Advertisement

ಹೆಣದ ಮೆಲಿನ ರಾಜಕಾರಣ ಬಿಜೆಪಿ ಬಿಡಲಿ : ಭೀಮಣ್ಣ ನಾಯ್ಕ ಕಿಡಿ

02:55 PM Oct 05, 2022 | Team Udayavani |

ಶಿರಸಿ: ಹೆಣದ ಮೆಲಿನ ರಾಜಕಾರಣ ಮಾಡುವದನ್ನು ಬಿಜೆಪಿ ಮೊದಲು ಬಿಡಲಿ. ಜನರಲ್ಲಿ ಪ್ರಚೋದನೆ, ಕಿಚ್ಚು ಹಚ್ಚುವ ಕೆಲಸ‌ ಮಾಡಿದ ಜಿಲ್ಲೆಯ ಶಾಸಕರು ರಾಜೀ‌ನಾಮೆ‌ ನೀಡಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಭೀಮಣ್ಣ ನಾಯ್ಕ ಹೇಳಿದರು.

Advertisement

ಬುಧವಾರ ನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು‌ ಹೊನ್ನಾವರದ ಪರೇಶ ಮೇಸ್ತ ಸಾವಿನ ಹೆಸರು ಬಳಸಿ ಅಂದಿನ ಚುನಾವಣೆ ಗೆದ್ದ ಬಿಜೆಪಿ ಶಾಸಕರಿಗೆ ನೈತಿಕತೆ ಇಲ್ಲ. ಶಿರಸಿ ಗಲಭೆಯಲ್ಲಿ ಇಂದಿನ ವಿಧಾನ ಸಭಾ ಅಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಪಾಲ್ಗೊಂಡಿದ್ದು, ಸಿಬಿಐ ವರದಿ ಬಂದ ಬಳಿಕ ಪ್ರತಿಕ್ರಿಯೆ ಕೊಟ್ಟು ರಾಜೀನಾಮೆ‌ ನೀಡಬೇಕಿದೆ ಎಂದರು.

ಇದನ್ನೂ ಓದಿ : ಸೇನೆಯ ಚೀತಾ ಹೆಲಿಕಾಪ್ಟರ್ ಪತನ ; ಲೆಫ್ಟಿನೆಂಟ್ ಕರ್ನಲ್ ಹುತಾತ್ಮ

ಪರೇಶ ಮೇಸ್ತ ಸಾವಿನ ಬಳಿಕ ಅಂದು ಶಿರಸಿಯಲ್ಲಿ ನಡೆದ ಪ್ರಚೋದನಕಾರಿ ಸಭೆಯಲ್ಲಿ‌ ಕಾಗೇರಿ ಅವರೂ ಇದ್ದರು. ಹಲವರಿಗೆ ಕೇಸು ಬಿದ್ದವು.ಹಾನಿಯೂ ಆದವು. ಈಗ ಸಹಜ ಸಾವು ಎಂದು ಸಿಬಿಐ ವರದಿ ಬಂದಿದೆ. ಕಾಗೇರಿ ಅವರ ಉತ್ತರ ಏನು ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಕ್ಕೆ ಒಬ್ಬ ಯುವಕನ ಸಾವನ್ನು ಬಳಸಿಕೊಂಡಿದ್ದು ಸರಿಯಲ್ಲ. ಅಂದು ಈ‌ ಪ್ರಕರಣ ಬಳಸಿಕೊಂಡು ಆಯ್ಕೆ ಆದ ಜಿಲ್ಲೆಯ ಬಿಜೆಪಿ ಶಾಸಕರು ರಾಜೀನಾಮೆ ಕೊಟ್ಟು ಮರಳಿ‌ ಜನಾದೇಶ ಪಡೆಯಬೇಕಿದೆ. ಜೈ ಎಂದು ಪ್ರತಿಭಟನೆಯಲ್ಲಿ‌ ಪಾಲ್ಗೊಂಡ ಯುವಕರ‌ ಮೇಲೆ ಪ್ರಕರಣ ದಾಖಲಾಗಿದ್ದು, ಎಲ್ಲರ ‌ಮೇಲೂ ಪ್ರಕರಣ ವಾಪಸ್ ಆಗಿಲ್ಲ. ಉಳಿದವರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಅಂದು ಹಾನಿಯಾದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನೇತೃತ್ವ ವಹಿಸಿದವರು ಜವಬ್ದಾರರಾಗಬೇಕು ಎಂದರು.

Advertisement

ರಾಜ್ಯದಲ್ಲಿ ಸರಕಾರವೇ ಇಲ್ಲ. ಗುತ್ತಿಗೆದಾರರಿಗೆ ಹಣದ ಬಟವಡೆ ಇಲ್ಲ. ಶೇ.40ರ ಕಮಿಷನ್ ಸಹಕಾರ ಎಂದೇ ಹೆಸರು ಬಿದ್ದಿದೆ ಎಂದೂ ವಾಗ್ದಾಳಿ ನಡೆಸಿದ ಅವರು ಪರೇಶ‌ ಮೇಸ್ತ ಸಾವಿನ ಪ್ರಕರಣದ ಸಿಬಿಐ ವರದಿ ಕೋರ್ಟ್ ಗೆ ನೀಡಿದ ಬಳಿಕ ಜಿಲ್ಲೆಯಲ್ಲೂ ಗೊಂದಲ ಸೃಷ್ಟಿ ಆಗಿದೆ‌ ಎಂದರು.

ರಾಜಕೀಯ ಸ್ವಾರ್ಥಕ್ಕೆ ಕೋಮು‌ ಗಲಭೆ ಸಂದರ್ಭ ಸೃಷ್ಟಿಸಿದ್ದು ಅಕ್ಷಮ್ಯ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಾಗ್ರಹದ ಮೇರೆಗೆ ಪ್ರಕರಣ ಸಿಬಿಐಗೆ ವಹಿಸಿದ್ದಾರೆ. ಈಗಿ‌ನ ಬಿಜೆಪಿ ಸರಕಾರದ ಸಿಬಿಐ ವರದಿ ನೀಡಿದೆ ಎಂದ ಅವರು, ಜಿಲ್ಲೆಯಲ್ಲಿನ ಭಯದ ವಾತಾವರಣ ಕಳೆಯಬೇಕಿದೆ. ಇದಕ್ಕಾಗಿ ಹೊನ್ನಾವರದಲ್ಲಿ ಅ.7 ರಂದು 11 ಗಂಟೆಗೆ ನಡೆಯುವ ಜಾಗೃತಿ ಅಭಿಯಾನದಲ್ಲಿ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವೇಳೆ‌ ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಜಗದೀಶ ಗೌಡ, ಬಸವರಾಜ್ ದೊಡ್ಮನಿ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next