Advertisement

ಪ್ರತಿಭಾವಂತರು ಸಂಶೋಧನೆಗೆ ಆಕರ್ಷಿತರಾಗಲಿ

11:27 AM Jul 04, 2022 | Team Udayavani |

ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಪೂಜ್ಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಮೂರು ದಿನಗಳ “ಬಹುಶಿಸ್ತೀಯ ಸಂಶೋಧನೆಯಲ್ಲಿ ಇತ್ತೀಚಿನ ಆವಿಷ್ಕಾರಗಳು’ ಸಮ್ಮೇಳನ ಯಶಸ್ವಿಯಾಗಿ ನಡೆದು ರವಿವಾರ ತೆರೆ ಕಂಡಿತು.

Advertisement

ವಿಶ್ವವಿದ್ಯಾಲಯದ ಕುಲಸಚಿವ ಡಾ|ಅನಿಲ್‌ ಕುಮಾರ್‌ ಬಿಡವೆ ಅವರು ಸಮಾರೋಪ ಭಾಷಣ ಮಾಡಿ, ರಾಷ್ಟ್ರೀಯ ಈ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು 10 ರಿಂದ 12 ವಿಭಾಗಗಳಲ್ಲಿ 110ಕ್ಕೂ ಹೆಚ್ಚು ಅ ಧಿವೇಶನವನ್ನು ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರಗಳ ವಿದ್ವಾಂಸರಿಂದ 500ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಾಯಿತು. 150 ಪ್ರಬಂಧಗಳು ಗುಣಮಟ್ಟದಿಂದ ಕೂಡಿವೆ ಎಂದು ವಿವರಿಸಿದರು.

ಪೂಜ್ಯ ಡಾ| ಶರಣಬಸಪ್ಪ ಅಪ್ಪಾಜಿ ಮತ್ತು ಮಾತೋಶ್ರೀ ಡಾ| ದಾûಾಯಿಣಿ ಅವ್ವಾಜಿ ಮತ್ತು ಚಿ. ದೊಡ್ಡಪ್ಪ ಅಪ್ಪಾಜಿ ಮತ್ತು ಬಸವರಾಜ ದೇಶಮುಖರ ಮಾರ್ಗದರ್ಶನ ಮತ್ತು ಉಪಕುಲಪತಿ ಡಾ| ನಿರಂಜನ್‌ ವಿ ನಿಷ್ಠಿ ಆವರ ಪ್ರೋತ್ಸಾಹದಿಂದಾಗಿ ಇದು ಫಲಪ್ರದ ಸಮ್ಮೇಳನವಾಗಿ, ಶಿಕ್ಷಕರು, ಸಂಶೋಧನಾ ವಿದ್ವಾಂಸರು, ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಯಿತು. ಮುಂಬರುವ ನವೆಂಬರ್‌ ತಿಂಗಳಿನಲ್ಲಿ ಮತ್ತೊಂದು ಸಮ್ಮೇಳನಕ್ಕೆ ಇದು ಬಲವಾದ ಅಡಿಪಾಯ ನೀಡಿದೆ ಎಂದರು.

ದೇಶದ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ, ಐಐಟಿಯ ಖಾಸಗಿ ವಿಶ್ವವಿದ್ಯಾಲಯಗಳಿಂದ ಶ್ರೇಷ್ಠ ವಿದ್ವಾಂಸರು ಮತ್ತು ತಜ್ಞರು ತಮ್ಮ ಪ್ರಬಂಧಗಳನ್ನು ಮಂಡಿಸಿದರು. ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು ಸಂಶೋಧನಾ ಚಟುವಟಿಕೆಯಲ್ಲಿ ಭಾಗಿಯಾಗಬೇಕಿತ್ತು. ವಿದ್ಯಾರ್ಥಿಗಳಿಗೆ ಸಂಶೋಧನಾ ಅವಕಾಶಗಳನ್ನು ಒದಗಿಸದಿದ್ದರೆ, ಅವರನ್ನು ಪ್ರೋತ್ಸಾಹಿಸದಿದ್ದರೆ, ಅವರು ರಾಷ್ಟ್ರಕ್ಕೆ ಹೇಗೆ ಕೊಡುಗೆ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಪ್ರತಿಭಾವಂತರು ಸಂಶೋಧನೆಯತ್ತ ಆಕರ್ಷಿತರಾಗುವಂತೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಭಾಷಾ ವಿಷಯಗಳ ಡೀನ್‌ ಡಾ| ಎಸ್‌.ಜಿ ಡೊಳ್ಳೇಗೌಡರು ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ಡೀನ್‌ಗಳು, ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಣಿಜ್ಯ ಮಹಾವಿದ್ಯಾಲಯದ ದಶರಥ್‌ ಮೇತ್ರಿ, ರಿಜಿಸ್ಟ್ರಾರ್‌ (ಮೌಲ್ಯಮಾಪನ) ಡಾ|ಬಸವರಾಜ ಮಠಪತಿ, ಡಾ|ಶಿವದತ್ತ ಹೊನ್ನಳ್ಳಿ, ಡಾ|ಶಿವಕುಮಾರ್‌ ಜವಳಗಿ, ಡಾ| ಶ್ರೀಕಾಂತ ಪಾಟೀಲ, ಶಿವಕುಮಾರ್‌ ರಾಚೋಟಿ, ವಾಣಿಶ್ರೀ ಸಿ.ಟಿ. ನಾಗಬಸವಣ್ಣ ಗುರಗೋಳ, ಶರಣಬಸಪ್ಪ ಮಡಿವಾಳ ಉಪಸ್ಥಿತರಿದ್ದರು. ಶ್ರುತಿ ಪಾಟೀಲ ಸ್ವಾಗತಿಸಿದರು. ಶರಣಗೌಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next