Advertisement

ಗಾಯಾಳು ಎಲ್‌ಇಟಿ ಉಗ್ರನ ಸಾವು; ಪೊಲೀಸ್‌ ದೃಢೀಕರಣ

12:01 PM Feb 27, 2018 | Team Udayavani |

ಶ್ರೀನಗರ : ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಿನ್ನೆ ಭದ್ರತಾ ಪಡೆಗಳ ಗುಂಡೇಟಿಗೆ ಗಾಯಗೊಂಡಿದ್ದ ಪಾಕಿಸ್ಥಾನದ ಲಷ್ಕರ್‌ ಎ ತಯ್ಯಬ ಸಂಘಟನೆಯ ಉಗ್ರನೋರ್ವ ಇಂದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಬಂಡಿಪೋರಾ ಜಿಲ್ಲೆಯ ಹಜಾನ್‌ನ ಬಾನ್‌ ಮೋಲಾ ಗ್ರಾಮದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಿನ್ನೆ  ಗುಂಡಿನ ಕಾಳಗ ನಡೆದಿತ್ತು. ಗುಂಡಿನ ಕಾಳಗ ನಿಂತಾಗ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಆಗ ಯಾವುದೇ ಮೃತ ದೇಹ ಪತ್ತೆಯಾಗಿರಲಿಲ್ಲ.

ಆದರೆ ಆ ಬಳಿಕ ಗುಂಡೇಟಿನಿಂದ ಗಾಯಗೊಂಡಿದ್ದ ಎಲ್‌ಇಟಿ ಉಗ್ರ ಸತ್ತು ಬಿದ್ದಿರವುದು ಪತ್ತೆಯಾಯಿತು ಎಂದು ಪೊಲೀಸ್‌ ವಕ್ತಾರ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next