೇಲ್ಪಟ್ಟ ದೇವದಾಸಿ ಮಹಿಳೆಯರಿಗೆ ಸರ್ಕಾರ ಪ್ರತಿ ತಿಂಗಳು ರೂ.1500 ಮಾಸಾಶನವನ್ನು ನೀಡುತ್ತಿದೆ.ದೇವದಾಸಿ ಪದ್ದತಿಯ ನಿರ್ಮೂಲನೆಗಾಗಿ ಸರ್ಕಾರಅನೇಕ ಯೋಜನೆಗಳನ್ನು ಮಾಡಿದ್ದು ಇವುಗಳ  ಲಾಭವನ್ನು ದೇವದಾಸಿಯರು ಪಡೆದುಕೊಳ್ಳಬೇಕು ಎಂದು ಕೆ.ಕೆ.ದೇಸಾಯಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಯೋಜನಾ ಅನುಷ್ಠಾಧಿಕಾರಿ ಎಂ.ಬಿ.ಮಧರಖಂಡಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 7827 ಮತ್ತು ರಬಕವಿ ಬನಹಟ್ಟಿ ಹಾಗೂ ಜಮಖಂಡಿ ತಾಲ್ಲೂಕಿನಲ್ಲಿ 2503 ಜನ ದೇವದಾಸಿ ಮಹಿಳೆಯರು ಇದ್ದಾರೆ. ಇವರಲ್ಲಿ 4797 ಜನರು ಪ್ರತಿ ತಿಂಗಳು ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ ಎಂದರು.

Advertisement

ಕಾರ್ಯಕ್ರಮದಲ್ಲಿ ಕಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧಿಧೀಶರಾದ ಸುಷ್ಮಾ ಟಿ.ಸಿ. ಹಿರಿಯ ವಕೀಲ ಎಸ್‌.ವಿ.ಗೊಳಸಂಗಿ ಮಾತನಾಡಿದರು. ವಕೀಲರ ಸಂಘದಅಧ್ಯಕ್ಷ ಸಾಗರ ಕುಲಕರ್ಣಿ, ಎಪಿಪಿ ಮಹಾಂತೇಶಮಸಳಿ, ಈಶ್ವರಚಂದ್ರ ಭೂತಿ, ರಮೇಶ ಎಕ್ಸಂಬಿ,ರವೀಂದ್ರ ಕಾಮಗೊಂಡ, ಬಸವರಾಜ ಗುರುವ, ಮುಕುಂದ ಕೋಪರ್ಡೆ ಇದ್ದರು. ಪ್ರಿಯಾ ಭಟ್ಟಡ  ಸ್ವಾಗತಿಸಿದರು. ಅಶ್ವಿ‌ನಿ ಹಾರೂಗೇರಿ ನಿರೂಪಿಸಿದರು. ವಿಜಯಲಕ್ಷ್ಮೀ ಕೌಲಾಪುರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next