Advertisement

ಅಧಿಕಾರಿಗಳು ಸಮಸ್ಯೆಗೆ ಸಂದಿಸಲಿ; ನಾಗರಿಕರ ಒತ್ತಾಯ

05:03 PM Jun 15, 2022 | Team Udayavani |

ಆಳಂದ: ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Advertisement

ಬಿತ್ತನೆ ಹೊತ್ತಿನಲ್ಲಿ ರಸಗೊಬ್ಬರ ಸಿಗದೇ ರೈತರು ಕಂಗಾಲಾಗಿದ್ದು, ಈ ಸಮಯದಲ್ಲಿ ಆಡಳಿತ ಚುರುಕಾಗಿರಬೇಕೆಂದು ರೈತಪರ ಹೋರಾಟಗಾರ ರಮೇಶ ಲೋಹಾರ ಆಗ್ರಹಿಸಿದ್ದಾರೆ.

ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ತಾಪಂ, ಅಕ್ಷರ ದಾಸೋಹ, ಜಿಪಂ, ಜೆಸ್ಕಾಂ ಸಾಮಾಜಿಕ ಅರಣ್ಯ, ಸಮಾಜ ಕಲ್ಯಾಣ, ಕಂದಾಯ, ಆಹಾರ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ, ಉದ್ಯೋಗ ಇನ್ನಿತರೆ ಸರ್ಕಾರಿ ಸೌಲಭ್ಯಗಳಿಗೆ ಅಗತ್ಯವಾದ ಜಾತಿ, ಆದಾಯ ಪ್ರಮಾಣ ಪತ್ರ, 371ನೇ (ಜೆ), ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ತಲಾಟಿಗಳು ಸಿಗುತ್ತಿಲ್ಲ. ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದರೂ ಸಕಾಲಕ್ಕೆ ವಿಲೇವಾರಿ ಆಗುತ್ತಿಲ್ಲ ಎಂದು ಜನರು ದೂರಿದ್ದಾರೆ.

ವರ್ಷವಾದರೂ ಜಮೀನು ಅಳತೆಗೆ ಹಾಕಿದ ಅರ್ಜಿಗೆ ಸ್ಪಂದನೆ ದೊರೆಯುತ್ತಿಲ್ಲ ಎಂದು ಸಾವಳೇಶ್ವರದ ರೈತರೊಬ್ಬರು ಸರ್ವೇ ಅಧಿಕಾರಿಗಳ ವಿರುದ್ಧ ದೂರಿದ್ದಾರೆ.

Advertisement

ಕೃಷಿ ಇಲಾಖೆಗೆ ಸ್ಪಿಂಕ್ಲರ್‌ ಗಾಗಿ ಅರ್ಜಿ ಸಲ್ಲಿಸಿ ಎಡತಾಕಿದರೂ ಸೌಲಭ್ಯ ದೊರೆಯುತ್ತಿಲ್ಲ. ಅರ್ಜಿ ಸಲ್ಲಿಸಿ ವರ್ಷವಾದರೂ ಪೈಪ್‌-ಇನ್ನಿತರೆ ವಸ್ತುಗಳು ದೊರಕುತ್ತಿಲ್ಲ ಎಂದು ಸಾಲೇಗಾಂವ, ಖಜೂರಿ, ತೀರ್ಥ ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ. ಗ್ರಾಪಂಗಳಿಗೆ ಅಭಿವೃದ್ಧಿ ಅಧಿಕಾರಿಗಳು ಬರುತ್ತಿಲ್ಲ. ಕೆಲವರಿಗೆ ಎರಡ್ಮೂರು ಗ್ರಾಮಗಳ ಅಧಿಕಾರ ವಹಿಸಿದ್ದರಿಂದ ಅವರು ಪಟ್ಟಣದಲ್ಲೇ ಕುಳಿತು ಆಡಳಿತ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಗ್ರಾಪಂ ಆಡಳಿತ ಹಾಗೂ ಹಲವು ಇಲಾಖೆ ನಿಯಂತ್ರಣ ಕೈಗೊಳ್ಳುವ ತಾಪಂ ಕಾರ್ಯ ನಿರ್ವಹಣಾ ಅಧಿಕಾರಿ ವಿಲಾಸ್‌ರಾಜ್‌ ಆಡಳಿತ ಪರಿಸ್ಥಿತಿ ಕುರಿತು ಮಾಹಿತಿಗಾಗಿ ಹಲವು ಬಾರಿ ಮೊಬೈಲ್‌ನಿಂದ ಸಂಪರ್ಕಿಸಿದಾಗ, “ಸಭೆಯಲಿದ್ದೇನೆ’ ಎನ್ನುವ ಸಂದೇಶ ಬಂದಿದೆ.

ಆಡಳಿತ ಚುರುಕುಗೊಳಿಸಲು ತುರ್ತಾಗಿ ಸಭೆ ಕರೆದು ನೂನ್ಯತೆ ಸರಿಪಡಿಸುತ್ತೇನೆ. ಹಿಂದೆಯೂ ಸಭೆ ಕರೆದು ಜನರಿಗೆ ಸಕಾಲಕ್ಕೆ ಸರ್ಕಾರಿ ಸೌಲಭ್ಯ ಒದಗಿಸಬೇಕು. ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ ಮೇಲೆ ಸಾರ್ವಜನಿಕರನ್ನು ಓಡಾಡಿಸಬಾರದು ಎಂದು ತಾಕೀತು ಮಾಡಿದ್ದೇನೆ. ಯೋಜನೆಗಳ ಅನುಷ್ಠಾನಕ್ಕೆ ಹಿಂದೇಟು ಹಾಕಿ ಜನರಿಗೆ ಸ್ಪಂದಿಸದೇ ಕಚೇರಿಗೆ ಚಕ್ಕರ್‌ ಹಾಕಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. -ಸುಭಾಷ ಗುತ್ತೇದಾರ, ಶಾಸಕ

ಸದ್ಯ ನಾವಂತೂ ಕಚೇರಿಯಲ್ಲಿಯೇ ಇರುತ್ತೇವೆ. ಸಾರ್ವಜನಿಕರು ಅರ್ಜಿ ಸಲ್ಲಿಸಿದ 21ದಿನಗಳಲ್ಲಿ ಕಾರ್ಯ ಮಾಡಬೇಕಿದ್ದರೂ ಏಳು ದಿನಗಳಲ್ಲೇ ಮಾಡುತ್ತಿದ್ದೇವೆ. ರೈತರ ಭೂ ಸರ್ವೇ ವಿಳಂಬವಾಗುತ್ತಿರುವುದಕ್ಕೆ ಸರದಿ ಕಾರಣ. ಇದಕ್ಕೆ ಏನೂ ಮಾಡಲಾಗದು. ನಮ್ಮ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆ ಗಮನಕ್ಕೆ ಬಂದರೆ ಸರಿಪಡಿಸಲಾಗುವುದು. -ಯಲ್ಲಪ್ಪ ಸುಬೇದಾರ, ತಹಶೀಲ್ದಾರ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next