Advertisement

ಸಾಲಮನ್ನಾ ಅನುಷ್ಠಾನ ನಾನೇ ಪರಿಶೀಲಿಸುತ್ತೇನೆ

06:00 AM Nov 06, 2018 | Team Udayavani |

ಬೆಂಗಳೂರು: ಸಾಲ ಮನ್ನಾ ಯೋಜನೆಯ ಅನುಷ್ಟಾನದ ಪ್ರಗತಿಯನ್ನು ನಾನೇ ಖುದ್ದು ನಿರಂತರವಾಗಿ  ಪರಿಶೀಲಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು , ಸಾಲಮನ್ನಾ ವಿಚಾರದಲ್ಲಿ ಗೊಂದಲ ಅಥವಾ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಯೋಜನೆ ವ್ಯಾಪ್ತಿಗೆ ಬರುವ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ.

ಭೂ ದಾಖಲೆಗಳು ಮತ್ತು ಸರ್ವೇಕ್ಷಣಾ ಇಲಾಖೆಯ ಆಯುಕ್ತ ಮನೀಶ್‌ ಮೌದ್ಗಿಲ್‌ ನೇತೃತ್ವದ ತಂಡವು ಸಾಲಮನ್ನಾ ಯೋಜನೆ ಜಾರಿಗಾಗಿ ವಿಶೇಷ ತಂತ್ರಾಶ ರೂಪಿಸಿದ್ದು ಪಾರದರ್ಶಕವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಾಲ ಮನ್ನಾ ಯೋಜನೆಗೆ ಅರ್ಹತೆ ಪಡೆದ ರೈತರು ಯಾರೂ ಗಾಬರಿಯಾಗಬೇಕಿಲ್ಲ. ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕುಗಳು ಕೈಷಿ ಸಾಲ ಪಡೆದ ರೈತರ ಮಾಹಿತಿ ಒದಗಿಸಿದ್ದು ಈ ಮಾಹಿತಿಯನ್ನು ಸರ್ಕಾರ ಅಭಿವೃದ್ಧಪಡಿಸಿದ ತಂತ್ರಾಂಶದಲ್ಲಿ ಅಳವಡಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೊದಲಿಗೆ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಇಂದಿನಿಂದಲೇ ಸಾಲ ಮನ್ನಾ ಪ್ರಕ್ರಿಯೆ ಜಾರಿಯ ಪರಿಶೀಲನೆ ಪ್ರಾರಂಭವಾಗಿದೆ. ಈ ತಾಲೂಕುಗಳ ಬ್ಯಾಂಕುಗಳು ಶಾಖೆಗಳು ಮಾಹಿತಿ ಪರಿಸೀಲನೆ ಪೂರ್ಣಗೊಳಿಸಿದ ನಂತರ ನವೆಂಬರ್‌ 12 ರಿಂದ ರೈತರು ತಾವು ಸಾಲ ಪಡೆದ ಬ್ಯಾಂಕಿಗೆ ಭೇಟಿ  ನೀಡಿ ಆಧಾರ್‌ ಕಾರ್ಡ್‌ , ರೇಷನ್‌ ಕಾರ್ಡ್‌ ಮತ್ತು  ಎಷ್ಟು ಕೃಷಿ ಭೂಮಿ ಹೊಂದಲಾಗಿದೆ ಎಂಬುದರ ಮಾಹಿತಿ ನೀಡುವಂತೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.ಎರಡು ತಾಲೂಕುಗಳ ನಂತರ ರಾಜ್ಯದ ಇತರೆ ತಾಲೂಕುಗಳಲ್ಲೂ ಇದೇ ರೀತಿ ಪರಿಶೀಲನೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಸಹಕಾರಿ ಬ್ಯಾಂಕುಗಳಲ್ಲಿ  ಈಗಾಗಲೇ ಮಾಹಿತಿ ಪರಿಶೀಲನೆ ಪ್ರಕ್ರಿಯೆ  ಆರಂಭವಾಗಿದ್ದು, ನವೆಂಬರ್‌ ಅಂತ್ಯದೊಳಗೆ 6 ಸಾವಿರ ಶಾಖೆಗಳ 20 ಲಕಷ ರೈತರ ಮಾಹಿತಿ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು  ಈ ಯೋಜನೆಯ ಅನುಷ್ಟಾನಕ್ಕೆ ನೋಡಲ್‌ ಅಧಿಕಾರಿಗಳಾಗಿರುತ್ತಾಎರ.   ಯೋಜನೆ ಕುರಿತು ರೈತರ ಸಂದೇಹಗಳನ್ನು ಬಗೆಹರಿಸಲು ಶೀಘ್ರವೇ ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

ಖಾಸಗಿ ವಲಯದ ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ನೀಡುವ ಸಂಬಂಧ ರೈತರನ್ನು ಶೋಷಣೆಗೊಳಪಡಿಸಿದರೆ ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ  ಜಿಲ್ಲೆಯ ರೈತರಿಗೆ ಖಾಸಗಿ ಬ್ಯಾಂಕ್‌ ಬಂಧನದ ವಾರಂಟ್‌ ಕಳುಹಿಸಿರುವ ವಿಚಾರದಲ್ಲಿ ಕಾನೂನು ತಜ್ಞರಿಂದ ಮಾಹಿತಿ ಪಡೆಯಲಾಗಿದೆ. ರೈತರಿಗೆ ಕಿರುಕುಳ ಕೊಟ್ಟಿರುವುದಾದರೆ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next