Advertisement

ಅನಂತನಾಗ್: ಉಗ್ರರ ಅಡಗುತಾಣದ ಬಳಿ ಹೈಬ್ರಿಡ್ ಭಯೋತ್ಪಾದಕನ ಅಂತ್ಯ

05:06 PM Nov 20, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾನುವಾರ ಉಗ್ರರ ಅಡಗುತಾಣವನ್ನು ಗುರುತಿಸಲು ನಡೆಸಿದ ಕಾರ್ಯಾಚರಣೆಯಲ್ಲಿ ಪೋಲೀಸರು ಮತ್ತು ಭದ್ರತಾ ಪಡೆಗಳೊಂದಿಗೆ ಇದ್ದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಹೈಬ್ರಿಡ್ ಭಯೋತ್ಪಾದಕ ಅಂತ್ಯಗೊಂಡಿದ್ದಾನೆ.

Advertisement

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದ ಚೆಕಿ ದುಡೂ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಭದ್ರತಾ ಪಡೆಗಳು ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ  ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.

“ಶೋಧನಾ ತಂಡವು ಶಂಕಿತ ಅಡಗುತಾಣದ ಕಡೆಗೆ ತಲುಪಿದಾಗ, ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಕುಲ್ಗಾಮ್‌ನ ಎಲ್ಇಟಿ ಹೈಬ್ರಿಡ್ ಭಯೋತ್ಪಾದಕ ಸಜ್ಜದ್ ತಂತ್ರಾಯ್‌ ಗುರಿಯಾಗಿದ್ದಾನೆ. ಆತನನ್ನು ಎಸ್‌ಡಿಹೆಚ್ ಬಿಜ್‌ಬೆಹರಾಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವನು ಕೊನೆಯುಸಿರೆಳೆದಿದ್ದಾನೆ ಎಂದು ಘೋಷಿಸಿದ್ದಾರೆ ”ಎಂದು ಕಾಶ್ಮೀರ ವಲಯ ಪೊಲೀಸರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ನವೆಂಬರ್ 13 ರಂದು ಬಿಜ್‌ಬೆಹರಾದ ರಖ್ಮೋಮೆನ್‌ನಲ್ಲಿ ಸ್ಥಳೀಯರಲ್ಲದ ಕಾರ್ಮಿಕನನ್ನು ಗುರಿಯಾಗಿಸಿದ ಕೃತ್ಯದಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“ತನಿಖೆಯ ಸಮಯದಲ್ಲಿ ಹೈಬ್ರಿಡ್ ಭಯೋತ್ಪಾದಕ ಸಜ್ಜದ್ ತಂತ್ರಾಯ್ ಈ ಹಿಂದೆ ಎಲ್ಇಟಿಯ ಸಹಚರನಾಗಿದ್ದ ಮತ್ತು ಪಿಎಸ್ಎಯಿಂದ ಬಿಡುಗಡೆ ಹೊಂದಿದ್ದ ಅವರು ನವೆಂಬರ್ 13 ರಂದು ಅನಂತನಾಗ್‌ನ ಬಿಜ್‌ಬೆಹರಾ, ರಾಖ್‌ಮೊಮೆನ್‌ನಲ್ಲಿ ಇಬ್ಬರು ಹೊರಗಿನ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡಿದ್ದ.

Advertisement

ಮೂವರ ಬಂಧನ

ಶ್ರೀನಗರದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂವರು ಶಸ್ತ್ರಸಜ್ಜಿತ ಹೈಬ್ರಿಡ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿವೆ.

ಭದ್ರತಾ ಸಿಬಂದಿಗಳು ಶ್ರೀನಗರದ ಶಾಲ್ತೆಂಗ್‌ನಲ್ಲಿ ನಾಕಾ ತಪಾಸಣೆಯ ವೇಳೆ ಭಯೋತ್ಪಾದಕರನ್ನು ಬಂಧಿಸಿದ್ದಾರೆ ಮತ್ತು ಅವರ ವಾಹನದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಮಾಡ್ಯೂಲ್‌ನ ಇನ್ನಷ್ಟು ಭಯೋತ್ಪಾದಕ ಸಹಚರರನ್ನು ಬಂಧಿಸಲು ತನಿಖೆ ನಡೆಯುತ್ತಿದೆ. ಹೈಬ್ರಿಡ್ ಭಯೋತ್ಪಾದಕರು ಪಟ್ಟಿ ಮಾಡಲಾಗದ ಉಗ್ರರು, ಅವರು ಕೃತ್ಯ ಎಸಗಿದ ಬಳಿಕ ಯಾವುದೇ ಕುರುಹುಗಳನ್ನು ಸಿಗದಂತೆ ದಿನನಿತ್ಯದ ಜೀವನಕ್ಕೆ ಮರಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next